Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ ಜಿಲ್ಲಾಡಳಿತದ ನಿರ್ದೇಶನದ ಸ್ವಚ್ಛ ಕಡಲ ಕಿನಾರೆ ಅಭಿಯಾನ
ಸ್ವಚ್ಛತೆಯ ಪ್ರತಿಯೊಬ್ಬರ ಧ್ಯೇಯವಾಗಬೇಕು- ಯೋಗೀಶ್ ಕುಮಾರ್

ಕೋಟ: ಸ್ವಚ್ಛತಾ ಆಂದೋಲನ ಪ್ರತಿಯೊಂದು ಮನೆ ಮನದಲ್ಲಿ ಆರಂಭಗೊAಡಾಗ ದೇಶದಲ್ಲಿ ಸ್ವಚ್ಛತೆಯ ಧ್ಯೇಯ ಮೊಳಗುತ್ತದೆ ಎಂದು ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಇದರ ಪ್ರಭಂಧಕ ಯೋಗೀಶ್ ಕುಮಾರ್ ಹೇಳಿದರು.

ಗುರುವಾರ ಉಡುಪಿ ಜಿಲ್ಲಾಡಳಿತದ ನಿರ್ದೇಶನದ ಮೆರೆಗೆ ಕೋಟದ ಪಂಚವರ್ಣ ಯುವಕ ಮಂಡಲ ,ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ,ಕೋಟ ಗ್ರಾಮಪಂಚಾಯತ್, ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಕೋಟ ಇವರ ಆಶ್ರಯದಲ್ಲಿ ನವೋದಯ ಫ್ರೆಂಡ್ಸ್ ಹರ್ತಟ್ಟು, ಜೆಸಿಐ ಸಿನಿಯರ್ ಕೋಟ,ತೋಳಾರ್ ಓಷಿಯನ್ ಪ್ರಾಡೆಕ್ಟ್ ಪಡುಕರೆ ಇವರ ಸಹಯೋಗದೊಂದಿಗೆ ಸ್ವಚ್ಛ ಕಡಲ ಕಿನಾರೆ ಅಭಿಯಾನದಡಿ ಕೋಟದ ಮಣೂರು  ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ  ಪರಿಸರದ ಬಗ್ಗೆ ನಿರ್ಲಕ್ಯಿ÷್ಷÃಯ ಧೋರಣೆ ಬಿಟ್ಟು ಅದರ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಅನುಷ್ಠಾನಗೊಳಿಸಬೇಕು ಆಗ ಪರಿಸರ ಉಳಿಸಲು ಸಾಧ್ಯ ಪಂಚವರ್ಣದ ಈ ಸ್ವಚ್ಛತಾ ಆಂದೋಲ ಮಹತ್ತರ ಮೈಲಿಗಲ್ಲು ತಲುಪುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಣೂರು ಪಡುಕರೆ ಬೀಚ್ ಗಳಲ್ಲಿರು ಸಾಕಷ್ಟು ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು.
ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಕಾರ್ಯದರ್ಶಿ ಶೇಖರ್ ಮರವಂತೆ,ಸದಸ್ಯರಾದ ಶೇಖರ್ ಗಿಳಿಯಾರ್,ಶಾರದ ಆರ್ ಕಾಂಚನ್,ಪAಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಸಂಸ್ಥೆಯ ಪದಾಧಿಕಾರಿಗಳು ,ಪಂಚಾಯತ್ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು.ಕಾರ್ಯಾಧ್ಯಕ್ಷ ರವೀಂದ್ರ ಕೋಟ ವಂದಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲ ,ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ,ಕೋಟ ಗ್ರಾಮಪಂಚಾಯತ್, ಘನ ಹಾಗೂ ದ್ರವ ತ್ಯಾಜ್ಯ ನಿರ್ವಹಣಾ ಘಟಕ ಕೋಟ ಇವರ ಆಶ್ರಯದಲ್ಲಿ ಸ್ವಚ್ಛ ಕಡಲ ಕಿನಾರೆ ಅಭಿಯಾನದಡಿ ಕೋಟದ ಮಣೂರು  ಬೀಚ್ ಸ್ವಚ್ಛತಾ ಕಾರ್ಯಕ್ರಮಕ್ಕೆ ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಇದರ ಪ್ರಭಂಧಕ ಯೋಗೀಶ್ ಕುಮಾರ್ ಚಾಲನೆ ನೀಡಿದರು. ಕೋಟ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ,ಕಾರ್ಯದರ್ಶಿ ಶೇಖರ್ ಮರವಂತೆ,ಸದಸ್ಯರಾದ ಶೇಖರ್ ಗಿಳಿಯಾರ್,ಶಾರದ ಆರ್ ಕಾಂಚನ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *