ಕೋಟ: ಪಂಚವರ್ಣ ಸಂಸ್ಥೆ ಕೋಟ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಮಣೂರು ಇವರು ಕೊಡಮಾಡಿದ ಗಿಡಗಳನ್ನು ಗ್ರಾಮ ಪಂಚಾಯತ್ ಕೋಡಿ, ಶಿಶುಅಭಿವೃದ್ಧಿ ಯೋಜನೆ ಬ್ರಹ್ಮಾವರ ಹಾಗೂ ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ಇವರ ನೇತ್ರತ್ವದಲ್ಲಿ 10ನೇ ಭಾನುವಾರದ ಪರಿಸರ ಸ್ನೇಹಿ ಅಭಿಯಾನದ ಹಸಿರು ಜೀವ ಯೋಜನೆ ಮನೆಗೊಂದ್ದು ಗಿಡ ನೆಡುವ ಕಾರ್ಯಕ್ರಮವನ್ನು ಆ.11ರಂದು ಹೊಸಬೆಂಗ್ರೆ ಮೂರ್ತೆದಾರ ಸಂಘದ ಅಧ್ಯಕ್ಷ ಕೊರಗ ಪೂಜಾರಿ ಮನೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಹಾಗೂ ಸದಸ್ಯ ಕೃಷ್ಣ ಪೂಜಾರಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದೀಪಾ ಆರ್ ಖಾರ್ವಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್, ಸ್ಥಳೀಯರಾದ ಬೇಬಿ, ಸುಜಾತಾ ಆರ್ ಖಾರ್ವಿ, ನಾಗರತ್ನ, ಪ್ರೇಮ ಸುರೇಶ್ ಮತ್ತು ಆಶಾ.ಎಸ್ ಉಪಸ್ಥಿತರಿದ್ದರು.
ಕೋಡಿಯಲ್ಲಿ ಹಸಿರು ಜೀವ 10ನೇ ವಾರದ ಗಿಡ ನಡುವ ಕಾರ್ಯಕ್ರಮಕ್ಕೆ ಕೋಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾಖಾರ್ವಿ ಚಾಲನೆ ನೀಡಿದರು. ಸದಸ್ಯ ಕೃಷ್ಣ ಪೂಜಾರಿ, ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ದೀಪಾ ಆರ್ ಖಾರ್ವಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್ ಕುಂದರ್ ಮತ್ತಿತರರು ಇದ್ದರು.