ಕೋಟ: ಗಿಳಿಯಾರು ಯುವಕ ಮಂಡಲ ಗಿಳಿಯಾರು ಕೋಟ ಇವರ ಆಶ್ರಯದಲ್ಲಿ ಹಳ್ಳಿಗಾಡಿನ ಕ್ರೀಡಾ ಸೊಗಡು “ಹಳೆ ಆಟ ಹೊಸ ಚಿಗುರು ಎಂಬ ವಿನೂತನ ಶೀರ್ಷೀಕೆಯಡಿ ಕಾರ್ಯಕ್ರಮವು ಭಾನುವಾರ ಮೂಡುಗಿಳಿಯಾರು ಶಾಲಾ ವಠಾರದಲ್ಲಿ ಜರಗಿತು.
ಮೂಡುಗಿಳಿಯಾರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ ಗರಡಿಮಕ್ಕಿ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭಾರತ್ ಕುಮಾರ್ ಶೆಟ್ಟಿ, ಉದ್ಯಮಿ ಅಶೋಕ ಶೆಟ್ಟ ಬನ್ನಾಡಿ, ಗಿಳಿಯಾರು ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುರೇಶ ಗಿಳಿಯಾರು, ಕೋಟ ಗ್ರಾಮ ಪಂಚಾಯಿತಿಯ ಸದಸ್ಯ ಯೋಗೇಂದ್ರ ಪೂಜಾರಿ, ಗಿಳಿಯಾರು ಯುವಕ ಮಂಡಲದ ಉಪಾಧ್ಯಕ್ಷ ಸುಭಾಶ್ ಪೂಜಾರಿ, ಕಾರ್ಯದರ್ಶಿ ಅಕ್ಷಯ ಸೋಮಯಾಜಿ, ಖಜಾಂಚಿಯಾದ ರಾಘವೇಂದ್ರ ಆಚಾರ್, ರವೀಂದ್ರ ಬನ್ನಾಡಿ, ಪ್ರದೀಪ್ ಪುತ್ರನ್, ಹಾಗೆಯೇ ಯುವಕ ಮಂಡಲದ ಸದಸ್ಯರು ಊರ ಗ್ರಾಮಸ್ಥರು, ಮುದ್ದು ಮಕ್ಕಳು,ಉಪಸ್ಥಿತರಿದ್ದರು.
ಗಿಳಿಯಾರು ಯುವಕ ಮಂಡಲ ಗಿಳಿಯಾರು ಕೋಟ ಇವರ ಆಶ್ರಯದಲ್ಲಿ ಹಳ್ಳಿಗಾಡಿನ ಕ್ರೀಡಾ ಸೊಗಡು ಹಳೆ ಆಟ ಹೊಸ ಚಿಗುರು ಎಂಬ ವಿನೂತನ ಶೀರ್ಷೀಕೆಯಡಿ ಕಾರ್ಯಕ್ರಮವನ್ನು ಮೂಡುಗಿಳಿಯಾರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಶೇಖರ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಶೇಖರ ಗರಡಿಮಕ್ಕಿ, ಕೋಟ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಭಾರತ್ ಕುಮಾರ್ ಶೆಟ್ಟಿ, ಉದ್ಯಮಿ ಅಶೋಕ ಶೆಟ್ಟ ಬನ್ನಾಡಿ, ಗಿಳಿಯಾರು ಯುವಕ ಮಂಡಲದ ಸ್ಥಾಪಕ ಅಧ್ಯಕ್ಷ ಸುರೇಶ ಗಿಳಿಯಾರು ಮತ್ತಿತರರು ಇದ್ದರು.