
ಕೋಟ: ಇಲ್ಲಿನ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ 100 ವಿದ್ಯಾರ್ಥಿಗಳಿಗೆ ನಾಡೋಜ ಡಾ. ಜಿ. ಶಂಕರ್ ಅವರ ಸಹಕಾರದಲ್ಲಿ 94,000.00 ಮೌಲ್ಯದ 2 ಜೊತೆ ಸಮವಸ್ತ್ರ ವಿತರಣೆ ಇತ್ತೀಚಿಗೆ ಶಾಲೆಯಲ್ಲಿ ವಿತರಿಸಲಾಯಿತು.
ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ನಾಡೋಜ ಡಾ. ಜಿ ಶಂಕರ್ ಅವರ ಪ್ರತಿನಿಧಿಯಾಗಿ ಆಪ್ತ ಕಾರ್ಯದರ್ಶಿ ಸತೀಶ್ ಅಮೀನ್ ಅವರು ಭಾಗವಹಿಸಿದ್ದರು.ಹಾಗೂ ಇದೇ ಸಂದರ್ಭದಲ್ಲಿ ಸತೀಶ್ ಅಮೀನ್ ಅವರು ಶಾಲಾಭಿವೃದ್ಧಿಗೆ ವೈಯಕ್ತಿಕ ನೆಲೆಯಲ್ಲಿ 25 ಸಾವಿರ ರೂಪಾಯಿ ಧನ ಸಹಾಯವನ್ನು ನೀಡುವ ಭರವಸೆ ನೀಡಿದರು. ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ದೊರಕಿಸುವಲ್ಲಿ ಶಾಲೆಯ ಸುರಕ್ಷಾ ಸಮಿತಿ ಅಧ್ಯಕ್ಷ ರವೀಶ್ ಶ್ರೀಯಾನ್ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕರ ಸಂಘದ ಅಧ್ಯಕ್ಷ ರವಿ ಪೂಜಾರಿ, ಸುರಕ್ಷಾ ಸಮಿತಿಯ ಅಧ್ಯಕ್ಷ ರವೀಶ್ ಶ್ರೀಯಾನ್, ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಕೃಷ್ಣ ಪೂಜಾರಿ ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಸುರೇಶ ಪೂಜಾರಿ ವಂದನಾರ್ಪಣೆಗೈದರು.
ಪಾಂಡೇಶ್ವರ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ನಾಡೋಜ ಡಾ. ಜಿ ಶಂಕರ್ ಅವರ ಕೊಡುಗೆಯಾಗಿ ನೀಡಿದ್ದು ಅದನ್ನು ಅವರ ಆಪ್ತ ಕಾರ್ಯದರ್ಶಿ ಸತೀಶ್ ಅಮೀನ್ ವಿದ್ಯಾರ್ಥಿಗಳಿಗೆ ಹಸ್ತಾಂತರಿಸಿದರು.













Leave a Reply