ಕೋಟ: ರೋಟರಿ ಸದಸ್ಯರು ಸೇವಾ ಮನೋಭಾವನೆಯಿಂದ ಕೆಲಸ ನಿರ್ವಹಿಸುತ್ತಾ ಹೋದಲ್ಲಿ ಸಮಾಜದಲ್ಲಿ ಉತ್ತಮ ಫಲಿತಾಂಶ ಕಾಣಲು ಸಾಧ್ಯ ಎಂದು ರೋಟರಿ ವಲಯ 3ರ ಜಿಲ್ಲಾ ಗವರ್ನರ್ ಸಿ.ಎ. ದೇವ್‌ಆನಂದ್ ಹೇಳಿದರು.
ಅವರು ಸೆ. 2 ರಂದು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಕ್ಲಬ್‌ಗೆ ಅಧೀಕೃತ ಭೇಟಿಯ ಸಂದರ್ಭದಲ್ಲಿ ಸಾಸ್ತಾನದ ಸಿರಿಯನ್ ಚರ್ಚ್ನ ಸಂಭ್ರಮ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಗುಂಡ್ಮಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಚಿನ್ಮಯಿ ಅವರಿಗೆ ಕ್ರೀಡಾ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗುಂಡ್ಮಿ ಸರಕಾರಿ ಪ್ರೌಢಶಾಲೆಗೆ 2023-24 ನೇ ಸಾಲಿನ ಇಂರ‍್ಯಾಕ್ಟ್ ಪ್ರಶಸ್ತಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಗವರ್ನರ್ ದಂಪತಿಯನ್ನು ಸಮ್ಮಾನಿಸಲಾಯಿತು. ಗರ್ವನರ್ ಆಗಮಿಸುವ ಹಿನ್ನಲ್ಲೆಯಲ್ಲಿ ಸಾಸ್ತಾನ ತುಂಗರ ಮಠದಿಂದ ಮೆರವಣಿಗೆಯ ಮೂಲಕ ವೈಭವಪೂರಿತವಾಗಿ ಕರೆ ತರಲಾಯಿತು.
ಈ ಸಂದರ್ಭದಲ್ಲಿ ಸಿ.ಎ. ರೇಖಾ ದೇವಾನಂದ್, ವಲಯ ಪ್ರತಿನಿಧಿ ದಿನೇಶ್ ಕುಮಾರ್ ನಾಯರಿ, ರೋಟರಿ ಸಹಾಯಕ ಗವರ್ನರ್ ರಾಘವೇಂದ್ರ ಸಾಮಗ, ರೋಟರಿ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿ ತರಿದ್ದರು. ರೋಟರಿ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ ಸ್ವಾಗತಿಸಿದರು. ಕಾರ್ಯದರ್ಶಿ ಸುಲತಾ ಎಸ್. ಹೆಗ್ಡೆ ವರದಿ ಮಂಡಿಸಿದರು. ರಾಜಾರಾಮ ಐತಾಳ್ ನಿರೂಪಿಸಿದರು. ಅಶೋಕ್ ಕುಮಾರ್ ವಂದಿಸಿದರು.
ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಕ್ಲಬ್‌ಗೆ ರೋಟರಿ ವಲಯ 3ರ ಜಿಲ್ಲಾ ಗವರ್ನರ್ ಸಿ.ಎ. ದೇವ್‌ಆನಂದ್ ಅಧೀಕೃತ ಭೇಟಿ ನೀಡಿದರು. ರೋಟರಿ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಪೂಜಾರಿ ಸಿ.ಎ. ರೇಖಾ ದೇವಾನಂದ್, ವಲಯ ಪ್ರತಿನಿಧಿ ದಿನೇಶ್ ಕುಮಾರ್ ನಾಯರಿ, ರೋಟರಿ ಸಹಾಯಕ ಗವರ್ನರ್ ರಾಘವೇಂದ್ರ ಸಾಮಗ, ರೋಟರಿ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿ ತರಿದ್ದರು.