
ಕೋಟ: ನಿವೇದಿತ ಪ್ರೌಢಶಾಲೆ ಬಸ್ರೂರು ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕುಸ್ತಿ ಪಂದ್ಯಾಟದಲ್ಲಿ ಕೆಪಿಎಸ್ ಪ್ರೌಢಶಾಲೆ ಕೋಟೇಶ್ವರ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದು 14ರ ವಯೋಮಾನ 35 ಕೆಜಿ ವಿಭಾಗದಲ್ಲಿ ಗೌತಮ್ ಪ್ರಥಮ ಮತ್ತು ರಾಜ್ಯಮಟ್ಟಕ್ಕೆ ಆಯ್ಕೆ 41.ಕೆಜಿ ವಿಭಾಗದಲ್ಲಿ ಸಮರ್ಥ್ ದ್ವಿತೀಯ 58 ಕೆಜಿ ವಿಭಾಗದಲ್ಲಿ ಸೌಜನ್ಯ ದ್ವಿತೀಯ 17ರ ವಯೋಮಾನದಲ್ಲಿ 40 ಕೆಜಿ ವಿಭಾಗದಲ್ಲಿ ವಿಶ್ರುತಾ ದ್ವಿತೀಯ 43 ಕೆಜಿ ವಿಭಾಗದಲ್ಲಿ ವೈಷ್ಣವಿ ದ್ವಿತೀಯ 56 ಕೆಜಿ ವಿಭಾಗದಲ್ಲಿ ಪ್ರತಿಕ್ಷ ತೃತೀಯ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಒಟ್ಟು 1 ಚಿನ್ನ 4 ಬೆಳ್ಳಿ 1 ಕಂಚಿನ ಪದಕ ಪಡೆಯುವುದರ ಮೂಲಕ ಉತ್ತಮ ಸಾಧನೆ ಮಾಡಿರುತ್ತಾರೆ ಸಂಸ್ಥೆಯ ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ತರಬೇತಿ ನೀಡಿದ್ದು ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ.ಎಂ ಮಾರ್ಗದರ್ಶನ ಮಾಡಿರುತ್ತಾರೆ.













Leave a Reply