Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕೋಟ ಜನತಾ ಸಮೂಹ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ  ಸಂಭ್ರಮ,ಸನ್ಮಾನ ಕಾರ್ಯಕ್ರಮ


ಕೋಟ: ಇಲ್ಲಿನ ಕೋಟ ಜನತಾ ಸಮೂಹ ಸಂಸ್ಥೆಯ ಮುಖ್ಯ ಆಡಳಿತ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯ  ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕರಾದ  ಆನಂದ ಸಿ ಕುಂದರ್ ಅವರು ಧ್ವಜಾರೋಹಣ ಗ್ಯೆದರು.
ನಂತರ ಸಭಾ ಕಾರ್ಯಕ್ರಮದಲ್ಲಿ ಕೆ.ಇ.ಬಿ ಲ್ಯೆನಮ್ಯಾನ ,ಭಾರತೀಯ ಸೇನೆಯ ನಿವೃತ್ತ ಯೋಧ ಯೋಗೀಶ ಕಾಂಚನ್ ಅವರನ್ನು ಗುರುತಿಸಿ ಗೌರವಿಸಲಾಯಿತು.

ಗೀತಾನಂದ ಪೌಂಡೇಶನ್ ವತಿಯಿಂದ ವಾರಂತ್ಯದಲ್ಲಿ ಗಿಡ ನೆಡುವ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀನಿವಾಸ ಅವರ ನೇತೃತ್ವದ ತಂಡ ,ಸಂಸ್ಥೆಯ ವತಿಯಿಂದ ನಡೆಸಲ್ಪಡುವ ಜನತಾ ಪ್ರೊಪೆಷನಲ್ಲ ಎಂಪ್ಲಾಯಿ ಕೋರ್ಸ್ ಅನ್ನು ಮುಗಿಸಿದವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ಜನತಾ ಪರಿವಾರದ ಸದಸ್ಯರಾದ ಗೀತಾ ಎ ಕುಂದರ್, ಅಶೋಕ್ ಕುಂದರ್, ದಿವ್ಯಲಕ್ಮೀ ಪ್ರಶಾಂತ್ ಕುಂದರ್, ಮತ್ತು ಸಂಸ್ಥೆಯ ಮುಖ್ಯ ಮಾನವ ಸಂಪನ್ಮೂಲಾಧಿಕಾರಿ ಎಮ್ ಎಸ್ ಕೃಷ್ಣ ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಧಾನೇಶ್ ಜೀವಾನಿ, ಎಜಿಎಮ್ ಶ್ರೀನಿವಾಸ್ ಕುಂದರ್ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿ. ಸಂಸ್ಥೆಯ ವ್ಯವಸ್ಥಾಪಕಾರದ ಮಿಥುನ್ ಕುಮಾರ್ ವಂದಿಸಿದರು.

ಕೋಟ ಜನತಾ ಸಮೂಹ ಸಂಸ್ಥೆಯ ಮುಖ್ಯ ಆಡಳಿತ ಕಛೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನವನ್ನು ಸಂಭ್ರಮದಲ್ಲಿ ,ಭಾರತೀಯ ಸೇನೆಯ ನಿವೃತ್ತ ಯೋಧ ಯೋಗೀಶ ಕಾಂಚನ್ ಅವರನ್ನು ಗುರುತಿಸಿ ಗೌರವಿಸಲಾಯಿತು. ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕರಾದ  ಆನಂದ ಸಿ ಕುಂದರ್, ಸಂಸ್ಥೆಯ ನಿರ್ದೇಶಕರಾದ ರಕ್ಷಿತ್ ಕುಂದರ್, ಜನತಾ ಪರಿವಾರದ ಸದಸ್ಯರಾದ ಗೀತಾ ಎ ಕುಂದರ್, ಅಶೋಕ್ ಕುಂದರ್, ದಿವ್ಯಲಕ್ಮೀ ಪ್ರಶಾಂತ್ ಕುಂದರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *