
ಕೋಟ: ಕೊರಗ ಸಮಯದಾಯ ಕಾಲೋಜಿನಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ ಕಾರ್ಯ ಎಂದು ಜಿಲ್ಲಾ ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ ನುಡಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು,ಜಯಂಟ್ಸ್ ಕ್ಲಬ್ ಬ್ರಹ್ಮಾವರ,ಮಣೂರು ಫ್ರೆಂಡ್ಸ್ ,ಹಂದಟ್ಟು ಮಹಿಳಾ ಬಳಗ ಕೋಟ,ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಸಮುದ್ಯತಾ ಗ್ರೂಪ್ಸ್ ಕೋಟ,ಜೆಸಿಐ ಸಿನಿಯರ್ ಲಿಜನ್ ಕೋಟ ಇವರುಗಳ ಸಹಯೋಗದೊಂದಿಗೆ ಕೋಟ ಗ್ರಾಮಪಂಚಾಯತ್ ಸಂಯೋಜನೆಯೊAದಿಗೆ ಪರಿಸರಸ್ನೇಹಿ ಅಭಿಯಾನ 221ನೇ ಭಾನುವಾರ ಅಂಗವಾಗಿ ಮೂಡುಗಿಳಿಯಾರು ಹೊನ್ನಾರಿಯ ಕೊರಗ ಕಾಲೋನಿಯಲ್ಲಿ ಹಮ್ಮಿಕೊಂಡ ಹಸಿರುಜೀವ ಕಾರ್ಯಕ್ರಮದಲ್ಲಿ ಗಿಡ ವಿತರಿಸಿ ಮಾತನಾಡಿ ಶಿಕ್ಷಣದಿಂದ ಸಮುದಾಯ ಮೈಲಿಗಲ್ಲು ಸಾಧಿಸಲು ಸಾದ್ಯವಿದೆ ಇದಕ್ಕೆ ಇಂಬು ನೀಡುವಂತೆ ಕೊರಗ ಸಮಾಜ ಇಂದು ಶೈಕ್ಷಣಿಕವಾಗಿ ಮುಂದುವರೆದಿದೆ, ನಮ್ಮ ಸಮುದಾಯದ ಕೇರಿಗಳಿಗೆ ಆಗಮಿಸಿದ ಪಂಚವರ್ಣ ಸಂಸ್ಥೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ನಿಜಕ್ಕೂ ಹೆಮ್ಮೆ ಪಡುವಂತ್ತದ್ದು , ಪರಿಸರದ ಬಗ್ಗೆ ನಮ್ಮ ಸಮಾಜ ಇತಿಹಾಸದಿಂದಲೂ ಬಹಳಷ್ಟು ಕಾಳಜಿ ವಹಿಸುತ್ತಿದೆ ಇದಕ್ಕೆ ಪಾರಂಪರಿಕ ಕುಸುರಿಗಳೇ ಸಾಕ್ಷಿಯಾಗಿದೆ. ಪ್ರಕೃತಿ ಪ್ರೇಮ ಪ್ರತಿಯೊಬ್ಬರಲ್ಲೂ ಇರಬೇಕು ಅದು ನಿತ್ಯ ನಿರಂತರ ನಮ್ಮಗೆ ಉಸಿರಾಗಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಕೊರಗ ಸಮುದಾಯದ ವಿವಿಧ ಮನೆಗಳಿಗೆ ವಿವಿಧ ತರಹದ ಗಿಡಗಳನ್ನು ನೆಟ್ಟು ಜಾಗೃತಿ ಮೆರೆಯಲಾಯಿತು.

ಅಭಿಯಾನದಲ್ಲಿ ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕಮಾರ್,ಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ,ಯೋಗೇಂದ್ರ ಪೂಜಾರಿ,ಕಾಲೋನಿಯ ಕೊರಗ ಸಮುದಾಯದ ಮುಖಂಡ ನಮ್ಮ ಬಸವಣ್ಣ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಕೋಟ ಪಂಚಾಯತ್ ಮಾಜಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಎಂ ಬಾಯರಿ ನಿರೂಪಿಸಿದರೆ, ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ವಂದಿಸಿದರು.
ಕೋಟದ ಪಂಚವರ್ಣ ಯುವಕ ಮಂಡಲ ಅದರ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಕೋಟ ಗ್ರಾಮಪಂಚಾಯತ್ ಸಂಯೋಜನೆಯೊAದಿಗೆ ಪರಿಸರಸ್ನೇಹಿ ಅಭಿಯಾನ 221ನೇ ಭಾನುವಾರ ಅಂಗವಾಗಿ ಮೂಡುಗಿಳಿಯಾರು ಹೊನ್ನಾರಿಯ ಕೊರಗ ಕಾಲೋನಿಯಲ್ಲಿ ಹಮ್ಮಿಕೊಂಡ ಹಸಿರುಜೀವ ಕಾರ್ಯಕ್ರಮದಲ್ಲಿ ಜಿಲ್ಲಾ ಕೊರಗ ಸಮುದಾಯದ ಮುಖಂಡ ಗಣೇಶ್ ಕುಂಭಾಶಿ ಗಿಡ ವಿತರಿಸಿ ಮಾತನಾಡಿದರು. ಕೋಟ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕಮಾರ್, ಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ ,ಯೋಗೇಂದ್ರ ಪೂಜಾರಿ, ಕಾಲೋನಿಯ ಕೊರಗ ಸಮುದಾಯದ ಮುಖಂಡ ನಮ್ಮ ಬಸವಣ್ಣ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ ಮತ್ತಿತರರು ಇದ್ದರು.














Leave a Reply