ಬೈಂದೂರು: ತಾಲೂಕಿನ ಕಂಬದಕೋಣೆಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿದ್ಯಾರ್ಥಿನಿಯೋರ್ವಳು ಪ್ರಜ್ಞೆ ತಪ್ಪಿ ಅಸ್ವಸ್ಥರಾಗಿ ಬೀಳುತ್ತಾಳೆ. ಶಾಲೆಯಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿದರೂ ವಿದ್ಯಾರ್ಥಿನಿಗೆ ಪ್ರಜ್ಞೆ ಬಾರದ ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ಸಾಗಿಸಿಬೇಕೆಂದು ಸ್ಥಳದಲ್ಲಿದ್ದ ನರ್ಸ್ ಹೇಳುತ್ತಾರೆ.
ವಿಪರ್ಯಾಸವೆಂದರೆ, ಘಟನಾ ಸ್ಥಳದಲ್ಲಿ ಕಾಲೇಜಿನ ಉಪನ್ಯಾಸಕರ ಮೂರು ಕಾರುಗಳು ನಿಂತಿದ್ದರೂ ಯಾರೊಬ್ಬರೂ ಆ ಹೆಣ್ಣುಮಗುವನ್ನು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಲು ಮನ ಮಾಡುವುದೇ ಇರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಹೌದು ಪ್ರಜ್ಞೆ ತಪ್ಪಿದಂತಹ ಸ್ಥಿತಿಯಲ್ಲಿದ್ದರೂ ಆಟೋ ರಿಕ್ಷಾಕ್ಕಾಗಿ ಕರೆ ಮಾಡಿ ತುಂಬಾ ಹೊತ್ತು ಕಾದು ಆಟೋ ಬಂದ ನಂತರ ವಿದ್ಯಾರ್ಥಿನಿಯನ್ನ ಆಸ್ಪತ್ರೆಗೆ ಸೇರಿಸುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಮಾದರಿಯಾಗಿರಬೇಕಿದ್ದ ಗುರುಗಳು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸದೆ ಒಂದು ಲೀಟರ್ ಪೆಟ್ರೋಲಿಗೆ ಯೋಚನೆ ಮಾಡಿದರೆ….? ಎಂಬುವುದೇ ಸ್ಥಳೀಯ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಪೋಷಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಹರಿಬಿಟ್ಟು ಶಿಕ್ಷಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ರೀಡಾಕೂಟ ಆಯೋಜನೆ ಮಾಡುವ ಮೊದಲು ಅಲ್ಲಿಗೆ ಬೇಕಾಗುವ ಆಂಬುಲೆನ್ಸ್ ವೈದ್ಯಕೀಯ ತಪಾಸಣೆ, ಇನ್ನಿತರ ಸೌಲಭ್ಯದ ಬಗ್ಗೆ ಶಿಕ್ಷಕರು ಗಮನ ಹರಿಸಬೇಕು ಹಾಗೂ ಇಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಶಿಕ್ಷಕರನ್ನು ಶಿಕ್ಷಣ ಇಲಾಖೆ ತಕ್ಷಣ ಕ್ರಮ ವಹಿಸಬೇಕು, ಇನ್ನು ಮುಂದೆ ಈ ತರದ ಘಟನೆ ಯಾಗದಂತೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮವಹಿಸಬೇಕು, ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೋಷಕರ ಹಾಗೂ ಸ್ಥಳೀಯರ ಅಭಿಪ್ರಾಯವಾಗಿದೆ.















Leave a Reply