Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ- ಕೀರ್ತಿಶೇಷ ಜಿ.ಚಂದು ಪೂಜಾರಿ ಗೋಳಿಗರಡಿ ಸಾಸ್ತಾನ ರಂಗಸ್ಥಳದಲ್ಲಿ ಸೌರಭ ಸಪ್ತಮಿ ಯಕ್ಷಗಾನ ಸಪ್ತಾಹ 2ನೇ ದಿನ ಕಾರ್ಯಕ್ರಮ

ಕೋಟ: ಕೋಟದ  ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಇದರ ದಶಮ ಸಂಭ್ರದ ಅಂಗವಾಗಿ ಒಂದು ವಾರಗಳ ಕಾಲ ಯಕ್ಷ ಸಪ್ತಾಹ ಹಮ್ಮಿಕೊಂಡಿದ್ದು ಇದರ ಎರಡನೇ ದಿನದ ಕಾರ್ಯಕ್ರಮ ಸಾಸ್ತಾನದ ಶ್ರೀ ಗೋಳಿಗರಡಿ ಮೇಳದ ಯಜಮಾನ ಜಿ.ವಿಠ್ಠಲ ಪೂಜಾರಿ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಸಾಸ್ತಾನ ಜಿ.ಚಂದು ಪೂಜಾರಿ ನುಡಿನಮನವನ್ನು ಗೋಪಾಡಿ ಗ್ರಾ.ಪಂ ಪಿಡಿಓ ಗಣೇಶ್ ಪೂಜಾರಿ ಇವರು ನೆರವೇರಿಸಿದರು.  ಇದೇ ವೇಳೆ ಹಿರಿಯ ಹವ್ಯಾಸಿ ಕಲಾವಿದ ಗಿಳಿಯಾರು ಗೋಪಾಲಕೃಷ್ಣ ಪೈ ಇವರನ್ನು ಗೌರವಿಸಲಾಯಿತು. ಕಾರ್ಯಕ್ರಮ ಪೋಷಕರಾದ ಉದ್ಯಮಿ  ಕೊಗ್ಗ ಪುತ್ತು ಶ್ಯಾನುಭೋಗ್ ಮತ್ತು ಜಿ .ವಿಠ್ಠಲ ಪೂಜಾರಿ ಯವರನ್ನು ಸೌರಭ ಸನ್ಮಾನ ನೀಡಲಾಯಿತು.

ಪತ್ರಕರ್ತರು ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಚಿತ್ತೂರು ಪ್ರಭಾಕರ್ ಆಚಾರ್ಯ ಸೌರಭದ ಈ ಕಾರ್ಯಕ್ರಮವನ್ನು ಶ್ಲಾಘಸಿದರು ,  ಸೌರಭದ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಊರಳ, ರಾಘವೇಂದ್ರ ಪೂಜಾರಿ ಮುಖ್ಯ ಅಭ್ಯಾಗತರಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಸದಸ್ಯರು ರಾಜೇಶ ಕರ್ಕೇರ ನಿರೂಪಿಸಿ, ಯಕ್ಷ ಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಸ್ವಾಗತಿಸಿ, ಗಿರೀಶ್ ಗಾಣಿಗ ಬೆಟ್ಲಾಕ್ಕಿ ವಂದಿಸಿದರು. ವೇದಿಕೆಯ ಸಂಘದ ಗುರುಗಳು ಶ್ರೀ ಪ್ರಸಾದ್ ಮೊಗೇಬೆಟ್ಟು ನಿರ್ದೇಶನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಸುದಿನ  ಸಂಘದ ಸದಸ್ಯರಿಂದ  ಮೈಂದ ದ್ವಿವಿದ  ಯಕ್ಷಗಾನ ಪ್ರದರ್ಶನ ಜರುಗಿತು.

ಕೋಟದ  ಯಕ್ಷಸೌರಭ ಶ್ರೀ ಹಿರೇ ಮಹಾಲಿಂಗೇಶ್ವರ ಕಲಾರಂಗ ಇದರ ದಶಮ ಸಂಭ್ರದ ಅಂಗವಾಗಿ ಒಂದು ವಾರಗಳ ಕಾಲ ಯಕ್ಷ ಸಪ್ತಾಹ ಎರಡನೇ ದಿನದಲ್ಲಿ ಹಿರಿಯ ಹವ್ಯಾಸಿ ಕಲಾವಿದ ಗಿಳಿಯಾರು ಗೋಪಾಲಕೃಷ್ಣ ಪೈ ಇವರನ್ನು ಗೌರವಿಸಲಾಯಿತು. ಪತ್ರಕರ್ತರು ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಚಿತ್ತೂರು ಪ್ರಭಾಕರ್ ಆಚಾರ್ಯ, ಯಕ್ಷ ಸೌರಭದ ಅಧ್ಯಕ್ಷ ರಾಘವೇಂದ್ರ ಕರ್ಕೇರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *