
ಹೆಬ್ರಿ ತಾಲೂಕು ಇದ್ದರೂ ಸ್ಕ್ಯಾನಿಂಗ್ ಸೆಂಟರ್ ಕೊರತೆ ಎದ್ದು ಕಾಣುತ್ತಿದೆ ಹೆಬ್ರಿ ಗ್ರಾಮದಲ್ಲಿ 10 ಕ್ಕೂ ಅಧಿಕ ಖಾಸಗಿ ಕ್ಲಿನಿಕ್‌ಗಳು, ಲ್ಯಾಬ್‌ಗಳು, ಸಮುದಾಯ ಆರೋಗ್ಯ ಕೇಂದ್ರ, 1 ಖಾಸಗಿ ಆಸ್ಪತ್ರೆಗಳು ಹೆಬ್ರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇಷ್ಟು ವ್ಯವಸ್ಥೆ ಇದ್ದರೂ ಸಹ ರೋಗಿಗಳಿಗೆ ವೈಧ್ಯರು ಒಂದು ಸ್ಕ್ಯಾನಿಂಗ್ ಮಾಡಲಿಕ್ಕೆ ಹೇಳಿದರೆ ರೋಗಿಗಳಿಗೆ ಹೆಬ್ರಿಯಿಂದ ಕಾರ್ಕಳಕ್ಕೆ ಅಥವಾ ಬ್ರಹ್ಮಾವರ, ಉಡುಪಿ, ಮಣಿಪಾಲ ಆಸ್ಪತ್ರೆಗೆ ಹೋಗಿ ಸ್ಕ್ಯಾನಿಂಗ್ ಮಾಡಿಕೊಂಡು ಬರಬೇಕಾಗುತ್ತದೆ.
ಹೆಬ್ರಿ ಗ್ರಾಮzಲ್ಲಿರುವ ಸಬ್ ಸೆಂಟರ್‌ಗಳು ಈ ಕೆಳಗಿನಂತಿವೆ. :
ಹೆಬ್ರಿ, ಚಾರಾ, ಶಿವಪುರ, ಕುಚ್ಚೂರು, ಬೇಳಂಜೆ, ಸೋಮೇಶ್ವರ, ಸೀತಾನದಿ, ಮುದ್ರಾಡಿ, ಇಲ್ಲಿ ಬೇರೆ ಬೇರೆ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆಗಾಗಿ ಬಂದರೆ ಅವರಿಗೆ ಬೇರೆ ಊರಿಗೆ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಹೆಬ್ರಿ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ವಾಸವಾಗಿರುತ್ತಾರೆ. ಹೆಬ್ರಿ ಗ್ರಾಮವು ಬೇರೆ ಎಲ್ಲಾ ಅಗತ್ಯ ಜನರಿಗೆ ಸಿಕ್ಕಿದರೂ ಸಹ ಆರೋಗ್ಯ ವಿಚಾರಕ್ಕೆ ನೋಡಿದಾಗ ಇಲ್ಲಿ ಸ್ಕ್ಯಾನಿಂಗ್ ಮೇಷಿನ್ ಮಾತ್ರ ಜನರಿಗೆ ಸರಿಯಾಗಿ ಸಿಗುತ್ತಿಲ್ಲ. ಬೇರೆ ಊರಿಗೆ ಹೋಗುವಾಗ ಸಮಯ ಮತ್ತು ಹಣ ಎಲ್ಲಾ ವ್ಯರ್ಥ ಆಗುತ್ತದೆ.
ಹೆಬ್ರಿ ಗ್ರಾಮದ ಮತ್ತು ಆಸುಪಾಸಿನ ಗ್ರಾಮದ ಬಾಣಂತಿಯರಿಗೆ ಪರೀಕ್ಷೆಗಳಿಗೆ ಹೋದಾಗ ವೈಧ್ಯರು ಸ್ಕ್ಯಾನಿಂಗ್ ಪರೀಕ್ಷೆ ಹೇಳಿದರೆ ಗರ್ಬೀಣಿ ಮಹಿಳೆಯರಿಗೆ ಉಡುಪಿ, ಕಾರ್ಕಳ, ಮಣಿಪಾಲ ಆಸ್ಪತ್ರೆಗೆ ತೆರಳಿ ಸ್ಕ್ಯಾನಿಂಗ್ ಮಾಡಿಕೊಳ್ಳಬೇಕಾಗುತ್ತದೆ. ಬೇರೆ ಆಸ್ಪತ್ರೆಗಳಿಗೆ ಹೋಗುವಾಗ ಕೆಲವು ಊರುಗಳಲ್ಲಿ ರಸ್ತೆಗಳ ಹೊಂಡಗುಂಡಿಯಲ್ಲಿ ಪ್ರಯಾಣಿಸುವಾಗ ರೋಗಿಗಳಿಗೆ ಒಂದು ಖಾಯಿಲೆಯ ಜೊತೆಗೆ ಇನ್ನೊಂದು ರೋಗ ( ಬೆನ್ನು ಮತ್ತು ಕೈಕಾಲು ನೋವು) ಉಂಟಾಗುವ ಸಾಧ್ಯತೆ ಜಾಸ್ತಿ. ಇನ್ನಾದರೂ ಜನಪ್ರತಿನಿಧಿಗಳು, ಸಚಿವರು ಇತ್ತಕಡೆ ಗಮನ ಹರಿಸಿ ಜನರಿಗೆ ಅನುಕೂಲವಾಗುವಂತೆ ಹೆಬ್ರಿ ಗ್ರಾಮಕ್ಕೆ ಅತಿ ಅಗತ್ಯವಾದ ಸ್ಕ್ಯಾನಿಂಗ್ ಸೆಂಟರ್, ಡಯಾಲಿಸಿಸ್, ಸುಸಜ್ಜಿತ ಆಸ್ಪತ್ರೆಯ ಗುಣಮಟ್ಟವನ್ನು ಮೇಲ್ದರ್ಜೆಗೆ ತರಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿರುತ್ತದೆ.













Leave a Reply