News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ -ಮಹಿಳಾ ವೇದಿಕೆ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮ

ಕೋಟ: ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ  ಸಾಲಿಗ್ರಾಮ ಅಂಗ ಸಂಸ್ಥೆ ಇದರ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ ಕಾರ್ಯಕ್ರಮಗಳು, ಗುರು ನರಸಿಂಹ ದೇವಸ್ಥಾನದ ಜ್ಞಾನ ಮಂದಿರದಲ್ಲಿ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ. ಹೊಳ್ಳ ವಹಿಸಿದ್ದರು.
ಸಾಲಿಗ್ರಾಮ ಶ್ರಿ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್ .ಕಾರಂತ ಶುಭಾûಶಂಸನೆಗೈದರು.

ಮುಖ್ಯ ಅಭ್ಯಾಗತರಾಗಿ ಸರಕಾರಿ ಪ್ರೌಢಶಾಲೆ ಮಣುರು ಸಹ ಶಿಕ್ಷಕಿ ಸುವರ್ಣ .ಜೆ .ನಾವಡ , ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆ ಇದರ ಅಧ್ಯಕ್ಷ ಎ. ಶ್ರೀಪತಿ ಅಧಿಕಾರಿ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಸಾಧಕರಾದ ಡಾ.ಚಂದನಾ. ಎಸ್. ಐತಾಳ ಮತ್ತು ಅಂಗನವಾಡಿ ನಿವೃತ್ತ ಶಿಕ್ಷಕಿ  ಲಕ್ಷಿ÷್ಮ ಉರಾಳ ಇವರನ್ನು ಸನ್ಮಾನಿಸಲಾಯಿತು.
ವಿಶೇಷ ಪ್ರತಿಭಾ ಪುರಸ್ಕಾರವಾಗಿ ನಾಟಾ ಪರೀಕ್ಷೆಯಲ್ಲಿ ರಾಜ್ಯಕ್ಕೆ 7ನೇ ರಾಂಕ್ ಪಡೆದ ವಿದ್ಯಾರ್ಥಿನಿ ಶ್ರೀಲಕ್ಷಿ÷್ಮ ಸೋಮಯಾಜಿ ಮತ್ತು  ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರಾಂಕ್ ಪಡೆದ ಶ್ರೀಪ್ರಿಯಾ ಅಡಿಗ ಇವರನ್ನು ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಅಶಕ್ತ ಮಹಿಳೆಯರಿಗೆ ನೆರವು ನೀಡಲಾಯಿತು. ಕಾರ್ಯದರ್ಶಿ ಶಿವಪ್ರಭ ಆಲ್ಸೆವರದಿ ಸಲ್ಲಿಸಿದರು. ಉಪಾಧ್ಯಕ್ಷೆ ರೆವತಿ ಐತಾಳ ಸ್ವಾಗತಿಸಿದರು. ಉಪಾಧ್ಯಕ್ಷೆ ವಿಜಯಲಕ್ಷಿ÷್ಮ ತುಂಗ ವಂದಿಸಿದರು. ಕಾರ್ಯಕ್ರಮದಲ್ಲಿ ವಾಯ್ಸ್ ಆಫ್ ಕರಾವಳಿ ಮತ್ತು ನಮ್ಮ ಟಿ.ವಿ .ಸೂಪರ್ ಸಿಂಗರ್ ಖ್ಯಾತಿಯ ಧಾರಿಣಿ ಕುಂದಾಪುರ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ವೇದಿಕೆಯ ಖಜಾಂಚಿ ಪೂರ್ಣಿಮಾ ಅಧಿಕಾರಿ ಲೆಕ್ಕಪತ್ರ ಮಂಡಿಸಿ ,ಕಾರ್ಯಕ್ರಮ ನಿರೂಪಿಸಿದರು.

ಮಹಿಳಾ ವೇದಿಕೆ ಕೂಟ ಮಹಾ ಜಗತ್ತು ಸಾಲಿಗ್ರಾಮ  ಸಾಲಿಗ್ರಾಮ ಅಂಗ ಸಂಸ್ಥೆ ಇದರ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಡಾ.ಚಂದನಾ. ಎಸ್. ಐತಾಳ ಮತ್ತು ಅಂಗನವಾಡಿ ನಿವೃತ್ತ ಶಿಕ್ಷಕಿ  ಲಕ್ಷಿ÷್ಮ ಉರಾಳ ಇವರನ್ನು ಸನ್ಮಾನಿಸಲಾಯಿತು. ಸಾಲಿಗ್ರಾಮ ಶ್ರಿ ಗುರು ನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್ .ಕಾರಂತ, ಮಹಿಳಾ ವೇದಿಕೆ ಅಧ್ಯಕ್ಷೆ ಯಶೋದ ಸಿ. ಹೊಳ್ಳ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *