ಕೋಟ: ಕೋಟದ ರೈತಧ್ವನಿ ಸಂಘ ಇದರ ನೇತೃತ್ವದಲ್ಲಿ ಕುಂದಾಪುರ ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ ಇವರ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಇವರನ್ನು, ಮಣೂರು, ತೆಕ್ಕಟ್ಟೆ, ಗಿಳಿಯಾರು, ಚಿತ್ರಪಾಡಿ, ಕಾರ್ಕಡ ಭಾಗದ ರೈತರು ಭೇಟಿಯಾಗಿ ನೆರೆ ಸಮಸ್ಯೆ,ಬೆಳೆ ಹಾನಿ ಬಗ್ಗೆ ಮನವಿ ನೀಡಿದರು. ಸಮಸ್ಯೆ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ಸಚಿವರು ಸೆಪ್ಟೆಂಬರ್ ಮೊದಲ ವಾರದಲ್ಲಿ ಬೆಂಗಳೂರಿಗೆ ಬರುವಂತೆ ಅಹ್ವಾನ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ, ಜಯರಾಮ್ ಶೆಟ್ಟಿ, ಟಿ.ಮಂಜುನಾಥ್ ಗಿಳಿಯಾರ್, ಮಣೂರು ಭಾಸ್ಕರ್ ಶೆಟ್ಟಿ,ಹರ್ತಟ್ಟು ತಿಮ್ಮ ಕಾಂಚನ್,ಮಹೇಶ್ ಶೆಟ್ಟಿ, ಜಿ.ತಿಮ್ಮ ಪೂಜಾರಿ ,ನಾಗರಾಜ ಗಾಣಿಗ ಸಾಲಿಗ್ರಾಮ , ರಮೇಶ್ ಮೆಂಡನ್,ಸುಭಾಷ್ ಶೆಟ್ಟಿ,ಶ್ರೀಧರ ಪಿ ಎಸ್,ಶರಣ್ಯಯ್ಯ ಹಿರೇಮಠ್ ಮುಂತಾದವರು ಉಪಸ್ಥಿತರಿದ್ದರು.
ಕೋಟ ಹೋಬಳಿ ಭಾಗದ ನೆರೆ ಹಾನಿ ಹೊಳೆ ಹೂಳೆತ್ತುವಂತೆ ಕೋಟ ರೈತಧ್ವನಿ ಸಂಘಟನೆಯಿAದ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷಿ÷್ಮ ಹೆಬ್ಬಾಳ್ಕರ್ ಭೇಟಿ ಮಾಡಿದರು. ರೈತ ಸಂಘದ, ಜಯರಾಮ್ ಶೆಟ್ಟಿ, ಟಿ.ಮಂಜುನಾಥ್ ಗಿಳಿಯಾರ್, ಮಣೂರು ಭಾಸ್ಕರ್ ಶೆಟ್ಟಿ,ಹರ್ತಟ್ಟು ತಿಮ್ಮ ಕಾಂಚನ್ ಮತ್ತಿತರರು ಇದ್ದರು.