
ಕೋಟ: ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘ ಕೋಟ ಇದರ ವಾರ್ಷಿಕ ಮಹಾಸಭೆ ಶನಿವಾರ ಸಂಘದ ಅಧ್ಯಕ್ಷ ಶ್ರೀ ಸಿದ್ಧಿ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ.ಕೆ ಅವರು ಸಭೆಗೆ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟದ ನಿರ್ದೇಶಕ ಸತೀಶ.ಕೆ ನಾಯ್ಕ ಅವರನ್ನು ಮತ್ತು ಕಟ್ಟಡ ಮಾಲೀಕರಾದ ನಮಿತಾ ಪ್ರಭು ಅವರನ್ನು ಗೌರವಿಸಲಾಯಿತು. ಉಪಾಧ್ಯಕ್ಷೆ ಸರೋಜಾ ಮೋಹನ್ , ನಿರ್ದೇಶಕರುಗಳಾದ ನಾಗೇಶ್ ಪೂಜಾರಿ ಬಾಳೆಬೆಟ್ಟು , ಅಶೋಕ ಪೂಜಾರಿ ಸಾಲಿಗ್ರಾಮ , ಜಯಂತಿ ಮಣೂರು ಪಡುಕರೆ , ಸಂತೋಷ ಪೂಜಾರಿ ಮಣೂರು , ನವೀನ ಬಣ್ಣದಬೈಲು, ಜನಾರ್ದನ ಪೂಜಾರಿ ಚಿತ್ರಪಾಡಿ, ಕೋಟಿಪೂಜಾರಿ ಮಧುವನ , ಪುಷ್ಪ.ಕೆ ಹಂದಟ್ಟು, ಉಪಸ್ಥಿತರಿದ್ದರು.
ಸಂಘದ ನೌಕರ ಮನೋಜ ಪೂಜಾರಿ ಸ್ವಾಗತಿಸಿದರು .ಕಾರ್ಯಕ್ರಮ ನಿರೂಪಣೆಯನ್ನು ಸುಜಾತಾ ಬಾಯರಿ ನೆರವೇರಿಸಿಕೊಟ್ಟರು. ನಿರ್ದೇಶಕಿ ಪುಷ್ಪ.ಕೆ ಹಂದಟ್ಟು ವಂದಿಸಿದರು.
ಕೋಟಿ ಚೆನ್ನಯ್ಯ ಸೌಹಾರ್ದ ಸಹಕಾರಿ ಸಂಘ ಕೋಟ ಇದರ ವಾರ್ಷಿಕ ಮಹಾಸಭೆ ಶನಿವಾರ ಸಂಘದ ಅಧ್ಯಕ್ಷ ಶ್ರೀ ಸಿದ್ಧಿ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನೆರವೇರಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾರಾಯಣ.ಕೆ, ಉಪಾಧ್ಯಕ್ಷೆ ಸರೋಜಾ ಮೋಹನ್ , ನಿರ್ದೇಶಕರುಗಳಾದ ನಾಗೇಶ್ ಪೂಜಾರಿ ಬಾಳೆಬೆಟ್ಟು , ಅಶೋಕ ಪೂಜಾರಿ ಸಾಲಿಗ್ರಾಮ , ಜಯಂತಿ ಮಣೂರು ಪಡುಕರೆ ಮತ್ತಿತರರು ಇದ್ದರು.
Leave a Reply