ಕೋಟ: ಶ್ರೀ ಮಠ ಬಾಳೆಕುದ್ರು, ಹಂಗಾರಕಟ್ಟೆ, ಬ್ರಹ್ಮಾವರ, ಉಡುಪಿ . ಶ್ರೀ ಶ್ರೀ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಬೆಂಗಳೂರಿನ ಶ್ರೀ ರಾಜಾರಾಜೇಶ್ವರಿ ನಗರ ಶ್ರೀ ಜ್ಞಾನಾಕ್ಷಿ ರಾಜಾರಾಜೇಶ್ವರಿ ದೇವಸ್ಥಾನ ಇಲ್ಲಿ ಜರಗುತ್ತಿದ್ದು ಈ ಹಿನ್ನಲ್ಲೆಯಲ್ಲಿ ಗುರುವಾರ ಶ್ರೀ ದುರ್ಗಾ ಹೋಮ ಸಂಪನ್ನಗೊಂಡಿತು.
ವೈದಿಕ ಕಾರ್ಯಕ್ರಮವನ್ನು ಕೃಷ್ಣ ಮೂರ್ತಿ ಕಡಬಗೆರೆ ಬೆಂಗಳೂರು ಮತ್ತು ರಮೇಶ ಇವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯಿತು. ವಿಪ್ರ ಸ್ನೇಹ ಸಭಾ ಟ್ರಸ್ಟ್ ಮತ್ತು ಶ್ರೀ ಮಾತಾ ಸಾಂಸ್ಕೃತಿಕ ಕೇಂದ್ರ, ಬನಶಂಕರಿ, ಬೆಂಗಳೂರು ಇದರ ಸದಸ್ಯರಿಂದ ಭಕ್ತಿ ಸಂಗೀತ ಲಕ್ಷ್ಮಿ ನರಸಿಂಹ ಸಹಸ್ರ ನಾಮ,ಲಲಿತಾ ಸಹಸ್ರನಾಮ,ವಿಷ್ಣು ಸಹಸ್ರನಾಮ ಪಾರಾಣ ಸಂಪನ್ನವಾಯಿತು. ವಿಪ್ರ ಸ್ನೇಹ ಸಭಾ ಟ್ರಸ್ಟ್ನ ಅಧ್ಯಕ್ಷೆ ಶ್ರೀ ಮಾತಾ ಸಂಸ್ಕೃತಿಕ ಕೇಂದ್ರದ ವಿದೂಷಿ. ವಿನೂತ ಎನ್ ಸ್ವಾಮಿ, ಶ್ರೀಮಠದ ವ್ಯವಸ್ಥಾಪನ ಸಮಿತಿ ಸದಸ್ಯ ಪಾಮರ ಚಡಗ ಮತ್ತು ಶ್ರೀ ಮಠದ ವ್ಯವಸ್ಥಾಪಕ ಮಂಜುನಾಥ ಭಟ್ ಉಪಸ್ಥಿತರಿದ್ದರು.
ಬಾಳೆಕುದ್ರು ಶ್ರೀ ಮಠದ ಶ್ರೀಗಳ ಚಾತುರ್ಮಾಸ್ಯ ನಿಮಿತ್ತ ಬೆಂಗಳೂರಿನ ಶ್ರೀ ರಾಜಾರಾಜೇಶ್ವರಿ ನಗರ ಶ್ರೀ ಜ್ಞಾನಾಕ್ಷಿ ರಾಜಾರಾಜೇಶ್ವರಿ ದೇವಸ್ಥಾನ ಇಲ್ಲಿ ಜರಗುತ್ತಿದ್ದು ಈ ಹಿನ್ನಲ್ಲೆಯಲ್ಲಿ ಗುರುವಾರ ಶ್ರೀ ದುರ್ಗಾ ಹೋಮ ಸಂಪನ್ನವಾಯಿತು. ವಿಪ್ರ ಸ್ನೇಹ ಸಭಾ ಟ್ರಸ್ಟ್ನ ಅಧ್ಯಕ್ಷೆ ಶ್ರೀ ಮಾತಾ ಸಾಂಸ್ಕತಿಕ ಕೇಂದ್ರದ ವಿದೂಷಿ.ವಿನೂತ ಎನ್ ಸ್ವಾಮಿ, ಶ್ರೀಮಠದ ವ್ಯವಸ್ಥಾಪನ ಸಮಿತಿ ಸದಸ್ಯ ಪಾಮರ ಚಡಗ ಮತ್ತು ಶ್ರೀ ಮಠದ ವ್ಯವಸ್ಥಾಪಕ ಮಂಜುನಾಥ ಭಟ್ ಉಪಸ್ಥಿತರಿದ್ದರು.
















Leave a Reply