• Mon. Sep 9th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕಾರ್ಕಡ-  ನ್ಯೂ ಕಾರ್ಕಡ ಶಾಲೆಯ ನಿವೃತ್ತ ಶಿಕ್ಷಕ ಕೆ. ನಾರಾಯಣ ಆಚಾರ್ಯ ಬೀಳ್ಕೊಡುಗೆ

ByKiran Poojary

Aug 14, 2024

ಕೋಟ: ಶಿಕ್ಷಣ ಸಂಸ್ಥೆಗಳ ಭೌತಿಕ ಮತ್ತು ಶೈಕ್ಷಣಿಕ ಪರಿಸರದ ಅಭಿವೃದ್ಧಿಯೊಂದಿಗೆ ಸಮರ್ಪಣಾ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಶಿಕ್ಷಕರೇ ಶಿಕ್ಷಣ ಸಂಸ್ಥೆಗಳ ಬಹುದೊಡ್ಡ ಆಸ್ತಿ. ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳು ಅಧ್ಯಯನ ಮಾಡುತ್ತಿರುವ ಈ ಶಾಲೆ ಆ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅದಕ್ಕಾಗಿ ಇಲ್ಲಿನ ಆಡಳಿತ ಮಂಡಳಿ ಮತ್ತು ಶಿಕ್ಷಕರನ್ನು ಅಭಿನಂದಿಸುತ್ತೇನೆ. 31 ವರ್ಷಗಳ ಸುದೀರ್ಘ ಸೇವೆಯಲ್ಲಿ ತ್ರಿಕರಣ ಪೂರ್ವಕವಾಗಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವ ಕೆ. ನಾರಾಯಣ ಆಚಾರ್ಯರ ಆದರ್ಶ ಎಲ್ಲ ಶಿಕ್ಷಕರಿಗೆ ಅನುಕರಣೀಯ. ಆದರ್ಶ ಶಿಕ್ಷಕರೇ ಶಿಕ್ಷಣ ಸಂಸ್ಥೆಗಳ ಬಹುದೊಡ್ಡ ಶಕ್ತಿಯಾಗಿದ್ದು ಅಂತಹ ಆದರ್ಶ ಶಿಕ್ಷಕರ ಜ್ಞಾನ ಶಿಕ್ಷಣ ಲೋಕಕ್ಕೆ  ಲಭಿಸುವಂಥಾಗಲಿ, ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ಹಾರೈಸಿದರು.

ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಿವೃತ್ತ ಶಿಕ್ಷಕ ಕೆ.ನಾರಾಯಣ ಆಚಾರ್ಯ ಇವರ ಬಿಳ್ಕೊಡುಗೆ  ಸಮಾರಂಭದಲ್ಲಿ ಮಾತನಾಡಿದರು.
ಇದೇ ವೇಳೆ  ನಿವೃತ್ತ ಶಿಕ್ಷಕ ನಾರಾಯಣ ಆಚಾರ್ಯರವರನ್ನು  ಆಡಳಿತ ಮಂಡಳಿ, ಶಿಕ್ಷಕ ವೃಂದ ಮತ್ತು ಊರವರ ಪರವಾಗಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಬ್ರಹ್ಮಾವರ ಹೋಬಳಿಯ ಶಿಕ್ಷಣ ಸಂಯೋಜಕ ಪ್ರಕಾಶ್ ಬಿ.ಬಿ., ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ ವಿಶ್ವೇಶ್ವರ ಹೊಳ್ಳ  ,ಶಿಶು ಕಲ್ಯಾಣ ಹಾಗೂ ವಿದ್ಯಾರಥ ಸಮಿತಿಯ ಅಧ್ಯಕ್ಷ  ಕೆ.ವಿಶ್ವನಾಥ ಹೊಳ್ಳ, ಪಟ್ಟಣ ಪಂಚಾಯತ್ ಸದಸ್ಯೆ  ಗಿರಿಜಾ ಶೇಖರ್ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ಶಂಭು ಭಟ್ಟ, ಶಾಲಾ ಸಂಚಾಲಕ ಜಯಾ ಪಿ. ಕಾಮತ್ ಉಪಸ್ಥಿತರಿದ್ದರು.  ಮುಖ್ಯ ಶಿಕ್ಷಕ ಎನ್ .ಪ್ರಭಾಕರ್ ಕಾಮತ್  ಸ್ವಾಗತಿಸಿದರು, ಶಿಕ್ಷಕರಾದ ಎನ್.ಸುಧೀರ್ ಕಾಮತ್ ನಿರೂಪಿಸಿದರು. ಬಿ.ಎನ್. ಸತ್ಯನಾರಾಯಣ ಧನ್ಯವಾದ ಸಮರ್ಪಿಸಿದರು.

ಕಾರ್ಕಡ ಹೊಸ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಿವೃತ್ತ ಶಿಕ್ಷಕ ಕೆ.ನಾರಾಯಣ ಆಚಾರ್ಯ ಇವರ ಬಿಳ್ಕೊಡುಗೆ ನೀಡಿ ಗೌರವಿಸಲಾಯಿತು. ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಂಜುಮ್ ,ಶಿಶು ಕಲ್ಯಾಣ ಹಾಗೂ ವಿದ್ಯಾರಥ ಸಮಿತಿಯ ಅಧ್ಯಕ್ಷ  ಕೆ.ವಿಶ್ವನಾಥ ಹೊಳ್ಳ, ಪಟ್ಟಣ ಪಂಚಾಯತ್ ಸದಸ್ಯೆ  ಗಿರಿಜಾ ಶೇಖರ್ ಪೂಜಾರಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ  ಶಂಭು ಭಟ್ಟಮತ್ತಿತರರು ಇದ್ದರು.

Leave a Reply

Your email address will not be published. Required fields are marked *