
ಕೋಟ:ಅಖಂಡವಾಗಿದ್ದ ಈ ಭರತಖಂಡವನ್ನು ತ್ರಿಖಂಡ ಮಾಡಿದ ಆಗಿನ ಕೆಲ ಅಹಿಂಸಾವಾದಿಗಳಿAದ ಸಮಸ್ಯೆ ಇಂದು ಎದುರಿಸುತ್ತಿದ್ದೇವೆ ಅಂತಹ ಅಖಂಡ ಭಾರತ ಮತ್ತೊಮ್ಮೆ ಒಂದುಗೂಡುವ ಲಕ್ಷಣಗಳು ಗೊಚಿರಿಸುತ್ತಿದೆ ಇದಕ್ಕೆ ಶ್ರೀ ರಾಮಮಂದಿರವೇ ಸಾಕ್ಷಿ ಎಂದು ವಾಗ್ಮಿ ಹಾರಿಕಾ ಮಂಜುನಾಥ್ ಹೇಳಿದರು.
ಕೋಟದಲ್ಲಿ ಭಾನುವಾರ ನಡೆದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಜನಜಾಗೃತಿ ಪಂಜಿನ ಮೆರವಣಿಗೆ ಹಾಗೂ ಸಭೆಯನ್ನು ಉದ್ದೇಶಿಸಿ ಮಾತನಾಡಿ ದೇಶಕ್ಕೆ ಅಹಿಂಸೆಯ ಮೂಲಕ ಮಾತ್ರ ಸ್ವಾತಂತ್ರ÷್ಯ ಬಂದಿದ್ದಲ್ಲ ಬದಲಾಗಿ ಕ್ರಾಂತಿಕಾರಿಗಳ ಜೀವ ಬಲಿದಾನದ ಮೂಲಕ ಸ್ವಾತಂತ್ರ÷್ಯ ಗಿಟ್ಟಿಸಿಕೊಂಡಿದ್ದೇವೆ.ಸ್ವಾತAತ್ರ÷್ಯ ಪೂರ್ವದಿಂದಲೂ ಹಿಂದುಗಳು ಸಾಕಷ್ಟು ಹಿಂಸೆಗಳನ್ನು ಅನುಭವಿಸುತ್ತಿದ್ದಾರೆ
ಆಗಿನ ಆ ಒಂದು ತಪ್ಪಿನಿಂದ ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಇದರ ಪರಿಣಾಮ ಇಂದು 9 ರಾಜ್ಯಗಳಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗಿದ್ದೇವೆ, ನಮ್ಮದೇಶದ ವಿವಿಧ ಭಾಗಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆದರೆ ಅದರ ಬಗ್ಗೆ ತಲೆಕೆಡಿಕೊಳ್ಳದೆ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ದಾಳಿನಡೆದಾಗ ಆಕ್ರೋಶ ಹೊರಬರುತ್ತದೆ ಹಾಗಾದರೆ ಎಂಥ ದುಸ್ಥಿತಿ ಈ ದೇಶಕ್ಕೆ ಬಂದೊದಗಿದೆ ಪ್ರಸ್ತುತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದೆ ಇದಕ್ಕೆಲ್ಲ ಹಿಂದೂ ಸಮಾಜ ತಕ್ಕ ಉತ್ತರ ನೀಡಬೇಕಿದೆ.ದೇಶ ವಿರೋಧಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾಗಿದೆ ಎಂದು ಗುಡುಗಿದರು.
ಸಭೆಯನ್ನು ಕೋಟದ ಉದ್ಯಮಿ ರಮೇಶ್ ಪ್ರಭು ಉದ್ಘಾಟಿಸಿದರು.

ಸಾಲಿಗ್ರಾಮ ಆಂಜನೇಯ ದೇಗುಲದಿಂದ ಹೊರಟ ಪಂಜಿನ ಮೆರವಣಿಗೆಯನ್ನು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪಂಜಿಗೆ ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಕೋಟ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಪವನ್ ಕುಂದರ್,ಸAಘಟನೆಯ ಜಿಲ್ಲಾ ಪ್ರಮುಖ ಚಂದ್ರ ಶಿರಿಯಾರ,ಕೋಟ ಘಟಕದ ಗೌರವಾಧ್ಯಕ್ಷ ಆನಂದ್ ಟೈಲರ್ ಮತ್ತಿತರರು ಇದ್ದರು. ಕೋಟ ಘಟಕದ ಸಂಚಾಲಕ ಕೀರ್ತೀಶ್ ಪೂಜಾರಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಮಂಜುನಾಥ್ ಆಚಾರ್ ನಿರೂಪಿಸಿ ವಂದಿಸಿದರು.
ಕೋಟದಲ್ಲಿ ಭಾನುವಾರ ನಡೆದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಜನಜಾಗೃತಿ ಪಂಜಿನ ಮೆರವಣಿಗೆ ಹಾಗೂ ಸಭೆಯನ್ನು ಉದ್ದೇಶಿಸಿ ವಾಗ್ಮಿ ಹಾರಿಕಾ ಮಂಜುನಾಥ್ ಮಾತನಾಡಿದರು. ಕೋಟ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಪವನ್ ಕುಂದರ್, ಸAಘಟನೆಯ ಜಿಲ್ಲಾ ಪ್ರಮುಖ ಚಂದ್ರ ಶಿರಿಯಾರ,ಕೋಟ ಘಟಕದ ಗೌರವಾಧ್ಯಕ್ಷ ಆನಂದ್ ಟೈಲರ್ ಮತ್ತಿತರರು ಇದ್ದರು.













Leave a Reply