
ಕೋಟ: ಸರಕಾರಿ ಪ್ರೌಢ ಶಾಲೆ ಗುಂಡ್ಮಿ-ಸಾಸ್ತಾನ ಇಲ್ಲಿಗೆ ಲಯನ್ಸ್ ಕ್ಲಬ್ ಮಲ್ಪೆ ಇವರು 40 ಯೋಗ ಮ್ಯಾಟ್‌ಗಳನ್ನು ಇತ್ತೀಚಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಲ್ಪೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಉದ್ಯಮಿ ಸುಧಾಕರ ಪೂಜಾರಿ , ಕ್ಲಬ್‌ನ ಕಾರ್ಯದರ್ಶಿ ಸ್ನೇಹ ಟ್ಯುಟೋರಿಯಲ್ ಉಡುಪಿ ಇದರ ಉಪಪ್ರಾಂಶುಪಾಲ ಕರುಣಾಕರ ಬಂಗೇರ ,ಕ್ಲಬ್‌ನ ಚೀಫ್ ಕೋ ಆರ್ಡಿನೇಟರ್ ಮಾರ್ಕೆಟಿಂಗ್ & ಕಮ್ಯುನಿಕೇಶನ್ ಅಂಬಲಪಾಡಿಯ ಜಯಲಕ್ಷ್ಮೀ ನಾಗಪ್ಪ ಅಮೀನ್, ಕ್ಲಬ್‌ನ ಲಿಯೊ ಅಧ್ಯಕ್ಷ ನಂದನ್ ಕುಂದರ್ , ಲಿಯೋ ಮಾಜಿ ಅಧ್ಯಕ್ಷ ಚಿರಾಗ್ , ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ರಾಘವೇಂದ್ರ. ಜಿ. ಹಾಗೂ ಶಾಲಾಭಿವೃದ್ದಿ ಸಮಿತಿಯ ಶಿಕ್ಷಣ ತಜ್ಞರಾದ ಗಣೇಶ್ ಚೆಲ್ಲಮಕ್ಕಿಯವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕರಾದ ಸತೀಶ ಐತಾಳ ಸ್ವಾಗತಿಸಿದರು.ಕನ್ನಡ ಭಾಷಾ ಗೌರವ ಶಿಕ್ಷಕಿ ಸುಜಾತ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಸಹಶಿಕ್ಷಕರಾದ ಶ್ರೀಧರ ಶಾಸ್ತಿçಯವರು ಕಾರ್ಯಕ್ರಮ ನಿರೂಪಿಸಿ ,ಹಿರಿಯ ಸಹ ಶಿಕ್ಷಕಿಯರಾದ ಹೆಲೆನ್ ಬಾಂಜ್ ವಂದನಾರ್ಪಣೆಗೈದರು.
ಸರಕಾರಿ ಪ್ರೌಢ ಶಾಲೆ.ಗುಂಡ್ಮಿ-ಸಾಸ್ತಾನ ಇಲ್ಲಿಗೆ ಲಯನ್ಸ್ ಕ್ಲಬ್ ಮಲ್ಪೆ ಇವರು 40 ಯೋಗ ಮ್ಯಾಟ್‌ಗಳನ್ನು ಇತ್ತೀಚಿಗೆ ಹಸ್ತಾಂತರಿಸಿದರು. ಮಲ್ಪೆ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಉದ್ಯಮಿ ಸುಧಾಕರ ಪೂಜಾರಿ , ಕ್ಲಬ್‌ನ ಕಾರ್ಯದರ್ಶಿ ಸ್ನೇಹ ಟ್ಯುಟೋರಿಯಲ್ ಉಡುಪಿ ಇದರ ಉಪಪ್ರಾಂಶುಪಾಲ ಕರುಣಾಕರ ಬಂಗೇರ, ಶಾಲಾ ಮುಖ್ಯ ಶಿಕ್ಷಕರಾದ ಸತೀಶ ಐತಾಳ ಮತ್ತಿತರರು ಇದ್ದರು.
Leave a Reply