
ಕೋಟ: ತೆಕ್ಕಟ್ಟೆ ರೋಟರಿ ಕ್ಲಬ್ನ ವಾರದ ಸಭೆಯಲ್ಲಿ ತೆಕ್ಕಟ್ಟೆಯ ಪರಿಸರದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಶವ ಸಂಸ್ಕಾರ ದಂಥ ಪುಣ್ಯಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ತೆಕ್ಕಟ್ಟೆಯ ಹರಿಶ್ವಂದ್ರ ಎಂಬ ಬಿರುದು ಪಡೆದಿರುವ ಉಗ್ರಾಣಿ ಚಂದ್ರ ದೇವಾಡಿಗ ಮೇಲ್ಗುಡ್ಡೆಮನೆ ಮತ್ತು ಕೃಷ್ಣಾನಂದ ನಾಯಕ್ರನ್ನು ತೆಕ್ಕಟ್ಟೆಯ ರೋಟರಿ ಕ್ಲಬ್ ವತಿಯಿಂದ ಸಂಮ್ಮಾನಿಸಿ ಗೌರವಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್ ವಹಿಸಿದ್ದರು.
ಸಭೆಗೆ ವಿಶೇಷ ಅತಿಥಿಯಾಗಿ ನಿವೃತ್ತ ಅಧಿಕಾರಿ ಲಕ್ಷ್ಮೀನಾರಾಯಣ ವೈದ್ಯ ತನ್ನ ವಯಕ್ತಿಕ ನೆಲೆಯಲ್ಲಿಯೂ ಸನ್ಮಾನಿತರಿಗೆ ಶಾಲು ಹೊದಿಸಿ ಗೌರವಿಸಿ ಸನ್ಮಾನಿತರ ಗುಣಗಾನ ಮಾಡಿದರು.
ಸಭೆಯಲ್ಲಿ ಕ್ಲಬ್ನ ಪಿ.ಹೆಚ್.ಎಫ್ಗಳಾದ ಜಗದೀಶ್, ಸುರೇಶ್ ಬೇಳೂರು ,ಕ್ಲಬ್ನ ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ , ರಮೇಶ್ ಭಂಡಾರಿ ,ವಿಠಲರಾವ್, ವಿಜಯಕುಮಾರ್ , ಸದಾಶಿವಶೆಟ್ಟಿ , ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕೃಷ್ಣ ಮೊಗವೀರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ತೆಕ್ಕಟ್ಟೆ ರೋಟರಿ ಕ್ಲಬ್ನ ವಾರದ ಸಭೆಯಲ್ಲಿ ಉಗ್ರಾಣಿ ಚಂದ್ರ ದೇವಾಡಿಗ ಮೇಲ್ಗುಡ್ಡೆಮನೆ ಮತ್ತು ಕೃಷ್ಣಾನಂದ ನಾಯಕ್ರನ್ನು ತೆಕ್ಕಟ್ಟೆಯ ರೋಟರಿ ಕ್ಲಬ್ ವತಿಯಿಂದ ಸಂಮ್ಮಾನಿಸಿ ಗೌರವಿಸಲಾಯಿತು. ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷ ಗಣಪತಿ ಟಿ. ಶ್ರೀಯಾನ್, ನಿವೃತ್ತ ಅಧಿಕಾರಿ ಲಕ್ಷ್ಮೀ ನಾರಾಯಣ ವೈದ್ಯ, ಕ್ಲಬ್ನ ಪಿ.ಹೆಚ್.ಎಫ್ಗಳಾದ ಜಗದೀಶ್, ಸುರೇಶ್ ಬೇಳೂರು ಮತ್ತಿತರರು ಇದ್ದರು.














Leave a Reply