Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ : 24 ಗಂಟೆ ಕಾಲ ತುರ್ತು ಚಿಕಿತ್ಸೆಯನ್ನು ಹೊರತು ಪಡಿಸಿ ಇತರ ಸೇವೆಗಳು ಲಭ್ಯವಿಲ್ಲ, ಕ್ಲಿನಿಕ್ ಹಾಗೂ ಆಸ್ಪತ್ರೆ ಬಂದ್

ಇತ್ತೀಚೆಗೆ  ಕೊಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಹಾಗು ನಂತರದ ಹಿಂಸೆಯನ್ನು ವಿರೋಧಿಸಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ 17/08/24ರ ಶನಿವಾರ ಬೆಳಿಗ್ಗೆ 6ರಿಂದ 18/08/24ರ  ರವಿವಾರ ಬೆಳಿಗ್ಗೆ 6ರ ತನಕ ತುರ್ತು ಸೇವೆ ಹೊರತು ಪಡಿಸಿ ಇತರ ಸೇವೆಗಳನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದೆ. 

ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಸದಸ್ಯರು 24 ತಾಸುಗಳ ಕಾಲ ತುರ್ತು ಚಿಕಿತ್ಸೆಯನ್ನು ಹೊರತು ಪಡಿಸಿ ಇತರ ಸೇವೆಗಳಿಗಾಗಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆ ಮುಚ್ಚಲಿದ್ದಾರೆ ಎಂದು ಈ ಮೂಲಕ  ನಿಮಗೆ ತಿಳಿಯ ಪಡಿಸುತ್ತಿದೇವೆ.

ಜೊತೆಗೆ  ಇತ್ತೀಚಿನ ಕಲ್ಕತ್ತಾ ಘಟನೆಯನ್ನು ಖಂಡಿಸಿ, ಜನ ಸಾಮಾನ್ಯರಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಸುರಕ್ಷತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಆಗಸ್ಟ್ 17ರ ಸಂಜೆ ಮೌನ ಮೆರವಣಿಗೆ ನಡೆಸಲಿದೆ. ಈ ಮೆರವಣಿಗೆ ಸಂಜೆ 6 ರಿಂದ 7ರ ವರೆಗೆ ಬೋರ್ಡ್ ಹೈಸ್ಕೂಲ್ ಉಡುಪಿಯ ಬಳಿಯಿಂದ ಜೋಡು ಕಟ್ಟೆಯ ತನಕ ಸಾಗಲಿದೆ.

Leave a Reply

Your email address will not be published. Required fields are marked *