ಉಡುಪಿ: ಸಮಾನತೆಯನ್ನು ಬೋಧಿಸಿ ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎಂದು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುಗಳನ್ನು ನಂಬುವ ಕುಲದವರಿಂದಲೇ ನಾರಾಯಣಗುರುಗಳಿಗೆ ಮತ್ತು ಮಹಿಳೆಯೋರ್ವರಿಗೆ ಅವಮಾನವಾದ ಘಟನೆ ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿಯಲ್ಲಿ ನಡೆದಿದ್ದು, ಹೆಜಮಾಡಿ ಬಿಲ್ಲವ ಸಂಘದ ಮುಂಬೈ ಕಮಿಟಿ ಮೀಟಿಂಗ್ನಲ್ಲಿ ಅಶ್ವಜಿತ್ ಎನ್ನುವ ವ್ಯಕ್ತಿ, ಬಿಲ್ಲವ ಸಮಾಜದ ಮಹಿಳೆಯ ಘನತೆಗೆ ಧಕ್ಕೆ ತಂದ ವಿಷಯಕ್ಕೆ ಸಂಬಂಧಿಸಿ ಹಿಂದಿನ ಅಧ್ಯಕ್ಷರ ಕ್ಷಮೆಯಾಚನೆಗೆ ಲೋಕೇಶ್ ಪೂಜಾರಿಯವರು ಮುಂದಾದಲ್ಲಿ ಆಗಸ್ಟ್ 20 ರಂದು ನಡೆಯುವ ನಾರಾಯಣ ಗುರುಜಯಂತಿ ಆಚರಣೆಯ ಕಾರ್ಯಕ್ರಮಕ್ಕೆ ಹೆಜಮಾಡಿ ಬಿಲ್ಲವ ಮಹಿಳೆಯರು ಯಾರೂ ಬರುವುದಿಲ್ಲ ಎಂದು ಹೇಳುವ ಮೂಲಕ ನಾರಾಯಣ ಗುರುಗಳಿಗೆ ಅಗೌರವ ತೋರಿ, ಅಸಂಖ್ಯಾತ ಗುರುಗಳ ಅನುಯಾಯಿಗಳೂ ಸೇರಿದಂತೆ ಬಿಲ್ಲವ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಹಿನ್ನಲೆಯಲ್ಲಿ ಸೆ. 17ರಂದು ಗುರುಗಳ ಅನುಯಾಯಿಗಳು, ಹಲವಾರು ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ C. A. ಅಶ್ವಜಿತ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಹಲವಾರು ಬಿಲ್ಲವ ಮುಖಂಡರು ಅವರು ಮಾಡಿದ್ದೂ ತಪ್ಪೇ, ಅವರಿಗೆ ಬುದ್ಧಿ ಹೇಳಿ ಕ್ಷಮೆ ಕೇಳಿಸುತ್ತೇವೆ ಸ್ವಲ್ಪ ಕಾಲಾವಕಾಶ ನೀಡಿ ಎಂದು ವಿನಂತಿಸಿರುತ್ತಾರೆ. ಅಲ್ಲದೇ ಅವರ ತಮ್ಮ ಪ್ರಬೋದಚಂದ್ರರವರು ಹೌದು ನನ್ನ ಅಣ್ಣ ಮಾತಿನ ಭರದಲ್ಲಿ ಮಾತನಾಡಿದ್ದು ತಪ್ಪಾಗಿದೆ ನಾನೇ ಅವರಲ್ಲಿ ಮಾತನಾಡಿ ಕ್ಷಮೆಯಾಚಿಸಲು ಹೇಳುತ್ತೇನೆ ಎಂದು ಕೆಲವೊಂದು ಮಾಧ್ಯಮ ಮಿತ್ರರಲ್ಲಿ ವಿನಂತಿಸಿದ್ದಾರೆ.