Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಮಣೂರು ದೇಗುಲದಿಂದ ಅಷ್ಟಮಿ ಪ್ರಯುಕ್ತ ಶ್ರೀ ಕೃಷ್ಣ ಸ್ಪರ್ಧೆ
ಮಣೂರು- ಶ್ರೀ ಕೃಷ್ಣ ಸ್ಪರ್ಧೆ ಮಕ್ಕಳ ಧಾರ್ಮಿಕ ಚಿಂತನೆಗೆ ಸಹಕಾರಿ – ಸತೀಶ್ ಹೆಚ್ ಕುಂದರ್

ಕೋಟ: ಶ್ರೀ ಕೃಷ್ಣ ಸ್ಪರ್ಧೆಗಳು ಮಕ್ಕಳಲ್ಲಿ ಧಾರ್ಮಿಕ ಚಿಂತನೆ ಬೆಳೆಯಲು ಸಹಕಾರಿ ಎಂದು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು.
ಕೋಟದ ಮಣೂರು ಮಹಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ  ಮಣೂರು ಶ್ರೀ ಮಹಾಲಿಂಗೇಶ್ವರ  ದೇಗುಲದ ಆಶ್ರಯದಲ್ಲಿ ಶ್ರೀ ರಾಮಪ್ರಸಾದ ಅಂಗವಾಡಿ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಶ್ರೀ ಕೃಷ್ಣ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ  ಮಕ್ಕಳಲ್ಲಿ ಕ್ರೀಯಾಶೀಲತೆಗೆ ಇಂಥಹ ಕಾರ್ಯಕ್ರಮಗಳು ವೇದಿಕೆಯನ್ನು ಕಲ್ಪಿಸುತ್ತದೆ ಎಂದು ತಮ್ಮ ಆಶಯವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಸ್ಪರ್ಧಾ ಪುಟಾಣಿಗಳು ಭಾಗವಹಿಸಿದ್ದರು.
ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ.ವಿ. ಮಯ್ಯ,ಸಾಂಸ್ಕöÈತಿಕ ಚಿಂತಕಿ ಪ್ರತಿಭಾ ಎಸ್ ಕುಂದರ್, ನಮೃತಾ ಪೈ,ಕೋಟದ ಪಂಚವರ್ಣದ ಸದಸ್ಯ ದಿನೇಶ್ ಆಚಾರ್,ದೇಗುಲದ ಟ್ರಸ್ಟಿ ದಿವ್ಯ ಪ್ರಭು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷಿ÷್ಮÃ ನಿರೂಪಿಸಿದರೆ,ಶ್ರೀ ರಾಮಪ್ರಸಾದ ಅಂಗನವಾಡಿ ಕಾರ್ಯಕರ್ತೆ ನಿರ್ಮಲ ಉರಾಖ ವಂದಿಸಿದರು

ಕೋಟದ ಮಣೂರು ಮಹಾಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ  ಮಣೂರು ಶ್ರೀ ಮಹಾಲಿಂಗೇಶ್ವರ  ದೇಗುಲದ ಆಶ್ರಯದಲ್ಲಿ ಶ್ರೀ ರಾಮಪ್ರಸಾದ ಅಂಗವಾಡಿ ನೇತೃತ್ವದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುದ್ದು ಶ್ರೀ ಕೃಷ್ಣ ಸ್ಪರ್ಧಾ ಕಾರ್ಯಕ್ರಮವನ್ನು ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ.ವಿ. ಮಯ್ಯ,ಸಾಂಸ್ಕöÈತಿಕ ಚಿಂತಕಿ ಪ್ರತಿಭಾ ಎಸ್ ಕುಂದರ್, ನಮೃತಾ ಪೈ,ಕೋಟದ ಪಂಚವರ್ಣದ ಸದಸ್ಯ ದಿನೇಶ್ ಆಚಾರ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *