ಶಿಕ್ಷಣ ಇಲಾಖೆಯ 2024-25 ರ ಶೈಕ್ಷಣಿಕ ಮಾರ್ಗಸೂಚಿಯಂತೆ ಸೆಪ್ಟಂಬರ್ 5 ರಂದು ಶಾಲೆಗೆ ರಜೆ ಕೊಡದೆ ಶಾಲೆಯಲ್ಲಿಯೇ ಶಿಕ್ಷಕರ ದಿನಾಚರಣೆ ಆಚರಿಸುವ ಬಗ್ಗೆ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಯಿಂದ ಮಾನ್ಯ ಆಯುಕ್ತರು ಬೆಂಗಳೂರು,ದಕ್ಷಿಣಕನ್ನಡ ಜಿಲ್ಲೆಯ ಉಪನಿರ್ದೇಶಕರು, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ, ತಹಶೀಲ್ದಾರ್ ಮತ್ತು ಶಿಕ್ಷಣಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು
ಶಿಕ್ಷಕರ ದಿನಾಚಾರಣೆಯು ಶಾಲಾ ಹಂತದಲ್ಲಿ ಮಕ್ಕಳಿಗೆ ಅದರ ಮಹತ್ವವನ್ನು ತಿಳಿಸಿ ಶಾಲೆಗಳಲ್ಲಿ ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ಆಚರಿಸುವಂತಹ ಕಾರ್ಯಕ್ರಮ ಆಗಿದ್ದು, ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ನಮೂದಿಸಿರುತ್ತಾರೆ.
ಹಾಗಿದ್ದು ಕೂಡ ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ಸಂಘ ಸಂಸ್ಥೆಗಳು ಶಿಕ್ಷಕರ ದಿನಾಚರಣೆ ಆಚರಿಸುವ ನಿಟ್ಟಿನಲ್ಲಿ ಶಿಕ್ಷಕರು ಶಾಲೆಗಳಿಗೆ ರಜೆಯನ್ನು ಘೋಷಿಸಿ ಮಕ್ಕಳ ಒಂದು ದಿನದ ಶಿಕ್ಷಣಕ್ಕೆ ತೊಡಕನ್ನು ಉಂಟು ಮಾಡುವುದರೊಂದಿಗೆ ಸರಕಾರದ ಆದೇಶ ಹಾಗೂ ಮಾರ್ಗಸೂಚಿಯ ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಿರುತ್ತದೆ.
ಆ ದಿನ ರಜೆಯನ್ನು ಘೋಷಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಡಕನ್ನು ಉಂಟು ಮಾಡುವುದು ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ ಆಗಿದ್ದು, ಸರಕಾರದ ರಜೆ ಘೋಷಣೆ ಇಲ್ಲದೆ ಸ್ವಮದೆಯ ಶಾಲೆಗಳಿಗೆ ರಜೆಯನ್ನು ಘೋಷಿಸುವವರ ಮೇಲೆ ಆರ್ ಟಿ ಈ ಕಾಯ್ದೆ ಉಲ್ಲಂಘನೆ ಮಾಡಿದ ಪ್ರಕಾರ ಶಿಸ್ತುಕ್ರಮವನ್ನು ಕೈ ಗೊಳ್ಳಬೇಕಿದ ಅದರಿಂದ ತಾವುಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಯಾವುದೇ ರೀತಿಯಲ್ಲಿ ರಜೆಯನ್ನು ಕೊಡದೆ ಶಾಲೆಗಳಲ್ಲಿಯೇ ಶಿಕ್ಷಕರ ದಿನಾಚರಣೆ ಆಚರಿಸಿ,ಮಕ್ಕಳ ಪಾಠಗಳಿಗೆ ಯಾವುದೇ ತೊಡಕನ್ನು ಉಂಟು ಮಾಡದೆ, ಶೈಕ್ಷಣಿಕ ಮಾರ್ಗಸೂಚಿಯ ಪ್ರಕಾರವೇ ಶಿಕ್ಷಕರ ದಿನಾಚರಣೆಯನ್ನು ಆಚರಿಸಲು ನಿರ್ದೇಶನವನ್ನು ಕೊಡಲು ಮನವಿಯಲ್ಲಿ ವಿನಂತಿಸಲಾಗಿದೆ