ಕೋಟ: ದುಡಿದು ಕುಟುಂಬ ಸಾಕಬೇಕಾದ ಕೋಟ ಮಣೂರಿನ 27 ವರ್ಷದ ಯುವಕ ರೋಶನ್ 2 ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದು ವಾರಕ್ಕೆ 2 ಬಾರಿ ಡಯಾಲಿಸಿಸ್ ಚಿಕಿತ್ಸೆಗೆ ಮತ್ತು ಕಿಡ್ನಿ ಟ್ರಾನ್ಸ್ಲೇಟ್‌ಗೆ ಲಕ್ಷಾಂತರ ರೂಪಾಯಿ ಹಣಕ್ಕೆ ಹೆಣಗಾಗುಡುವ ದಾರುಣ ಸ್ಥಿತಿಯ ಯುವಕನೀಗೆ ಬೇಕು ಸಾರ್ವಜನಿಕರ ನೆರವಿನ ಹಸ್ತ.
ಕೋಟ ಮಣೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಕ್ರೇಸ್ತ ಕುಟುಂಬದ ಕಟ್ಟು ಮಸ್ತು ದೇಹದ ರೋಶನ್ ಬೇರೆಯವರ ಜೊತೆಯಲ್ಲಿ ವೆಲ್ಡಿಂಗ್ ವೃತ್ತಿ ಮಾಡಿಕೊಂಡು ಸಂಸಾರವನ್ನು ಸಾಗಿಸುತ್ತಿದ್ದವರೀಗೆ 3 ವರ್ಷದಹಿಂದೆ ಕೋಟೇಶ್ವರ ಬಳಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅಫಘಾತದಿಂದ ಕಾಲು ಮೂಳೆ ಮುರಿತಗೊಂಡು ಚಿಕಿತ್ಸೆ ಪಡೆಯುತ್ತಿರುವಂತೆ ವೈದ್ಯರು ಕಿಡ್ನಿ ವೈಪಲ್ಯಗೊಂಡುದು ತಿಳಿಸಿದಾಗ ಸಂಸಾರಕ್ಕೆ ದಿಕ್ಕೆ ತೋಚದಂತಾಗಿದೆ.
ತಂದೆಯನ್ನು ಕಳೆದುಕೊಂಡ ರೋಶನ್ ಇದೀಗ ಕೆಲಸ ಮಾಡದ ಸ್ಥಿತಿಯಲ್ಲಿದ್ದು ವೈದ್ಯರು ಕಿಡ್ನಿ ವರ್ಗಾವಣೆ ಮಾಡಿದಲ್ಲಿ ಬದುಕುಕಟ್ಟಿಕೊಳ್ಳುವ ಭರವಸೆ ನೀಡಿದ್ದಾರೆ. 7ಲಕ್ಷ ರೂ ವೆಚ್ಛ ತಗಲುವ ವೈದ್ಯರ ವೆಚ್ಛಕ್ಕೆ ತಾಯಿ ಮೇರಿ ಅಂತೋನಿಯವರು ಪ್ರಾಯದ ಯುವಕನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಹೃದಯವಂತ ದಾನಿಗಳು ಮಗನ ಬ್ಯಾಂಕ್ ಖಾತೆಗೆ ಹಣನೀಡುವಂತೆ ವಿನಂತಿಸಿದ್ದು ಯೂನಿಯನ್ ಬ್ಯಾಂಕ್ ಖಾತೆ ಸಂಖ್ಯೆ -520481031993803. IFSCCODE UBIN0901784 ಗೂಗಲ್ ಪೇ, ನಂಬರ್ 9353895927 ನೀಡಬಹುದು .