
ಕೋಟ:ಮಕ್ಕಳ ಭೌತಿಕ ಬೆಳವಣಿಗೆಗೆ ಸ್ಪರ್ಧಾ ಕಾರ್ಯಕ್ರಮ ಸಹಕಾರಿ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಹೇಳಿದರು.
ಭಾನುವಾರ ಸಾಲಿಗ್ರಾಮ ದೇಗುಲದ ಕೂಟ ಬಂಧು ಭವನ ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ
ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ, ಇವರ ನೇತೃತ್ವದಲ್ಲಿ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ, ದಿ. ಇಂದಿರ ಮದ್ಯಸ್ಥ ಇವರ ಸ್ಮರಣಾರ್ಥ ಇವರ ಮಕ್ಕಳು, ಪಾರಂಪಳ್ಳಿ,ಶ್ರೀ ಕೃಷ್ಣ ಇಂಡಸ್ಟಿçಯಲ್ ಕೋ-ಆಪರೇಟಿವ್ ಸೊಸೈಟಿ, ಉಡುಪಿ, ಗೆಳೆಯರ ಬಳಗ ಕಾರ್ಕಡ, ಸಾಲಿಗ್ರಾಮ, ಎ.ಪಿ. ಅಡಿಗ ಅಸೋಸಿಯೇಟ್ಸ್, ಉಳ್ಳೂರು, ವಿಪ್ರ ಮಹಿಳಾ ಬಳಗ, ಸಾಲಿಗ್ರಾಮ, ಇವರ ಸಂಯುಕ್ತ ಆಶ್ರಯದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸ್ಪರ್ಧಾ ಜಗತ್ತು ಸೃಷ್ಠಿ ಮಕ್ಕಳ ಆರಂಭ ದಿನಗಳಲ್ಲಿಕಾಣಬೇಕು ಈ ಮೂಲಕ ಮುಂದಿನ ಸಾಧನೆಗೆ ಸುಲಭ ದಾರಿಕಾಣಲು ಸಾಧ್ಯ ,ಪೋಷಕರು ಮಕ್ಕಳ ಬಗ್ಗೆ ನಿರ್ಲಕ್ಷಿ÷್ಯÃಯ ಮನೋಭಾವನೆ ಬಿಟ್ಟು ಇಂಥಹ ಕಾರ್ಯಕ್ರಮಗಳ ಮೂಲಕ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭೆಯ ಅಧ್ಯಕ್ಷತೆಯನ್ನು ಯುವವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ ವಹಿಸಿದ್ದರು.
ಇದೇ ವೇಳೆ ಸ್ಪರ್ಧೆಯಲ್ಲಿನ ಭಾಗವಹಿಸಿದ ಪುಟಾಣಿಗಳಿಗೆ ಪ್ರಶಂಸನಾ ಪತ್ರ ನೀಡಲಾಯಿತು. ಮುಖ್ಯ ಅಭ್ಯಾಗತರಾಗಿ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸ0ಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ಹಿರಿಯ ಕೃಷಿಕ ಪಾರಂಪಳ್ಳಿ ರಘು ಮಧ್ಯಸ್ಥ, ಎ.ಪಿ ಅಡಿಗ ಅಸೋಸಿಯೇಟ್ಸ್ ಉಳ್ತೂರು ಇದರ ಗಣೇಶ್ ಅಡಿಗ ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಪಿ ವೈ ಹೇರ್ಳೆ ಸ್ವಾಗತಿಸಿದರೆ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಸಂಚಾಲಕಿ ವನೀತಾ ಉಪಾಧ್ಯಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮುದ್ದುಕೃಷ್ಣ ಸ್ಪರ್ಧೆಯು ಮೂರು ವಿಭಾಗದಲ್ಲಿ 2 ವರ್ಷ, 2-4 ಮತ್ತು 4-6 ವರ್ಷದೊಳಗಿನ ಮಕ್ಕಳು ಸ್ಪರ್ಧೆಯಲ್ಲಿ ಹೆಚ್ಚು ಭಾಗವಹಿಸಿದ್ದರು. ಪ್ರತಿ ವಿಭಾಗಕ್ಕೂ ಪ್ರಥಮ, ದ್ವಿತೀಯ ಮತ್ತು ತೃತೀಯ ಪ್ರಶಸ್ತಿಯ ಜತೆ ಉಚಿತ ಪ್ರವೇಶ ನೀಡಲಾಗಿದ್ದು ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.ತೀರ್ಪುಗಾರರಾಗಿ ಅಮೃತಾ ಉಪಾಧ್ಯಾ, ಸುಹಾಸ್ ಕಡಬ,ಶುಭ ಭಾಗವತ್ ಭಾಗವಹಿಸಿದ್ದರು.
ಸಾಲಿಗ್ರಾಮ ದೇಗುಲದ ಕೂಟ ಬಂಧು ಭವನ ಶ್ರೀ ಗುರುನರಸಿಂಹ ದೇವಸ್ಥಾನ, ಸಾಲಿಗ್ರಾಮ
ಇವರ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆ, ಇವರ ನೇತೃತ್ವದಲ್ಲಿ ಮುದ್ದು ಕೃಷ್ಣ ಸ್ಪರ್ಧೆ ಕಾರ್ಯಕ್ರಮವನ್ನು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ ಎಸ್ ಕಾರಂತ್ ಉದ್ಘಾಟಿಸಿದರು. ಯುವವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸoಸ್ಥೆ ಅಧ್ಯಕ್ಷ ಶ್ರೀಪತಿ ಅಧಿಕಾರಿ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಹಿರಿಯ ಕೃಷಿಕ ಪಾರಂಪಳ್ಳಿ ರಘು ಮಧ್ಯಸ್ಥ, ಎ.ಪಿ ಅಡಿಗ ಅಸೋಸಿಯೇಟ್ಸ್ ಉಳ್ತೂರು ಇದರ ಗಣೇಶ್ ಅಡಿಗ ಮತ್ತಿತರರು ಉಪಸ್ಥಿತರಿದ್ದರು.













Leave a Reply