
ಉಡುಪಿ, ಆ. 13: ಇಲ್ಲಿನ ಕೆಎಸ್ಸಾರ್ಟಿಸಿ ನರ್ಮ್ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ 32 ವರ್ಷಗಳಿಂದ ಮನೆಮಾತಾಗಿರುವ ಸ್ಮರಣಿಕಾ ಮೊಮೆಂಟೋ ಹಾಗೂ ಗಿಫ್ಟ್ ಸೆಂಟರ್ನಲ್ಲಿ ಸ್ವಾತಂತ್ರ್ಯ ಮಹೋತ್ಸವ ಹಾಗೂ ಸಂಸ್ಥೆಯ 32ನೇ ವಾರ್ಷಿಕೋತ್ಸವ ಪ್ರಯುಕ್ತ ಗಿಫ್ಟ್ ವಸ್ತುಗಳ ಪ್ರದರ್ಶನ, ಬೃಹತ್ ಮಾರಾಟ ಮೇಳ ಆಯೋಜಿಸಲಾಗಿದೆ.
ಸ್ವದೇಶಿ ನಿರ್ಮಿತ, ಎಲ್ಲ ಧರ್ಮಗಳ ಮೆಮೆಂಟೋಸ್, ಗಿಫ್ಟ್, ಬಂಟಿಂಗ್ಸ್, ಪರಿಸರಸ್ನೇಹಿ ಜೂಟ್ ಬ್ಯಾಗ್ ಗಳು ಮೊದಲಾದ ಸಾಮಗ್ರಿಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ.
ಅಪರೂಪದ ಗಿಫ್ಟ್ ಐಟಮ್ಸ್ ನೆನಪಿನ ಕಾಣಿಕೆ, ಮೊಮೆಂಟೋ ಸಹಿತ ಹಲವು ವಿಭಿನ್ನ ರೀತಿಯ ವಿಶಿಷ್ಟ ಉಡುಗೊರೆಗಳನ್ನು ಜನತೆಗೆ
32 ವರ್ಷಗಳ ಹಿಂದೆ ಪರಿಚಯಿಸಿದ ಸಂಸ್ಥೆ ಪ್ರಸ್ತುತ ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದಿದೆ. ಹಳೇ ಸಂಪ್ರದಾಯವನ್ನು ಅಳಿಸದೆ, ಹೊಸ ಸಂಪ್ರದಾಯಕ್ಕೆ ಒಗ್ಗಿಕೊಂಡು ಜನರ ಮನ-ಮನೆಗಳಲ್ಲಿನೆಲೆಯೂರಿರುವ ಸ್ಮರಣಿಕಾದ ‘ನೆನಪಿನ ಕಾಣಿಕೆ’ ತನ್ನದೇ ಆದ ಹೆಸರು ಗಳಿಸಿದೆ. ಇಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ
ಹ್ಯಾಂಡಿಕ್ರಾಫ್ಟ್ ಸ್ಪೋರ್ಟ್ಸ್, ಡೈರಿ. ಗಡಿಯಾರ, ಪೆನ್, ಪರ್ಸ್, ಕೀ ಜೈನ್ ಮೊದಲಾದ ವಸ್ತುಗಳ ಅಪಾರ ಸಂಗ್ರಹವಿದೆ. 32ನೇ ವಾರ್ಷಿಕೋತ್ಸವ ಪ್ರಯುಕ್ತ ಆ. 15ರಿಂದ 25ರ ವರೆಗೆ ಆಯ್ದ ಗಿಫ್ಟ್ ಐಟಂಗಳ ಮೇಲೆ ಶೇ. 32 ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುವುದು ಎಂದು ಸಂಸ್ಥೆಯ ಪ್ರವರ್ತಕ ದಿವಾಕರ ಸನಿಲ್ ತಿಳಿಸಿದ್ದಾರೆ.












Leave a Reply