
ಕೋಟ: ಇಂದು ನಾವುಗಳು ಸ್ವಾತಂತ್ರೊ÷್ಯÃತ್ಸವನ್ನು ಸಡಗರದಿಂದ ಆಚರಿಸುವುದಕ್ಕೆ ಕ್ರಾಂತಿಕಾರಿಗಳ ಬಲಿದಾನವೇ ಕಾರಣ ಅಂತಹ ಮಹಾನ್ ಪುರುಷರ ನೆನಪಿಸುತ್ತಾ ಜಾತಿ ಮತ ಭೇದಗಳನ್ನು ಮರೆತು ಸಂಭ್ರಮಿಸೋಣ ಎಂದು ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕೋಟದ ಜಾಮೀಯಾ ಮಸೀದಿಯಲ್ಲಿ 78ನೇ ಸ್ವಾತಂತ್ರೊ÷್ಯÃತ್ಸವ ಧ್ವಜಾರೋಹಣ ನೆರವೆರಿಸಿ ಮಾತನಾಡಿ ಪ್ರತಿಯೊಬ್ಬ ಭಾರತೀಯ ದೇಶ ಮೊದಲು ದೇಶಕ್ಕಾಗಿ ನಾವೆನು ಕೊಡಬಹುದು ಎಂಬ ಚಿಂತನೆ ಪ್ರತಿಯೊಬ್ಬನಲ್ಲೂ ನೆಲೆಯೂರಿದಾಗ ದೇಶ ವಿಶ್ವಮಟ್ಟದಲ್ಲಿ ಬಹು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಸೀದಿಯ ಧರ್ಮಗುರುಗಳು,ವಿದ್ಯಾರ್ಥಿಗಳು ಸಮುದಾಯ ಭಾಂಧವರು ಉಪಸ್ಥಿತರಿದ್ದರು.
ಈ ವೇಳೆ ಜಿಲ್ಲೆಯ ಪ್ರಸಿದ್ಧ ಉದ್ಯಮಿ ಕೋಟ ಇಬ್ರಾಹಿಂ ಸಾಹೇಬ್ ಸಂದೇಶ ನುಡಿಗೈದರು ಕೋಟ ಜಾಮೀಯಾ ಮಸೀದಿ ಉಪಾಧ್ಯಾಕ್ಷ ವಾಹಿದ್ ಆಲಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಮಸೀದಿಯ ಕಾರ್ಯದರ್ಶಿ ಬಷೀರ್ ನಿರೂಪಿಸಿ ವಂದಿಸಿದರು.
ಕೋಟದ ಜಾಮೀಯಾ ಮಸೀದಿಯಲ್ಲಿ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ 78ನೇ ಸ್ವಾತಂತ್ರೊ÷್ಯÃತ್ಸವ ಧ್ವಜಾರೋಹಣ ನೆರವೆರಿಸಿದರು. ಪ್ರಸಿದ್ಧ ಉದ್ಯಮಿ ಕೋಟ ಇಬ್ರಾಹಿಂ ಸಾಹೇಬ್, ಕೋಟ ಜಾಮೀಯಾ ಮಸೀದಿ ಉಪಾಧ್ಯಾಕ್ಷ ವಾಹಿದ್ ಆಲಿ ಮತ್ತಿತರರು ಇದ್ದರು.













Leave a Reply