Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ವಾರ್ಷಿಕ ಸಭೆ
ಹೈನುಗಾರಿಕೆ ಕ್ಷೇತ್ರದ ಮೂಲಕಸ್ವಾವಲಂಬಿ ಬದುಕು –  ವಿಸ್ತರ್ಣಾಧಿಕಾರಿ ಸರಸ್ವತಿ

ಕೋಟ: ಹೈನುಗಾರಿಕೆ ಕ್ಷೇತ್ರದ ಮೂಲಕ ಸ್ವಾವಲಂಬಿ ಬದಕು ಸಾಧ್ಯ  ಎಂದು ಕೆ.ಎಂ ಎಫ್ ವಿಸ್ತರ್ಣಾಧಿಕಾರಿ ಸ್ವರಸ್ವತಿ ನುಡಿದರು.

ಗುರುವಾರ  ಸಂಘದ ಕಛೇರಿಯಲ್ಲಿ ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ 2023-24 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ  ಮಾತನಾಡಿ ಕೃಷಿ ಕಾಯಕದ ಜತೆ ಹೈನುಗಾರಿಕೆ ಮಂಚೂಣಿಗೆ ನಿಲ್ಲುತ್ತಿದೆ.ಪ್ರಸ್ತುತ ಗ್ರಾಮೀಣ ಭಾಗದಲ್ಲಿ  ಹೈನುಗಾರಿಕೆ ಅವಲಂಬಿತವಾಗಿದ್ದು ಜೀವನೋಪಾಯ ಕಟ್ಟಿಕೊಳ್ಳಲು ಸಾಧ್ಯ ಎಂಬುವುದನ್ನು ಹೈನುಗಾರರು ಸಾಬೀತು ಪಡಿಸಿದ್ದಾರೆ ಎಂದರಲ್ಲದೆ ಹೈನುಗಾರರಿಗೆ ಒಕ್ಕೂಟದಿಂದ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷೆ ಶಾಂತ.ಎಸ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಘವು ವರದಿ ವರ್ಷದಲ್ಲಿ 254970.35 ಲಾಭಗಳಿಸಿದ್ದು ಉತ್ಪಾದಕರಿಗೆ121812.08 ಬೋನಸ್ ನೀಡಿದ್ದು ಶೇಕಡ 20 ಡಿವಿಡೆಂಟ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಸದಸ್ಯರಿಗೆ ಬಹುಮಾನ ನೀಡಿ  ಗೌರವಿಸಲಾಯಿತು. ಇದೇ ವೇಳೆ ಸಕ್ರಿಯ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಜೋಡಿತ್ ಪಿ ಕಾರ್ಡು ಸ್ವಾಗತಿಸಿ, ಸಂಘದ ಸಿಇಓ ಶಾಮಲಾ ವರದಿ ವಾಚಿಸಿದರು. ಸಿಬ್ಬಂದಿ  ಸುಜಾತ ಧನ್ಯವಾದ ಸಮರ್ಪಿಸಿದರು.

ಪಾಂಡೇಶ್ವರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ 2023-24 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಸಂಘದ ಕಛೇರಿಯಲ್ಲಿ ಜರಗಿತು. ಕೆ.ಎಂ ಎಫ್ ವಿಸ್ತರ್ಣಾಧಿಕಾರಿ ಸ್ವರಸ್ವತಿ, ಸಂಘದ ಅಧ್ಯಕ್ಷೆ ಶಾಂತ.ಎಸ್.ಭಟ್, ಸಂಘದ ಉಪಾಧ್ಯಕ್ಷೆ ಜೋಡಿತ್ ಪಿ ಕಾರ್ಡು ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *