
ಕೋಟ: ಸಂಗೀತದ ಯಾವುದೇ ಪ್ರಕಾರವಿರಲಿ, ಅದು ಯಾವತ್ತಿಗೂ ಮನಸ್ಸಿಗೆ ಆಹ್ಲಾದಕರವಾಗಿದ್ದು, ವೇಣು ಅಥವಾ ಕೊಳಲು ವಾದನವು ಕೂಡ ಅದರ ಸಾಲಿಗೆ ಸೇರುವ ಪ್ರಕಾರವೆಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಅಭಿಪ್ರಾಯಪಟ್ಟಿದ್ದಾರೆ.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದಲ್ಲಿ ದ್ವಿತೀಯ ಶ್ರಾವಣ ದಿನದ ಅಂಗವಾಗಿ ದೇವಳದ ಸ್ವಾಗತ ಅಂಕಣದಲ್ಲಿ ಬೆಂಗಳೂರಿನ ವೇಣುವಾದಕ ಶ್ರೀ ವೈದಿಕ ರಾವ್ ಅವರು ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಬೆಂಗಳೂರಿನ ವೇಣುವಾದಕ ಶ್ರೀ ವೈದಿಕ ರಾವ್ ಮತ್ತು ಹಿಮ್ಮೇಳದಲ್ಲಿ ಸಹಕರಿಸಿದ ಸುಧೀರ್ ಆಪ್ಟೆ ( ಮೃದಂಗ) ಹಾಗೂ ಸೀತಾರಾಮ ಗೋಪೀನಾಥ (ವಾಯಲಿನ್) ರನ್ನು ಪ್ರಸಾದ ಸಹಿತ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ದೇಗುಲದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ , ಕೂಟ ಮಹಾ ಜಗತ್ತಿನ ಪೂರ್ವ ಉಪಾಧ್ಯಕ್ಷ ತಾರಾನಾಥ ಹೊಳ್ಳ ಮತ್ತು ದೇವಳದ ಸಹಾಯಕ ಪ್ರಬಂಧಕ ಪಾಂಡೇಶ್ವರ ಗಣೇಶ ಭಟ್ಟ ಉಪಸ್ಥಿತರಿದ್ದರು.
ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದಲ್ಲಿ ದ್ವಿತೀಯ ಶ್ರಾವಣ ದಿನದ ಅಂಗವಾಗಿ ದೇವಳದಲ್ಲಿ ಬೆಂಗಳೂರಿನ ವೇಣುವಾದಕ ಶ್ರೀ ವೈದಿಕ ರಾವ್ ತಂಡವನ್ನು ಅಭಿನಂದಿಸಲಾಯಿತು. ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ದೇಗುಲದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ , ಕೂಟ ಮಹಾ ಜಗತ್ತಿನ ಪೂರ್ವ ಉಪಾಧ್ಯಕ್ಷ ತಾರಾನಾಥ ಹೊಳ್ಳ ಮತ್ತಿತರರು ಇದ್ದರು.













Leave a Reply