ಕೋಟ : ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚೌತಿ ಪ್ರಯಕ್ತ ಹನ್ನೆರಡು ಕಾಯಿ ಗಣಹೋಮ ಸಂಪನ್ನವಾಯಿತು. ತೀರ್ಥಬೈಲ್ ರಾಮಕೃಷ್ಣ ಅಡಿಗ ನೇತ್ರತ್ವದಲ್ಲಿ ಫಲಪಂಚಾಮೃತ ಅಭಿಷೇಕ,ರಂಗಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.ವಿಘ್ನೇಶ್ವರ ಚಡಗ ಹೋಮಾರ್ಥಿಯಾಗಿ ಸೇವೆ ಸಲ್ಲಿಸಿದರು.
ಸಾಮಾಜಿಕ ಸಾಂಸ್ಕöತಿಕ ಧಾರ್ಮಿಕ ಸೇವಾ ಸಂಘದ ಅಧ್ಯಕ್ಷ ಪಿ.ರಾಮಕೃಷ್ಣ ಚಡಗ,ಖಜಾಂಜಿ ಪಿ.ಚಂದ್ರಶೇಖರ ಹೊಳ್ಳ, ಸದಸ್ಯರಾದ ಯಶೋಧ ಹೊಳ್ಳ, ರಾಘವೇಂದ್ರ ಉಪಾಧ್ಯ,ಪಾಮರ ಚಡಗ ಇತರರು ಉಪಸ್ಥಿತರಿದ್ದರು. ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶ್ರೀ ಗಣೇಶ ಚೌತಿ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಧಕ್ರಮಗಳು ಜರಗಿದವು.