• Mon. Sep 9th, 2024

Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ......

ಕೋಟ ಸಹಕಾರಿ ವ್ಯವಸಾಯಕ ಸಂಘದ ಸಿಬ್ಬಂದಿ ಬೀಳ್ಕೊಡುಗೆ ಸಮಾರಂಭ ಮತ್ತು ಸಿಬ್ಬಂದಿ ತರಬೇತಿ ಕಾರ್ಯಾಗಾರ

ByKiran Poojary

Sep 5, 2024

ಕೋಟ: ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ, ಇವರ ಆಶ್ರಯದಲ್ಲಿ ಸಂಘದ ಸೇವೆಯಿಂದ ಇತ್ತೀಚೆಗೆ ನಿವೃತ್ತರಾಗಿರುವ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕೆ. ರಾಧ ಶೇಖರ್ ಇವರಿಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಮತ್ತು ಸಂಘದ ಸಿಬ್ಬಂದಿಯವರಿಗೆ ತರಬೇತಿ ಕಾರ್ಯಾಗಾರ ಸೆ.1 ರಂದು ಆದಿತ್ಯವಾರ ಸಂಘದ ಪ್ರಧಾನ ಕಛೇರಿಯ ಬಿ. ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಜರಗಿತು. ಸಂಘದ ಅಧ್ಯಕ್ಷ ಡಾ| ಕೃಷ್ಣ ಕಾಂಚನ್  ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ 38 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಸಹಾಯಕ ಕಾರ್ಯನಿರ್ವಹಣಾಧಿಕಾರಿ  ಕೆ. ರಾಧ ಶೇಖರ್ ಇವರನ್ನು ಸಭಾ ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಸಂಘದ ಉಪಾಧ್ಯಕ್ಷ ಜಿ. ರಾಜೀವ ದೇವಾಡಿಗ, ನಿರ್ದೇಶಕರಾದ  ಟಿ. ಮಂಜುನಾಥ, ಕೆ. ಉದಯಕುಮಾರ ಶೆಟ್ಟಿ,  ರವೀಂದ್ರ ಕಾಮತ್,  ಮಹೇಶ ಶೆಟ್ಟಿ,  ರಂಜಿತ್ ಕುಮಾರ್,  ಪ್ರೇಮಾ ಎಸ್. ಪೂಜಾರಿ,  ರಶ್ಮಿತಾ,  ಗೀತಾ ಶಂಭು ಪೂಜಾರಿ,  ಬಾಸ್ಕರ ಶೆಟ್ಟಿ, ಅಚ್ಯುತ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಶರತ್ ಕುಮಾರ್ ಶೆಟ್ಟಿ,ನಿವೃತ್ತ ವ್ಯವಸ್ಥಾಪಕರಾದ  ಗೋವಿಂದ ಪೂಜಾರಿ ,ಮಾಸ್ಟರ್ ಮೈಂಡ್ ಎಂಟರ್‌ಪ್ರೆöÊಸಸ್, ಮಂಗಳೂರು ಇದರ ತರಬೇತುದಾರರಾದ  ಶ್ರೀಶ ಕೆ. ಎಮ್. ಮತ್ತು  ಜಗದೀಶ, ನಿವೃತ್ತ ಸಿಬ್ಬಂದಿ ಕೆ. ರಾಧರವರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಘದ ಮಾಜಿ ಅಧ್ಯಕ್ಷ ನಿರ್ದೇಶಕ  ಜಿ. ತಿಮ್ಮ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಸಿಬ್ಬಂದಿಗಳಾದ ಸಹನಾ ಪ್ರಾರ್ಥಿಸಿದರು, ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪಕರಾದ  ಸುಧಾಕರ ಕೆ. ಇವರು ಸನ್ಮಾನ ಪತ್ರ ವಾಚಿಸಿದರು. ಸಹಾಯಕ ಕಾರ್ಯನಿರ್ವಹಣಾಧಿಕಾರಿ  ಸುರೇಶ ಕಾಂಚನ್ ಇವರು ಧನ್ಯವಾದ ಸಮರ್ಪಿಸಿದರು. ಸಭಾ ಕಾರ್ಯಕ್ರಮದ ನಂತರ ಮಾಸ್ಟರ್ ಮೈಂಡ್ ಎಂಟರ್‌ ಪ್ರೈಸಸ್, ಮಂಗಳೂರು ಇದರ ತರಬೇತುದಾರರಾದ  ಶ್ರೀಶ ಕೆ. ಎಮ್. ಮತ್ತು  ಜಗದೀಶ ಇವರಿಂದ ಸಂಘದ ಸಿಬ್ಬಂದಿಯವರಿಗೆ “ತರಬೇತಿ ಕಾರ್ಯಾಗಾರ” ನಡೆಯಿತು. ತದನಂತರ ತರಬೇತುದಾರರನ್ನು ಸಂಘದ ಪರವಾಗಿ ಗೌರವಿಸಲಾಯಿತು.

ಕೋಟ ಸಹಕಾರಿ ವ್ಯವಸಾಯಕ ಸಂಘ ಕೋಟ, ಇವರ ಆಶ್ರಯದಲ್ಲಿ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಮತ್ತು ಸಂಘದ ಸಿಬ್ಬಂದಿಯವರಿಗೆ ತರಬೇತಿ ಕಾರ್ಯಾಗಾರವನ್ನು ಸಂಘದ ಅಧ್ಯಕ್ಷ ಡಾ| ಕೃಷ್ಣ ಕಾಂಚನ್  ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಜಿ. ರಾಜೀವ ದೇವಾಡಿಗ, ನಿರ್ದೇಶಕರಾದ  ಟಿ. ಮಂಜುನಾಥ, ಕೆ. ಉದಯಕುಮಾರ ಶೆಟ್ಟಿ,  ರವೀಂದ್ರ ಕಾಮತ್,  ಮಹೇಶ ಶೆಟ್ಟಿ,  ರಂಜಿತ್ ಕುಮಾರ್,  ಪ್ರೇಮಾ ಎಸ್. ಪೂಜಾರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *