ಇಲ್ಲೇ ಕಾಂಗ್ರೇಸ್ ಮನೆಯಲ್ಲಿ ತಿಂದು ಉಂಡು ದೊಡ್ಡವರಾಗಿ ಈಗ ಕಾಂಗ್ರೇಸ್ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರು ಮೊದಲು ತಾನು ಎಲ್ಲಿಂದ ಎಲ್ಲಿಗೆ ಬಂದೆ ಎಂದು ಮನವರಿಕೆ ಮಾಡಿ ಕೊಳ್ಳುವುದು ಉತ್ತಮ. ಈ ಬಿಜೆಪಿ ಅವರು ತಾವು ಮಾಡುವುದು ಎಲ್ಲ ಸರಿ ಎಂಬಂತೆ ಬಿಂಬಿಸಿಕೊಳ್ಳುವುದು ಆಮೇಲೆ ಕೋರ್ಟ್ ಗೆ ಹೋಗಿ ಮಾನಹಾನಿ ಮಾಡಬೇಡಿ ಎಂದು ಸ್ಟೇ ತರುದು ಮತ್ತು ಇವರ ಸೈದ್ಧಾಂತಿಕ ಬದ್ಧತೆಗಳು ಹಾಗೂ ಆಚಾರ ವಿಚಾರಗಳ ಬಗ್ಗೆ ಯಾರಿಗೂ ಅರಿವೇ ಇಲ್ಲ ಎಂಬಂತೆ ಸ್ವಯಂ ಪ್ರೇರಿತರಾಗಿ ಬಿಂಬಿಸುವುದು. ಅನಾಚಾರ ಮಾಡಿ ಆಮೇಲೆ ಹಿಂದುತ್ವ ನಮ್ಮ ಜೀವ ಎಂದು ಸಾರ್ವಜನಿಕ ವಲಯದಲ್ಲಿ ಹೇಳಿಕೊಳ್ಳುವುದು. ಗೋವುಗಳನ್ನು ಗೋ ಭಕ್ಷಕರಿಗೆ 2000 ಕಮಿಷನ್ ಕೊಟ್ಟರೆ ಇವರೇ ಗೋ ಭಕ್ಷಕರಿಗೆ ಸಾಗಾಟ ಮಾಡಿ ಕೊಡುತ್ತಾರೆ. ಇವರುಗಳಿಂದ ಹಿಂದುತ್ವದ ಪಾಠ ಕಲಿಯುವ ಅವಶ್ಯಕತೆ ಇಲ್ಲ.
ಹೆಸರಿಗಷ್ಟೇ ಗೋಸೇವೆ ಎಂದರೆ ಸಾಕಾಗದು ಗೋವಿನ ರಕ್ಷಣೆ ಹೇಗೆ ಮಾಡಬೇಕೆಂಬ ಮನಸ್ಸು ಕೂಡ ಇರಬೇಕು. ಕೇಸರಿ ಶಾಲು ಹಾಕಿದ ತಕ್ಷಣ ಹಿಂದು ಆಗುವುದಿಲ್ಲ. ಕೇಸರಿಗೆ ಗೌರವ ಕೊಟ್ಟು ಬದುಕಲು ಕಲಿಯಬೇಕು.
ಶಿಕ್ಷಣ ಶಾಲೆ ಕಾಲೇಜು ಗಳೆಂದರೆ ಒಂದು ಪ್ರಜಾಪ್ರಭುತ್ವ ದೇಶದಲ್ಲಿ ಸರ್ವಧರ್ಮ ಒಂದೇ ಎನ್ನುವ ಮನೋಭಾವನೆ ಇರಬೇಕು. ಶಿಕ್ಷಣ ಸಂಸ್ಥೆ ನಡೆಸುವ ಮುಖ್ಯ ಶಿಕ್ಷಕರು ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಬೇಕು. ಆಗ ಮಾತ್ರ ಒಬ್ಬ ಉತ್ತಮ ಶಿಕ್ಷಕ ಆಗಲು ಸಾಧ್ಯ. ಕೋಮು ದ್ವೇಷ ಜಾತಿ ಜಾತಿ ಮಧ್ಯ ವಿಷ ಬೀಜ ಬಿತ್ತುವ ಶಿಕ್ಷಕರಿಗೆ ಪ್ರಶಸ್ತಿ ಕೊಡಲು ಇದು ಬಿಜೆಪಿ ಸರ್ಕಾರ ಅಲ್ಲ. ಇದು ಕಾಂಗ್ರೆಸ್ ಇಲ್ಲಿ ಉತ್ತಮ ಶಿಕ್ಷಕರಿಗೆ ಹಾಗೂ ಸಮಾಜದಲ್ಲಿ ಕೋಮು ದ್ವೇಷ ಹರುಡದವರಿಗೆ ಮಾತ್ರ ಪ್ರಶಸ್ತಿ ನೀಡಿದೆ.
ಬಿಜೆಪಿಯ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಪ್ರಶಸ್ತಿ ಕೊಡದೆ ಇದ್ದಲ್ಲಿ ಕುಂದಾಪುರದಲ್ಲಿ ಪ್ರತಿಭಟನೆ ಮಾಡುವ ಹೇಳಿಕೆ ನೀಡಿದ್ದಾರೆ. ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಇಂಥವರಿಗೆ ಪ್ರಶಸ್ತಿ ಕೊಟ್ಟರೆ ಸರ್ಕಾರದ ಗೌರವ ಹಾಳಾಗುತ್ತದೆ. ಆದ್ದರಿಂದ ಈ ಹೆದರಿಸುವ ಹೇಳಿಕೆಗೆ ಮಾನ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರ ವಿರುದ್ಧ ಉಡುಪಿ ಜಿಲ್ಲಾ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ಎಚ್ಚರಿಕೆಯ ಹೇಳಿಕೆ ನೀಡಿದ್ದಾರೆ..