Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸ್ವಾತಂತ್ರ್ಯ ದಿನಾಚರಣೆ ಮತ್ತು ರೈತ ಸನ್ಮಾನ ಕಾರ್ಯಕ್ರಮ

ಕೋಟ:  ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ, ಇದರ ಗಿಳಿಯಾರು ಶಾಖೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮತ್ತು ರೈತ ಸನ್ಮಾನ ಕಾರ್ಯಕ್ರಮವು ಇತ್ತೀಚಿಗೆ ಜರಗಿತು.ಸಂಘದ ಅಧ್ಯಕ್ಷ ಡಾ| ಕೃಷ್ಣ ಕಾಂಚನ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ನಿವೃತ್ತ ಮುಖ್ಯೋಪಾಧ್ಯಾಯ ಭೋಜು ಶೆಟ್ಟಿ ಇವರು ಧ್ವಜಾರೋಹಣಗೈದರು. ಸಂಘದ ನಿಕಟಪೂರ್ವ ಅಧ್ಯಕ್ಷ  ಜಿ. ತಿಮ್ಮ ಪೂಜಾರಿ, ನಿರ್ದೇಶಕರಾದ  ಅಚ್ಯುತ ಪೂಜಾರಿ, ರಶ್ಮಿತಾ, ಹೊನ್ನಾರಿ ದೇವಸ್ಥಾನದ ಮೊಕ್ತೇಸರರಾದ ಮಹಾಬಲ ಹೇರ್ಳೆ ಮತ್ತು ಮೂಡುಗಿಳಿಯಾರು ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಯೋಗೇಂದ್ರ ಉಪಸ್ಥಿತರಿದ್ದರು. 

ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕರಾದ  ಶೇಷ ಮಯ್ಯ,  ಮಂಜುನಾಥ ಹೊಳ್ಳ, ಜಿ. ಭಾಸ್ಕರ ಶೆಟ್ಟಿ,  ಶೇಖರ ಪೂಜಾರಿ,  ಗೋಪಾಲ ಶೆಟ್ಟಿ,  ಕಮಲ ದೇವಾಡಿಗ,  ನಾಗರತ್ನ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ  ಟಿ. ಮಂಜುನಾಥ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಇವರು ಧನ್ಯವಾದ ಸಮರ್ಪಿಸಿದರು.

ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ, ಇದರ ಗಿಳಿಯಾರು ಶಾಖೆಯಲ್ಲಿ 78ನೇ ಸ್ವಾತಂತ್ರ÷್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರಗತಿಪರ ಕೃಷಿಕರಾದ  ಶೇಷ ಮಯ್ಯ,  ಮಂಜುನಾಥ ಹೊಳ್ಳ, ಜಿ. ಭಾಸ್ಕರ ಶೆಟ್ಟಿ,  ಶೇಖರ ಪೂಜಾರಿ,  ಗೋಪಾಲ ಶೆಟ್ಟಿ,  ಕಮಲ ದೇವಾಡಿಗ,  ನಾಗರತ್ನ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


Leave a Reply

Your email address will not be published. Required fields are marked *