
ಕೋಟ: ಸಾಸ್ತಾನ ಶಿಶು ಮಂದಿರದ ಆಶ್ರಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಸಾಸ್ತಾನ ಮಹಿಳಾ ಮಂಡಲದ ಕಛೇರಿಯಲ್ಲಿ ಮಹಿಳಾ ಮಂಡಲದ ಸದಸ್ಯರೊಂದಿಗೆ ಇತ್ತೀಚಿಗೆ ಆಚರಿಸಿಕೊಂಡರು.ಹಂಗಾರಕಟ್ಟೆ ರೋಟರಿ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಸ್ತಾನ ಶಿಶು ಮಂದಿರ ಸಮಿತಿಯ ಕೋಶಾಧಿಕಾರಿ ಋಷಿರಾಜ್ ರಕ್ಷಾ ಬಂಧನದ ಮಹತ್ವದ ಕುರಿತು ಮಾತನ್ನಾಡಿದರು.
ಶಿಶು ಮಂದಿರದ ಕಾರ್ಯದರ್ಶಿಯಾದ ಅಕ್ಷತಾ ಪ್ರಭಾಕರ್ ಅಡಿಗ ಮಾತನಾಡಿ ಮನೆಯೇ ಮೊದಲ ಪಾಠ ಶಾಲೆ. ಸಂಸ್ಕöÈತಿ, ಸಂಸ್ಕಾರ, ಸಂಬAಧಗಳ ಬೇರು ಗಟ್ಟಿಗೊಳಿಸುವಲ್ಲಿ ಮನೆಯವರೆಲ್ಲರ ಪಾತ್ರ ಬಹು ಮಹತ್ವದ್ದು ಎಂಬುದನ್ನು ಮನದಟ್ಟು ಮಾಡಿದರು. ಮಾತಾಜಿ ಶೋಭಾ ರವರು ರಕ್ಷಾಗೀತೆಯನ್ನು ಮೊಳಗಿಸಿ , ರಕ್ಷಾ ಬಂಧನದ ಶುಭಾಶಯ ಕೋರಿದರು. ಇದೇ ವೇಳೆ ಒಬ್ಬರಿಗೊಬ್ಬರು ಪರಸ್ಪರ ರಾಖಿ ಕಟ್ಟಿಸಿಕೊಂಡು,ಸಿಹಿ ಹಂಚಿ ಸಂಭ್ರಮಿಸಿದರು. ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ಸಭೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ವಿಮಲಾ ವಂದಿಸಿದರು.ಮಹಿಳಾ ಮಂಡಲದ ಕಾರ್ಯದರ್ಶಿ ಜ್ಞಾನೇಶ್ವರಿ ಉಡುಪ ಕಾರ್ಯಕ್ರಮವನ್ನು ನಿರೂಪಿಸಿದರು.
ಸಾಸ್ತಾನ ಶಿಶು ಮಂದಿರದ ಆಶ್ರಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಸಾಸ್ತಾನ ಮಹಿಳಾ ಮಂಡಲದ ಕಛೇರಿಯಲ್ಲಿ ಮಹಿಳಾ ಮಂಡಲದ ಸದಸ್ಯರೊಂದಿಗೆ ಇತ್ತೀಚಿಗೆ ಆಚರಿಸಿಕೊಂಡರು. ಸಾಸ್ತಾನ ಶಿಶು ಮಂದಿರ ಸಮಿತಿಯ ಕೋಶಾಧಿಕಾರಿ ಋಷಿರಾಜ್, ಶಿಶು ಮಂದಿರದ ಕಾರ್ಯದರ್ಶಿಯಾದ ಅಕ್ಷತಾ ಪ್ರಭಾಕರ್ ಅಡಿಗ, ಸಾಸ್ತಾನ ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ಇದ್ದರು.













Leave a Reply