News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅನುತ್ತೀರ್ಣ ವಿದ್ಯಾರ್ಥಿಗಳ ಶಾಲಾ ದಾಖಲಾತಿಗೆ ನಿಗಾ ವಹಿಸಲು ಸೂಚನೆ

ಹಾಸನ :- ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ವರ್ಷದಲ್ಲಿ ಮೂರು ಬಾರಿ  ಬರೆಯಲು ಅವಕಾಶ ನೀಡಲಾಗಿದ್ದು, ಆದರೂ ಅನುತ್ತೀರ್ಣರದಲ್ಲಿ ಅಂತಹ ವಿದ್ಯಾರ್ಥಿಗಳು ಪುನಃ ಶಾಲಾ ಕಾಲೇಜುಗಳಿಗೆ ದಾಖಲಾಗಿ ಕಲಿಯಲು ಅವಕಾಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ  ಎಸ್.ಮಧು ಬಂಗಾರಪ್ಪ ಅವರು  ತಿಳಿಸಿದ್ದಾರೆ.

ಅರಕಲಗೂಡಿನ ಶಿಕ್ಷಕರ ಭವನದ ಆವರಣದಲ್ಲಿಂದು ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅನುರ್ತೀಣರಾದ ವಿದ್ಯಾರ್ಥಿಗಳನ್ನು  ಶಾಲೆಗೆ ಪುನಃ ದಾಖಲೆ ಮಾಡಿಕೊಳ್ಳಲು ಶಿಕ್ಷಕರು ಮುತುವರ್ಜಿವಹಿಸಿ ಎಂದು ತಿಳಿಸಿದ ಸಚಿವರು ಆ ಮಕ್ಕಳ ಕಲಿಕೆಗೆ ಕಾಳಜಿವಹಿಸಿ ವಿಶೇಷ ತರಬೇತಿ ನೀಡಿ ಮಕ್ಕಳಿಗೆ  ಸಹಕಾರ ನೀಡುವಂತೆ ತಿಳಿಸಿದರು.

ಶಾಲೆಗಳಲ್ಲಿ ಕಡ್ಡಾಯವಾಗಿ ಸಂವಿಧಾನ ಪೀಠಿಕೆಯನ್ನು ತಪ್ಪದೆ ಪ್ರತಿದಿನ  ಓದಿಸಲು ಶಿಕ್ಷಕರು ಕ್ರಮವಹಿಸುವಂತೆ ತಿಳಿಸಿದರಲ್ಲದೆ, ಶಿಕ್ಷಕರು ದೇಶಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ತಿಳಿಸಿದರು.

ಮಕ್ಕಳ ಕಲಿಕೆಗೆ ಉತ್ತಮ ಆರೋಗ್ಯ ಕೂಡ ಬಹುಮುಖ್ಯ ಈ ನಿಟ್ಟಿನಲ್ಲಿ ಮಧ್ಯಾಹ್ನದ ಬಿಸಿಯೂಟ, ಹಾಲು, ಮೊಟ್ಟೆ ನೀಡಲಾಗುತ್ತಿದೆ. ಸರ್ಕಾರದಿಂದ ವಾರದಲ್ಲಿ ಎರಡು ದಿನ ಮೊಟ್ಟೆ ನೀಡಲಾಗುತ್ತಿತ್ತು. ಅಪೌಷ್ಠಿಕತೆ ನಿರ್ವಹಣೆಗಾಗಿ ವಾರದಲ್ಲಿ 6 ದಿನ ಮೊಟ್ಟೆ ನೀಡಲಾಗುತ್ತದೆ  ಅಜೀಂ ಪ್ರೇಮ್ ಜಿ ಸಂಸ್ಥೆಯು 1591 ಕೋಟಿ ರೂ ಹಣ ಬಿಡುಗಡೆ ಮಾಡಿದ್ದು,  ವಾರದಲ್ಲಿ ನಾಲ್ಕು ದಿನ ಮೊಟ್ಟೆ ನೀಡಲು ಆರ್ಥಿಕ ನೆರವು ನೀಡಿದೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ 1008 ಎಲ್ ಕೆ.ಜಿ ಮತ್ತು ಯು.ಕೆ.ಜಿ. ತರಗತಿ ಪ್ರಾರಂಭಿಲಾಗಿದ್ದು, 41,800 ಮಕ್ಕಳು ದಾಖಲಾಗಿದ್ದಾರೆ. ರಾಜ್ಯಾದ್ಯಂತ ಎಲ್ ಕೆ. ಜಿ ಮತ್ತು ಯು.ಕೆ.ಜಿ. ತರಗತಿ ಗಳನ್ನು ಪ್ರಾರಂಭಿಸಲಾಗು ವುದು ಎಂದು ಸಚಿವರು ತಿಳಿಸಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಬೇಕು ಎಂಬ ಮನೋಭಾವನೆ ಬರಬೇಕು ಎಂದರು.

ರಾಜ್ಯದಲ್ಲಿ 500 ಕೆ.ಪಿ.ಎಸ್.ಸಿ.ಶಾಲೆಗಳ ಪ್ರಾರಂಭ ಮಾಡಲಾಗುವುದು ಇದರಿಂದ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳು ಕೆ.ಪಿ.ಎಸ್.ಶಾಲೆಗಳಲ್ಲಿ  ವೀಲಿನವಾಗುತ್ತವೆ ಎಂದು ತಿಳಿಸಿದರು.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳೂ ಸೇರಿದಂತೆ ಒಟ್ಟು 56 ಸಾವಿರ ಶಾಲೆಗಳಿದ್ದು, 1.08 ಕೋಟಿ ಮಕ್ಕಳಿದರೆ ಕಳೆದ 9 ತಿಂಗಳಲ್ಲಿ 12,500 ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಕಲ್ಯಾಣ ಕರ್ನಾಟಕಕ್ಕೆ 5800  ಶಿಕ್ಷಕರನ್ನು ನೇಮಕಾತಿ ಮಾಡಲಾಗುವುದು ಎಂದ ಸಚಿವರು 45 ಸಾವಿರ ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. 

ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಯ 25 ಸಾವಿರ ಮಕ್ಕಳಿಗೆ  ಉಚಿತ ಸಿ.ಇ.ಟಿ ಕೋಚಿಂಗ್ ನೀಡಲು ಕ್ರಮವಹಿಸಲಾಗಿದೆ ಎಂದ ಸಚಿವರು ಮುಂದಿನ ದಿನಗಳಲ್ಲಿ ಕಟ್ಟಡಗಳಿಗೂ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ನಂತರ ಸಚಿವರು ಅರಕಲಗೂಡಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮನೆ ವೀಕ್ಷಣೆ ಮಾಡಿದರು.

ಸಂಸದರಾದ ಶ್ರೇಯಸ್ ಪಟೇಲ್ ಅವರು ಮಾತನಾಡಿ ಸಚಿವರ ತಂದೆ ಬಂಗಾರಪ್ಪನವರು ಈ ಹಿಂದೆ ಶೈಕ್ಷಣಿಕ ಕ್ಷೇತ್ರದಲ್ಲಿ ದೇಶಮೆಚ್ಚುವ ಕೆಲಸ ಮಾಡಿದ್ದಾರೆ. ಅವರು ಮಾಡಿರುವ ಸರ್ವಾಂಗೀಣ ಸಾಧನೆ ಇಂದೂ ಸಹ ಅಜರಾಮರವಾಗಿದೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಕೂಡ ಬಡ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಆಶಯ ಹೊಂದಿದ್ದು, ಇಲಾಖೆಯಲ್ಲಿರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಹೆಣ್ಣಿರುತ್ತಾಳೆ ಎಂಬ ಮಾತಿದೆ. ಆದರೆ ವಿವಿಧ ಉನ್ನತ ಹುದ್ದೆ ಅಲಂಕರಿಸಿರುವ ಯಶಸ್ವಿ ಪುರುಷರ ಹಿಂದೆ ಶಿಕ್ಷಕರು ಇರುತ್ತಾರೆ ಎಂಬುದು ನನ್ನ ಭಾವನೆ ಎಂದರು.

   ಶಾಸಕರಾದ ಎ.ಮಂಜು ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಖಾಸಗೀ ಶಾಲೆಯಲ್ಲಿ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ ಎಂಬ ತಪ್ಪು ಕಲ್ಪನೆ ಪೋಷಕರಲ್ಲಿ ಇದೆ  ಎಂದರು. ಕಲ್ಯಾಣ ಕರ್ನಾಟಕದಲ್ಲಿ ಪ್ರಾರಂಭಿಸಿರುವ ರೀತಿಯಲ್ಲಿ ರಾಜ್ಯದೆಲ್ಲೆಡೆ ಎಲ್ ಕೆ.ಜಿ ಮತ್ತು ಯು.ಕೆ.ಜಿ. ತರಗತಿ ಪ್ರಾರಂಭಿಸುವAತೆ ಸಚಿವರಲ್ಲಿ ಮನವಿ ಮಾಡಿದರು.

  ತಮ್ಮ ಹುಟ್ಟುರಾದ ಹನ್ಯಾಳಿನಲ್ಲಿ  ಹಳೆಯ ವಿದ್ಯಾರ್ಥಿಗಳ ಸಂಘದೊAದಿಗೆ  ತಾವು ಸೇರಿ ಮಕ್ಕಳ ಮನೆ ಪ್ರಾರಂಭಿಸಲಾಗಿದ್ದು ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಶಿಕ್ಷಕರುಗಳು ಹೆಚ್ಚು ಒತ್ತು ನೀಡಿ  ಮಕ್ಕಳಿಗೆ ಉತ್ತಮವಾಗಿ ಕಲಿಸುತ್ತಿದ್ದಾರೆ ಎಂದರು.

ಸಮುದಾಯ ಶಾಲೆಗಳಲ್ಲಿ ಆಂಗ್ಲ ಭಾಷೆಗಳಲ್ಲಿ  ವಿದ್ಯಾಭ್ಯಾಸ ನೀಡುವುದರಿಂದ  ಮಕ್ಕಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ ಎಂದ ಶಾಸಕರು ಶೈಕ್ಷಣಿಕ ಯಶಸ್ಸಿಗೆ ಶಿಕ್ಷಕರ ಸಹಕಾರ ಬಹುಮುಖ್ಯ ಎಂದರು.

ಹುಣಸೂರಿನ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಗಿರೀಶ್ ಹೆಚ್.ಎನ್ ಅವರು ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪ್ರದೀಪ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಚಂದ್ರಶೇಖರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹಾಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಾಂಡು,ತಹಶೀಲ್ದಾರ್ ಸೌಮ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
********************___

Leave a Reply

Your email address will not be published. Required fields are marked *