
ಸಂಸದ ಬಿ ವೈ ರಾಘವೇಂದ್ರರವರೇ ಪುರುಸೊತ್ತು ಮಾಡಿಕೊಂಡು ತಾಳಗುಪ್ಪ ಬಸ್ ನಿಲ್ದಾಣ ಹಿಂಭಾಗವಿರುವ ಗಬ್ಬೆದ್ದ ಶೌಚಾಲಯ ಉಪಯೋಗಿಸುವಂತೆ ಪ್ರಯಾಣಿಕರ ಪ್ರವಾಸಿಗರ ಮನವಿ – ತಾಳಗುಪ್ಪ ಗ್ರಾಮ ಪಂಚಾಯಿತಿ ಅವ್ಯವಹಾರ ಅಕ್ರಮ ತನಿಖೆ ಬ್ರೇಕ್ ಹಾಕುವಂತೆ ಸಂಸದ ಬಿ ವೈ ರಾಘವೇಂದ್ರ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ತೀವ್ರ ಒತ್ತಡ ಗಂಭೀರ ಆರೋಪದತ್ತ ಪ್ರಜ್ಞಾವಂತರು
ತಾಳಗುಪ್ಪ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ವಿಧಾನಸಭಾ ಕ್ಷೇತ್ರದ *ತಾಳಗುಪ್ಪವೂ ಎರಡೂ ಜಿಲ್ಲೆಗಳಾದ ಶಿವಮೊಗ್ಗ ಹಾಗೂ ಕಾರವಾರ ಜಿಲ್ಲೆಯ ಗಡಿಭಾಗವಾಗಿದ್ದು, ಪ್ರತಿ ನಿತ್ಯ ಸಾವಿರಾರು ಪ್ರಯಾಣಿಕರು ಪ್ರವಾಸಿಗರು ರೈಲ್ವೆ, ಬಸ್ಸು, ಸ್ವಂತ ವಾಹನಗಳಲ್ಲಿ ಸಂಚಾರ ಮಾಡುತ್ತಿದ್ದು ಸಾರ್ವಜನಿಕರಿಗೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಮಾತ್ರಾ ಗಗನಕುಸುಮವಾಗಿದೆ. ತಾಳಗುಪ್ಪ ಬಸ್ ನಿಲ್ದಾಣ ಹಿಂಭಾಗದಲ್ಲಿರುವ ಸಾರ್ವಜನಿಕ ಶೌಚಾಲಯ ಸಂಪೂರ್ಣ ಗಬ್ಬೆದ್ದು ಹೋಗಿದ್ದು ದಿನನಿತ್ಯ ದೂರ ದೂರದ ಊರುಗಳಿಗೆ ತೆರಳಲು ಆಗಮಿಸುವ ಪ್ರವಾಸಿಗರು ಪ್ರಯಾಣಿಕರುಗಳು ಶೌಚಾಲಯ ಉಪಯೋಗಿಸಲು ಅದರಲ್ಲೂ ಮಹಿಳೆಯರ ಪಾಡು ಹೇಳತೀರದು.
ತಾಳಗುಪ್ಪದಲ್ಲಿ ಸುಸಜ್ಜಿತ ಶೌಚಾಲಯದತ್ತ ಅನುದಾನ ಮಂಜೂರು ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದೂ ನೊಂದ ಪ್ರವಾಸಿಗರು, ಪ್ರಯಾಣಿಕರು, ಪ್ರಜ್ಞಾವಂತರೂ ಸಂಸದ ಬಿ ವೈ ರಾಘವೇಂದ್ರರವರಲ್ಲಿ ಮನವಿ ಸಹಿತ ಒಕ್ಕೊರಲ ಧ್ವನಿಯಾಗಿದೆ*
ಸಂಸದ ಬಿ ವೈ ರಾಘವೇಂದ್ರರವರು ತಾಳಗುಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ವಿಚಾರದಲ್ಲಿ ತೀವ್ರ ಹಿನ್ನಡೆ, ಅಕ್ರಮ ಮಿತಿಮೀರಿದ ಭ್ರಷ್ಟಾಚಾರ ಬ್ರಹ್ಮಾಂಡ ವಿರುದ್ಧ ಗಂಭೀರ ಆರೋಪಕ್ಕೆ ಸೂಕ್ತ ದಾಖಲಾತಿಗಳೊಂದಿಗೆ ದೂರು ಸಲ್ಲಿಸಿರುವುದು ಸಂಬಂಧ ಪಟ್ಟ ಅಧಿಕಾರಿಗಳಿಂದ ನ್ಯಾಯಯುತ ತನಿಖೆ ನೆಡೆಸುತ್ತಿರುವುದು ಇತಿಹಾಸ. ಆದರೇ ತನಿಖೆಗೆ ಬ್ರೇಕ್ ಹಾಕುವಂತೆ ಶಿವಮೊಗ್ಗ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತೀವ್ರ ಒತ್ತಡ ಹಾಕುತ್ತಿರುವುದಾಗಿ ಉಹಾಪೋಹ ವದಂತಿಗಳು ತಾಳಗುಪ್ಪ ಗ್ರಾಮ ಪಂಚಾಯಿತಿ ಚಾವಡಿಯಲ್ಲಿ ಪ್ರಜ್ಞಾವಂತ ನಾಗರೀಕರುಗಳ ಪಿಸುಪಿಸು ಮಾತುಗಳು ತೀವ್ರ ಚರ್ಚೆಯ ಸಂಗತಿಯಾಗಿದೆ……..ಉತ್ತರಿಸಬಲ್ಲಿರಾ ಬಿ. ವೈ. ರಾಘವೇಂದ್ರ ಮಾನ್ಯ ಸಂಸದರೇ…….?!!!!!!!
✍️ಓಂಕಾರ ಎಸ್. ವಿ. ತಾಳಗುಪ್ಪ*
Leave a Reply