• Mon. Sep 9th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ತೆಕ್ಕಟ್ಟೆ- ರಸರಂಗ ಕೋಟ ವಿನೂತನ ಯಕ್ಷಗಾನ ಪ್ರಯೋಗ ಶ್ರೀ ಕೃಷ್ಣ ದರ್ಶನ ಯಕ್ಷಗಾನ

ByKiran Poojary

Sep 3, 2024

ಕೋಟ: ನಮ್ಮ ನೆಲದ ಸಂಸ್ಕçತಿಯನ್ನ ಉಳಿಸಿಕೊಂಡು ಬರುವಲ್ಲಿ ಸತತವಾಗಿ ಹೋರಾಟವನ್ನು ನೀಡುತ್ತಾ ಬಂದಿರುವವರು  ಯಕ್ಷಗಾನದ ಕಲಾವಿದರು. ಪ್ರತಿ ಹಳ್ಳಿಹಳ್ಳಿಗಳಲ್ಲಿ ದೇವಸ್ಥಾನಗಳಲ್ಲಿ ತಮ್ಮ ಯಕ್ಷಗಾನದ  ಪ್ರದರ್ಶಗಳನ್ನು ನೀಡುವ  ಮೂಲಕ ಅನಕ್ಷರಸ್ತರಲ್ಲೂ ಜ್ಞಾನವನ್ನು ಬೆಳೆಸುವ ಕಾರ್ಯ ಯಕ್ಷಗಾನ ಮಾಡಿದೆ ಎಂದು ಲೇಖಕಿ ನರ್ಮದಾ ಎನ್. ಪ್ರಭು ತೆಕ್ಕಟ್ಟೆ ಇವರು ನುಡಿದರು.

ಇವರು ರಸರಂಗ  ಕೋಟ ಸಂಸ್ಥೆಯು ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇವರ ಸಹಕಾರದೊಂದಿಗೆ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪ ಇಲ್ಲಿ ಆಯೋಜಿಸಿದ್ದ ವಿನೂತನ ಯಕ್ಷಗಾನ ಪ್ರಯೋಗ ಶ್ರೀ ಕೃಷ್ಣ ದರ್ಶನ ಇದರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಯಕ್ಷಗಾನದಂತಹ ಕಲೆಯ ಜೊತೆಜೊತೆಗೆ ಪುಸ್ತಕದ ಓದೂ ಮನುಷ್ಯನನ್ನು ಇನ್ನಷ್ಡು ಗಟ್ಟಿಗೊಳಿಸುತ್ತದೆ,ಉತ್ತಮ ಕಾರ್ಯಕ್ರಮವನ್ನು ನೀಡುತ್ತಿರುವ ಸಂಸ್ಥೆಗೆ ಶುಭವಾಲಿ ಎಂದರು.

ಅಭ್ಯಾಗತರಾದ ಕೈಲಾಸ ಕ್ಷೇತ್ರ ಇದರ ಅಧ್ಯಕ್ಷ ಹೆರಿಯ ಮಾಸ್ತರ್  ಮಾತನಾಡಿ ರಸರಂಗವು ಬಹು ಕಾಲದಿಂದಲೂ ಇಂತಹ ವಿನೂತನವಾದ ಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇಂದಿನ ಕಾರ್ಯಕ್ರಮವೂ ಯಶಸ್ವೀಯಾಗಲಿ ಎಂದು ಶುಭ ಹಾರೈಸಿದರು. ಯಕ್ಷಗಾನ ರಂಗದ ಹಿರಿಯ ರಂಗಕರ್ಮಿ ಸುದರ್ಶನ ಉರಾಳ,ರಸರಂಗದ ಅಧ್ಯಕ್ಷೆ ಸುಧಾ ಮಣೂರು ಇವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವೆಸ್ಟ್ ಬೆಂಗಾಲ್ ಇಂಟರ್ ನ್ಯಾಷನಲ್   ಫಿಲಂ ಫೆಸ್ಟಿವಲ್‌ನಲ್ಲಿ ನಾಲ್ಕು ಪ್ರಶಸ್ತಿಗಳನ್ನು ಪಡೆದ ಕಿರುಚಿತ್ರ ಡೀಫ್ ಆರ್ ಡೈ ಇದರ ನಿರ್ಮಾಪಕ ನಿರ್ದೇಶಕ ವಿಜಿತ್ ಮಲ್ಯಾಡಿ ಹಾಗೂ ಅವರ ಚಿತ್ರತಂಡವನ್ನು ರಸರಂಗದ ವತಿಯಿಂದ ಗೌರವಿಸಲಾಯಿತು.
ಮಹಾಲಕ್ಷ್ಮೀ ಸೋಮಯಾಜಿ ಸ್ವಾಗತಿಸಿದರು .ಡಾ ಸರಿತಾ ಉಪಾಧ್ಯಾಯ ಧನ್ಯವಾದಗೈದರು. ಸುಮನ ಹೇರಳೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸುಧಾ ಮಣೂರು ಇವರ ಪರಿಕಲ್ಪನೆಯ ಯಕ್ಷಗಾನ ಶ್ರೀ ಕೃಷ್ಣ ದರ್ಶನ ಇದರ ಪದರ್ಶನ ನಡೆಯಿತು.

ರಸರಂಗ  ಕೋಟ ಸಂಸ್ಥೆಯು ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಇವರ ಸಹಕಾರದೊಂದಿಗೆ ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪ ಇಲ್ಲಿ ಆಯೋಜಿಸಿದ್ದ ವಿನೂತನ ಯಕ್ಷಗಾನ ಪ್ರಯೋಗ ಶ್ರೀ ಕೃಷ್ಣ ದರ್ಶನ ಇದರ ಪ್ರದರ್ಶನವನ್ನು ಲೇಖಕಿ ನರ್ಮದಾ ಎನ್. ಪ್ರಭು ತೆಕ್ಕಟ್ಟೆ ಉದ್ಘಾಟಿಸಿದರು. ಯಕ್ಷಗಾನ ರಂಗದ ಹಿರಿಯ ರಂಗಕರ್ಮಿ ಸುದರ್ಶನ ಉರಾಳ,ರಸರಂಗದ ಅಧ್ಯಕ್ಷೆ ಸುಧಾ ಮಣೂರು ಇವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *