Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಉಡುಪಿ : DDPI ಗಣಪತಿ ಕೆ ಸಾಲು ಸಾಲು ಹಗರಣಗಳ ಸರಮಾಲೆ, ಭ್ರಷ್ಟ ಅಧಿಕಾರಿ ವಿರುದ್ಧ ದೂರು ದಾಖಲು

ಉಡುಪಿ : ಶಿಕ್ಷಣವೆಂದರೆ ಭೃಷ್ಟಾಚಾರ ರಹಿತವಾದಾಗ ಮುಂದಿನ ಭವಿಷ್ಯದ ಯುವ ಜನಾಂಗ ಯಾವುದೇ ಹಗರಣಗಳನ್ನು ಊಹಿಸಲು ಸಾಧ್ಯವಿಲ್ಲ. ಆದರೆ ಶಿಕ್ಷಣ ಕ್ಷೇತ್ರದ ಅಧಿಕಾರಿಗಳೇ ಭೃಷ್ಟಾಚಾರರಾದರೆ ಶಿಕ್ಷಣದ ಗತಿ ಅದೋಗತಿ.  ಅಂತಹ ಹಗರಣದ ಅಧಿಕಾರಿ ಉಡುಪಿ ಜಿಲ್ಲಾ ಶಿಕ್ಷಣ ಕ್ಷೇತ್ರದ ಉಪನಿರ್ದೇಶಕ ಗಣಪತಿ ಕೆ.  ಈ ಎನ್ನುವುದೇ ವಿಪರ್ಯಾಸ.

ಒಂದು ಜಿಲ್ಲೆಯ ಶಾಲಾ ವ್ಯವಸ್ಥೆಯಲ್ಲಿ ಉಪನಿರ್ದೇಶಕರು ಅಂದರೆ ಡಿಡಿಪಿಐ ಎಂಬವರಿಗೆ ಶಾಲೆಯ ಪೂರ್ಣ ಬೆಳವಣಿಗೆ, ಶಾಲೆಯನ್ನು ಉಳಿಸಿ ಬೆಳೆಸುವಲ್ಲಿ ಹಾಗೂ ಅವರ ಅಧೀನದಲ್ಲಿರುವ ಶಾಲೆಗಳ ಶಿಕ್ಷಕರನ್ನು ನ್ಯಾಯಯುತವಾಗಿ ಹಾಗೂ ಮಕ್ಕಳಿಗೆ ಅನುಕೂಲವಾಗಿ ಕಟ್ಟಿಬೆಳೆಸುವಲ್ಲಿ ತುಂಬಾ ಜವಾಬ್ದಾರಿಗಳಿದೆ.

ಆದರೆ ನಮ್ಮ ಉಡುಪಿಗೆ ಬಂದೊದಿಗಿರುವ ಉಪ ನಿರ್ದೇಶಕರು ಇದಕ್ಕೆಲ್ಲಾ ವಿಪರೀತವಾಗಿ ಎಲ್ಲಾ ರೀತಿಯಲ್ಲೂ ತಪ್ಪುಗಳನ್ನು ಎಸಗಿ ಹಲವು ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಲು ಇಲಾಖೆಯಿಂದ ಶಿಫಾರಸುಗಳನ್ನು ಪಡೆದು ಕೊಂಡು ಅದೇ ತಮ್ಮ ಬಿರುದು ಎನ್ನುವ ರೀತಿಯಲ್ಲಿ ತಿಳಿದುಕೊಂಡು ಹಲವು ರೀತಿಯಲ್ಲಿ ಶಿಕ್ಷಣ ಇಲಾಖೆಯನ್ನು ಮೋಸ ಮಾಡಿಕೊಂಡು ಸರಕಾರಿ ಶಾಲೆಗೆ  ದ್ರೋಹ ಬಗೆಯುವ ಚಾಳಿಯನ್ನು ಮುಂದುವರಿಸಿ ಕೊಂಡು ಹೋಗುತ್ತಾ ಇದ್ದಾರೆ

DDPI ಗಣಪತಿ ಕೆ ಸಾಲು ಸಾಲು ಹಗರಣಗಳ ಸರಮಾಲೆ, ಭ್ರಷ್ಟ ಅಧಿಕಾರಿ ವಿರುದ್ಧ ದೂರಿನಲ್ಲಿರುವ ಆರೋಪ ಪಟ್ಟಿ ಇಂತಿದೆ.

1. 2023-24ನೇ ಸಾಲಿನಲ್ಲಿ ನಡೆದ ಶಿಕ್ಷರ ದಿನಾಚರಣೆ ಕಾರ್ಯಕ್ರಮವು ಶಾಮಿಲಿ ಶಯನ ಸಭಾ ಭವನ, ಬ್ರಹ್ಮಾವರ ಇಲ್ಲಿ ನಡೆಸಲಾಗಿರುತ್ತದೆ. ತಾಲ್ಲೂಕು ಮಟ್ಟದ ಕಾರ್ಯಕ್ರಮಕ್ಕೆ ರೂ-25000 ಮತ್ತು ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ರೂ-30000ಗಳನ್ನು ಕ್ಷೇತ್ರಶಿಕ್ಷಣಾಧಿಕಾರಿಗಳು ಬ್ರಹ್ಮಾವರ ಇವರಿಗೆ ಸಲ್ಲಿಸಲಾಗಿರುತ್ತದೆ. ಆದರೆ ಪೂರ್ತಿ ಆಯೋಜನಾ ವೆಚ್ಚ ಸಭಾಂಗಣ, ಉಟ ಉಪಚಾರದ ಖರ್ಚು, ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನದ ಖರ್ಚು ಎಲ್ಲವನ್ನು ಶ್ರೀ ನಾಡೋಜ ಜಿ ಶಂಕ‌ರ್ ಇವರು ನೀಡಿರುತ್ತಾರೆ. ಹಾಗೂ ಕೆಲ ಸಂಘ ಸಂಸ್ಥೆಗಳಿಂದಲೂ ದೇಣಿಗೆ ಪಡೆದಿರುತ್ತಾರೆ. ಇಲಾಖೆಯಿಂದ ಬಿಡುಗಡೆ ಮಾಡಲಾದ ಒಟ್ಟು ರೂ-55000ಗಳನ್ನು ಗಣಪತಿ ಉಪನಿರ್ದೇಶಕರು ಇವರೇ ಉಳಿಸಿಕೊಂಡಿರುತ್ತಾರೆ. ಇಲಾಖೆಗೆ ಮೋಸ ಮಾಡಿರುತ್ತಾರೆ.

2. 2023-24ನೇ ಸಾಲಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟ, ಮೈಸೂರು ವಿಭಾಗ ಮಟ್ಟದ ಕ್ರೀಡಾಕೂಟ, ರಾಜ್ಯ ಮಟ್ಟದ ಕ್ರೀಡಾಕೂಟಗಳಿಗೆ ಒಟ್ಟು -3,55,000/- ಬಿಡುಗಡೆಯಾಗಿರುತ್ತದೆ. ಈ ಅನುದಾನವನ್ನು ಕ್ರೀಡಾಕೂಟ ಆಯೋಜನೆಗೆ ಮುಂಚಿತವಾಗಿ ಬಿಡುಗಡೆ ಮಾಡಲು ಕಛೇರಿ ಸಿಬ್ಬಂದಿಗಳಿಗೆ ಒತ್ತಡ ಹೇರಿ ಆಯೋಜನೆ ಮಾಡಲಾದ ಶಾಲೆಗಳಿಗೆ ಬಿಡುಗಡೆಗೊಳಿಸಿ ಆಯೋಜಕರಿಂದ ಪಾಲು ಪಡೆದಿರುತ್ತಾರೆ.

3. 2023-24ನೇ ಸಾಲಿನಲ್ಲಿ ಇಲಾಖೆಯಿಂದ ಶಿಕ್ಷಕರ ನಿಯೋಜನೆ ಮಾಡಬಾರದು ಎಂದು ಆದೇಶವಿದ್ದರೂ ಸಹಿತ ಶಿಕ್ಷಕರ ನಿಯೋಜನೆಯನ್ನು ಮಾಡಿ ಅವರ ವಿರುದ್ದವಾಗಿ ಅಥಿತಿ ಶಿಕ್ಷಕರನ್ನು ನೇಮಕ ಮಾಡಿ ಇಲಾಖೆಗೆ ಆರ್ಥಿಕ ಸಂಕಷ್ಟವನ್ನು ಉಂಟುಮಾಡಿರುತ್ತಾರೆ.

4. 2022-23ನೇ ಸಾಲಿನ ಎನ್.ಎಸ್.ಎಸ್ ಕಾರ್ಯಕ್ರಮದಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಶ್ರೀ ರಘನಾಥ್ ದೈಹಿಕ ಶಿಕ್ಷಣ ಅಧಿಕಾರಿಗಳು ಇವರಿಗೆ ಸಲ್ಲಬೇಕಾದ ಸಂಭಾವನೆ ಅನುದಾನವನ್ನು ಬೇರೆ ನಿಯೋಜನೆ ಮೇಲಿರುವ ಅಧಿಕಾರಿಯ ಹೆಸರಿಗೆ ಚೆಕ್ ನೀಡಲು ಒತ್ತಡ ಹೇರಿ ರೂ- 6000ಗಳನ್ನು ಗಣಪತಿ ಕೆ ಇವರೇ ಪಡೆದಿರುತ್ತಾರೆ.

5. ಪದವೀದರ ಶಿಕ್ಷಕರ ನೇಮಕಾತಿಯಲ್ಲಿ ಉಪನಿರ್ದೇಶಕರ ಕಛೇರಿಯಲ್ಲಿ ವರದಿ ಮಾಡಿಕೊಂಡ ಶಿಕ್ಷಕರಿಂದ ಲಂಚ ಸ್ವೀಕರಿಸಿ ಅವರಿಗೆ ಅನುಕೂಲಕರವಾದ ಶಾಲೆಗೆ ತಾತ್ಕಾಲಿಕವಾಗಿ ನಿಯೋಜನೆ ಮಾಡಿರುತ್ತಾರೆ.

6. ಇಲಾಖೆಯ ಕರ್ತವ್ಯದ ಮೇಲೆ ಬೆಂಗಳೂರಿಗೆ ತೆರಳಿರುವುದಾಗಿ ಹೇಳಿ ತಪ್ಪು ಮಾಹಿತಿ ನೀಡಿ ಎರಡೆರಡು ಭಾರಿ ಪ್ರಯಾಣ ಭತ್ಯೆ ಪಡೆದು ಸರ್ಕಾರಕ್ಕೆ ಹಣಕಾಸಿನ ದ್ರೋಹ ಮಾಡಿರುತ್ತಾರೆ. ಪ್ರತಿ ಲಗತ್ತಿಸಿದೆ.

7. 2023-24ನೇ ಸಾಲಿನ ಯುವಸಂಸತ್ ಕಾರ್ಯಕ್ರಮಕ್ಕೆ ರೂ-9000/- ಬಿಡುಗಡೆಯಾಗಿರುತ್ತದೆ. ಸುತ್ತೋಲೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಅಥವಾ ನೆನಪಿನ ಕಾಣಿಕೆ ನೀಡಲು ತಿಳಿಸಲಾಗಿರುತ್ತದೆ. ಆದರೆ ಈ ಕಾರ್ಯಕ್ರಮದ ಖರ್ಚು ವೆಚ್ಚಗಳನ್ನು ನೀಡಲು ಕೆನರಾಬ್ಯಾಂಕ್ ಮಣಿಪಾಲ ಶಾಖೆಯ ವ್ಯವಸ್ಥಾಪಕರಿಂದ ದೇಣಿಗೆ ಪಡೆದು ಖರ್ಚು ವೆಚ್ಚಗಳನ್ನು ಸರಿದೂಗಿಸಿ, ನೋಡಲ್ ಅಧಿಕಾರಿಗಳನ್ನು ಬೆದರಿಸಿ ಒತ್ತಡ ಹೇರಿ ಬಂದ ರೂ-9000/- ಅನುದಾನವನ್ನು ಡಿ.ಸಿ ಕ್ಯಾಂಟೀನ್ ಉಡುಪಿ ಇವರ ಖಾತೆಗೆ ಕೆ-2 ಬಿಲ್ ಮೂಲಕ ಜಮೆ ಮಾಡಿ ರೂ-9000/-ವನ್ನು ಗಣಪತಿ ಕೆ ಇವರೆ ಪಡೆದು ಇಲಾಖೆಗೆ ದ್ರೋಹವೆಸಗಿರುತ್ತಾರೆ.

8. ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2023ರಲ್ಲಿ ಎರಡು ಪರೀಕ್ಷಾ ಕಾರ್ಯ ನಿರ್ವಹಿಸಿದೆ ಎಂದು ತಿಳಿಸಿ ಸಂಭಾವನೆ ಪಡೆದಿರುತ್ತಾರೆ. ಆದರೆ ಸುತ್ತೋಲೆಯಲ್ಲಿ ಉಪನಿರ್ದೇಶಕರಿಗೆ ಒಟ್ಟು ಪರೀಕ್ಷಾ ಕಾರ್ಯಕ್ಕೆ ಎಂದು ಸಂಭಾವನೆ ಬಿಡೆಗಡೆಯಾಗಿರುತ್ತದೆ.

9. ನನ್ನ ಕೆ.ಜಿ.ಐ.ಡಿ ಸಾಲದ ಅರ್ಜಿಯನ್ನು ಮುಂದಿನ ಹಂತಕ್ಕೆ ಸಲ್ಲಿಸಲು ಸುಮಾರು 25 ದಿನಗಳವರೆಗೆ ಸತಾಹಿಸಿರುತ್ತಾರೆ ಹಾಗೂ ರೂ-10,000/-ನ್ನು ನೀಡಲು ಬೇಡಿಕೆ ಇಟ್ಟಿರುತ್ತಾರೆ. ಕೊನೆಗೆ ಜೋರು ಮಾಡಿ ಕೇಳಿದಕ್ಕೆ ನನ್ನ ಆದಾರ್ ಲಿಂಕ್ ಆಗಿರುವ ಮೊಬೈನ್ ನನ್ನ ಬಳಿ ಇಲ್ಲ ಎಂದು ಅಸಂಭದ್ದ ಕಾರಣವನ್ನು ನೀಡಿರುತ್ತಾರೆ. ಹಾಗೂ 26ನೇ ದಿನ ಅರ್ಜಿಯನ್ನು ಮುಂದಿನ ಹಂತಕ್ಕೆ ಸಲ್ಲಿಸಿರುತ್ತಾರೆ.

10. ಅನುದಾನಿತ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಮಾನ್ಯ ಆಯುಕ್ತರು ಶಾ.ಶಿ.ಇ ಬೆಂಗಳೂರು

ಇನ್ನಾದರೂ ಜಿಲ್ಲಾಡಾಳಿತ ಎಚ್ಚೆತ್ತು ಇಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಲೋಕಾಯುಕ್ತ ತನಿಖೆ ಮಾಡಬೇಕೆಂದು  ಉಡುಪಿ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಆಗ್ರಹಿಸಿದ್ದಾರೆ.

ಹೊಸೂರು ಶಾಲೆ ಹಗರಣ, ಗುಜ್ಜಾಡಿ ಶಾಲೆ ಹಗರಣ, ಹೆಮ್ಮಾಡಿ ಶಾಲೆ ಇಂಟೆರ್ ಲಾಕ್ ಹಗರಣ, ಬೈಂದೂರು ಪೋಕ್ಸೋ ಕೇಸ್, ಕುಕ್ಕೆಹಳ್ಳಿ ಶಾಲೆ ಹಗರಣ, ಖಾಸಗಿ ಶಾಲೆಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿರುವ ಕುಂದಾಪುರ, ಬೈಂದೂರು, ಬ್ರಹ್ಮವಾರ BEO ಗಳ ಕರ್ಮಕಾಂಡ?? ಇನಷ್ಟು ಸ್ಪೋಟಕ ಮಾಹಿತಿಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ.

ಮುಂದುವರಿಯಲಿದೆ ನಿರೀಕ್ಷಿಸಿ….

Leave a Reply

Your email address will not be published. Required fields are marked *