
ಕೋಟ: ಶತಮಾನದ ಸಂಭ್ರಮದಲ್ಲಿ ಇರುವ ಕೀರ್ತಿಶೇಷ ಕೋಟ ಶೇಷ ಕಾರಂತರು ಸ್ಥಾಪಿಸಿದ ಕೋಟ ಗಿಳಿಯಾರಿನ
ಶ್ರೀ ಶಾಂಭವೀ ಶಾಲೆಗೆ ಮಕ್ಕಳ ಕಂಪ್ಯೂಟರ್ ಕಲಿಕೆ ಅನುಕೂಲಕ್ಕಾಗಿ ಎರಡು ಲ್ಯಾಪ್ ಟಾಪ್ಗಳನ್ನು ಶಾಲಾ ಹಿಂದಿನ ವಿದ್ಯಾರ್ಥಿ ಬೆಂಗಳೂರಿನಲ್ಲಿ ಪ್ರಸಿದ್ಧ ಲೆಕ್ಕ ಪರಿಶೋಧಕರಾಗಿರುವ ಯಂ. ಶಂಕರನಾರಾಯಣ್ ರವರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ರಾಜಾರಾಮ ಐತಾಳ ಇವರಿಗೆ ಹಸ್ತಾಂತರಿಸಿದರು. ಹಾಗೂ ಇದೇ ಸಂದರ್ಭದಲ್ಲಿ ಶಾಲಾಭಿವೃದ್ಧಿ ನಿಧಿಗೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದರು.
ಶಾಲಾ ಆಡಳಿತದ ಪರವಾಗಿ ಅವರನ್ನು ಅಭಿನಂದಿಸಲಾಯಿತು. ಶಾಲಾ ಮುಖ್ಯ ಶಿಕ್ಷಕ
ಜಿ.ದಿವಾಕರ ರಾವ್, ಅಧ್ಯಾಪಕ ವೃಂದದವರು, ಹಾಗೂ ಯಂ. ನಾಗರಾಜ ಮೈಯ್ಯ ಮತ್ತಿತರರು ಉಪಸ್ಥಿತರಿದ್ದರು.
ಶ್ರೀ ಶಾಂಭವೀ ಶಾಲೆಗೆ ಮಕ್ಕಳ ಕಂಪ್ಯೂಟರ್ ಕಲಿಕೆ ಅನುಕೂಲಕ್ಕಾಗಿ ಎರಡು ಲ್ಯಾಪ್ ಟಾಪ್ಗಳನ್ನು ಶಾಲಾ ಹಿಂದಿನ ವಿದ್ಯಾರ್ಥಿ ಬೆಂಗಳೂರಿನಲ್ಲಿ ಪ್ರಸಿದ್ಧ ಲೆಕ್ಕ ಪರಿಶೋಧಕರಾಗಿರುವ ಯಂ. ಶಂಕರನಾರಾಯಣ್ ರವರು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕೆ. ರಾಜಾರಾಮ ಐತಾಳ ಇವರಿಗೆ ಹಸ್ತಾಂತರಿಸಿದರು. ಜಿ.ದಿವಾಕರ ರಾವ್, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
Leave a Reply