
ಕೋಟ: ಕರಾವಳಿ ಭಾಗದಲ್ಲಿ ಗೀತಾನಂದ ಫೌಂಡೇಶನ್ ಹಸಿರು ಕ್ರಾಂತಿಯನ್ನೆ ಪಸರಿಸಿದೆ ಎಂದು ಕೋಟದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ನುಡಿದರು.
ಕೋಡಿ ಹೊಸಬೇಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೋಟದ ಪಂಚವರ್ಣ ಸಂಸ್ಥೆ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಕೊಡ ಮಾಡಿದ ಗಿಡಗಳನ್ನು ಕೋಡಿ ಗ್ರಾ.ಪಂ ಹೊಸಬೇಂಗ್ರೆ ಅಂಗನವಾಡಿ, ಸ್ತ್ರೀ ಶಕ್ತಿ ಸಂಜೀವಿನಿ ಒಕ್ಕೂಟ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೋಡಿ ಗ್ರಾ.ಪಂ ನೇತೃತ್ವದಲ್ಲಿ ಮೂರು ತಿಂಗಳ ಹಸಿರುಜೀವ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಗೀತಾನಂದ ಫೌಂಡೇಶನ್ ಸಮಾಜದ ದುರ್ಬಲರಿಗೆ ಸಹಾಯಚಾಚುತ್ತಿದ್ದು ಪರಿಸರದ ಬಗ್ಗೆ ಅಪಾರ ಕಾರ್ಯಕ್ರಮಗಳನ್ನು ನೀಡುತ್ತಿದೆ ಇವರೊಂದಿಗೆ ಕೋಟದ ಪಂಚವರ್ಣ ಸಂಸ್ಥೆ ಪರಿಸರದ ಬಗ್ಗೆ ಹೊಸ ಅಧ್ಯಾಯ ಸೃಷ್ಠಿಸಿದೆ ಇದು ಮಾದರಿ ಕಾರ್ಯಕ್ರಮವಾಗಿ ರಾಷ್ಟç ಮಟ್ಟದಲ್ಲಿ ಪ್ರಚಲಿತಗೊಳ್ಳುತ್ತಿದೆ.

ಕೋಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ಹಸಿರು ಜೀವ ಯೋಜನೆ ಯಶಸ್ವಿ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದರು.
ಇದೇ ವೇಳೆ ಕೋಡಿ ಗ್ರಾ.ಪಂ,ವಿವಿಧ ಸಂಘಟನೆಗಳಿAದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಇವರನ್ನು ಗೌರವಿಸಲಾಯಿತು. ಸಭೆಯಲ್ಲಿ ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಕೋಡಿ ಗ್ರಾಮಪಂಚಾಯತ್ ವಿವಿಧ ಮನೆಗಳಿಗೆ ತೆರಳಿ ಗಿಡಗಳನ್ನು ನೆಡಲಾಯಿತು.
ಮುಖ್ಯ ಅಭ್ಯಾಗತರಾಗಿ ಕೋಡಿ ಗ್ರಾ.ಪಂ ಪೂರ್ವಾಧ್ಯಕ್ಷ ,ಸದಸ್ಯ ಪ್ರಭಾಕರ್ ಮೆಂಡನ್ ,ಕೋಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ.ಪಿ, ಅಂಗನವಾಡಿ ಮೇಲ್ವಿಚಾರಕಿ ಸವಿತಾ, ಕೋಟದ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ದೀಪಾ ಖಾರ್ವಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಸ್ವಾಗತಿಸಿದರು.ಕಾರ್ಯಕ್ರಮ ಸಂಯೋಜಕಿ ಯಮುನಾ ಎಲ್ ಕುಂದರ್ ಪ್ರಾಸ್ತಾವನೆ ಸಲ್ಲಿಸಿ ನಿರ್ವಹಿಸಿದರು.
ಮೂರು ತಿಂಗಳ ಹಸಿರುಜೀವ ಅಭಿಯಾನ ಸಮಾರೋಪ ಸಮಾರಂಭದಲ್ಲಿ ಕೋಡಿ ಗ್ರಾ.ಪಂ, ವಿವಿಧ ಸಂಘಟನೆಗಳಿಂದ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಇವರನ್ನು ಗೌರವಿಸಲಾಯಿತು. ಕೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಖಾರ್ವಿ, ಕೋಡಿ ಗ್ರಾ.ಪಂ ಪೂರ್ವಾಧ್ಯಕ್ಷ ,ಸದಸ್ಯ ಪ್ರಭಾಕರ್ ಮೆಂಡನ್ , ಕೋಡಿ ಗ್ರಾಮಪಂಚಾಯತ್ ಸದಸ್ಯ ಕೃಷ್ಣ ಪೂಜಾರಿ.ಪಿ, ಅಂಗನವಾಡಿ ಮೇಲ್ವಿಚಾರಕಿ ಸವಿತಾ, ಕೋಟದ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಅಜಿತ್ ಆಚಾರ್ ಮತ್ತಿತರರು ಇದ್ದರು.














Leave a Reply