Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ: ತಹಸೀಲ್ದಾರ್ ರಂತೆ ವರ್ತಿಸುತ್ತಿರುವ ಲಂಗು ಲಗಾಮು  ಇಲ್ಲದ  FDA ಅಧಿಕಾರಿ ಹೆರಿಯ ಬಿಲ್ಲವ !!

ಕುಂದಾಪುರ : ಕುಂದಾಪುರ ತಹಸಿಲ್ದಾರ್ ಕಚೇರಿಗೆ ಸ್ವಯಂ ಸಾರ್ವಜನಿಕರು ಭೇಟಿ ನೀಡಿದರೆ ಅವರ ಯಾವುದೇ ಕೆಲಸವಾಗಬೇಕಾದರೆ ಸರಿಸುಮಾರು ಹತ್ತು ಹದಿನೈದು ದಿನಗಳು ತಗುಲುತ್ತವೆ, ಸ್ವಲ್ಪ ಬೇಗ ಬೇಕು  ಲೋನ್, ಸ್ಕಾಲರ್ಶಿಪ್, ಇನ್ಸೂರೆನ್ಸ್ ಮತ್ತು ಕೆಲವು ಸೌಲಭ್ಯವನ್ನು ಪಡಬೇಕು ಎಂದು ಪರಿಪರಿಯಾಗಿ ಬೇಡಿದರು ಯಾವುದೇ ಕೆಲಸ ಮಾಡಿಸಿಕೊಳ್ಳುವುದು ಸುಲಭ ಸಾಧ್ಯವಲ್ಲ. ಅದೇ ಮಧ್ಯವರ್ತಿಗಳ ಮೂಲಕ ಹೋದಲ್ಲಿ ಎರಡರಿಂದ ಮೂರು ದಿನಗಳಲ್ಲಿ ಕೆಲಸವಾಗುತ್ತದೆ ಎನ್ನುವುದು ಕುಂದಾಪುರದ ಜನತೆಯು ಹೊಸಕಿರಣ ವೆಬ್ ನ್ಯೂಸ್ ಚಾನೆಲ್ ಗೆ ನೀಡಿದ ದೂರು.

ಸಾರ್ವಜನಿಕರ ದೂರಿನ ಅನ್ವಯ  ನಿನ್ನೆ  ಸ್ವಯಂ ನಾನೇ ಕೆಲವೊಂದು ಕಡತಗಳನ್ನು ಕೇಳಲು ಹೊರಟಾಗ ಸಾರ್ವಜನಿಕರ ದೂರು ಸಹ ಅಕ್ಷರ ಸತ್ಯವಾಗಿದೆ. ವಿಪರ್ಯಾಸವೇ ಏನೆಂದರೆ  ಸರ್ಕಾರದ ಗೌಪ್ಯ ಮಾಹಿತಿಗಳು, ಅತ್ಯಮೂಲ್ಯವಾದ  ಕಡತಗಳ ಫೈಲ್ ರೂಮಿಗೆ  ಕೆಲವೊಂದು ಮಧ್ಯವರ್ತಿಗಳು ಅಧಿಕಾರಿಗಳ ಜೊತೆ ಕಡತಗಳನ್ನು ಹುಡುಕುತ್ತಿರುವುದು, ಭೂಮಿ ಕೌಂಟರ್ ನ ಏಕಪಕ್ಷಿ ಕಿಟಕಿಯಲ್ಲಿ ಬಾರದೆ ಒಳಗಡೆ ಹೋಗಿ ಅಧಿಕಾರಿಗಳಿಗೆ ಆರ್ ಟಿ ಸಿ, ಎಂ. ಆರ್ ಕೊಡಿ ಎಂದು ತಾಕಿತು ಮಾಡುವ ದೃಶ್ಯಗಳು  ಕಂಡು ಬಂದಿದೆ.

ರಮೇಶ್ ದೇವಾಡಿಗ ಉಪ್ಪಿನಕುದ್ರು ಎನ್ನುವ  ಮಧ್ಯವರ್ತಿ ಸರ್ವೆ ಆಫೀಸ್, ಭೂಮಿ ಕೌಂಟರ್, ತಹಸಿಲ್ದಾರ್ ಫೈಲ್ ರೂಮ್, ರಾಜಸ್ವ ನಿರೀಕ್ಷಕರ ಆಫೀಸ್, ತಹಸೀಲ್ದಾರ್ ಕೋಣೆಯಲ್ಲಿ ಗಂಟೆಗಟ್ಟಲೆ ಚರ್ಚೆ ನಡೆಸುತ್ತಿರುವುದು ತಾನೇ ಸಹಾಯಕ ಕಮಿಷನರ್ ಎನ್ನುವಂತೆ ನಡೆದುಕೊಳ್ಳುತ್ತಿರುವುದು, ಅಲ್ಲದೆ ನಿನ್ನೆ  ಸರಿಸುಮಾರು ಮಧ್ಯಾಹ್ನ 1:45ಕ್ಕೆ ತಹಸಿಲ್ದಾರ್ ಜೊತೆಯಲ್ಲಿ ರಮೇಶ್ ದೇವಾಡಿಗ ಮತ್ತು ಇನ್ನೊಬ್ಬ ಮದ್ಯರ್ವತಿ ಒಂದು ಫೈಲ್  ಬಗ್ಗೆ ಚರ್ಚೆ ಮಾಡುತ್ತಾ ನಡೆದುಕೊಂಡು ಬರುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಎಲ್ಲಾ ಅಧಿಕಾರಿಗಳಿಗೆ ತಾಕಿತು ಮಾಡುತ್ತಿರುವುದನ್ನು ನೋಡಿದರೆ  ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ತಹಸೀಲ್ದಾರ್ ಕಚೇರಿಯ ಫೈಲ್ ರೂಮ್ ನ ನಿರ್ವಾಹಕ  FDA ಹೆರಿಯ ಬಿಲ್ಲವರ ದುರ್ವರ್ತನೆಗೆ ಬೇಸತ್ತು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ. ಈತ ನನ್ನೆದುರಿಗೆ ಹಿರಿಯ ನಾಗರಿಕರಿಗೆ ಅವಮಾನ ಮಾಡಿದ್ದು, ಪ್ರತಿಯೊಬ್ಬರಿಗೂ ಸಹ ಗೌರವ ನೀಡದೆ ಮಾತಾಡುವುದು ಇವನ ಹುಟ್ಟುಗುಣ ಅನಿಸುತ್ತದೆ, ಈತ ಸಾರ್ವಜನಿಕರು ರೂಲ್ಸ್ ಮಾತನಾಡಿದರೆ  ನಿಮ್ಮ ಮೇಲೆ ಕರ್ತವ್ಯಲೋಪದ ಕೇಸ್ ಜಡಿಯುತ್ತೇನೆ ಎಂದು ಬೆದರಿಕೆ ಒಡ್ದುತ್ತಾನೆ. ಈತನ ಪರಮ ಆಪ್ತನೇ ರಮೇಶ್ ದೇವಾಡಿಗ. ಹೆರಿಯ ಬಿಲ್ಲವ  ಸರಿಸುಮಾರು ಹತ್ತು ವರ್ಷದಿಂದ ಕುಂದಾಪುರದಲ್ಲಿ ತಳ ಊರಿದ್ದಾನೆ. ಸಚಿವರ ಕೃಪಾಕಟಾಕ್ಷದಿಂದ ಟ್ರಿಬುನಲ್ ಗೆ ಸ್ವಲ್ಪ ದಿನ ಹಾಕಿಸಿಕೊಂಡಿದ್ದ  ಆದರೆ ಅಲ್ಲಿ ಸರಿಯಾಗಿ ದಕ್ಷಿಣ ದೊರೆಯುತ್ತಿಲ್ಲ ಎಂದು ಮತ್ತೆ ತಹಸಿಲ್ದಾರ್ ಕಚೇರಿ ಫೈಲ್ ರೂಮ್ ಗೆ ಬಂದಿರುತ್ತಾನೆ.

ಹೆರಿಯ ಬಿಲ್ಲವ FDA ವಿರುದ್ಧ  ಗ್ರಾಮ ಆಡಳಿತ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು, ಜನತೆ ಹೇಳುವಂತೆ ಈತ ಮಧ್ಯವರ್ತಿಗಳ ಅತಿ ಪ್ರಿಯವಾದ ವ್ಯಕ್ತಿ ಮತ್ತು ಈತ ಲೋಕಲ್ ಹಾಗಾಗಿ ಇವನ ವಿರುದ್ಧ  ದೂರು ನೀಡಿದರೆ, ಇವನ ಕೆಲವು ಚೇಲಗಳು, ದೂರು ನೀಡಿದವರಿಗೆ ಧಮ್ಕಿ ಹಾಕುತ್ತಾರೆ ಎನ್ನುವುದು ಸಹ ಕೇಳಿ ಬರುತ್ತಿದೆ. ಸಹಾಯಕ ಕಮಿಷನರ್ ರವರು ಈ ಒಂದು ವಾರದ ತಹಸಿಲ್ದಾರ್ ಕೋಣೆ, ಮಿನಿ ವಿಧಾನಸೌಧ ವರಂಡ,  ಸರ್ವೆ ಆಫೀಸ್  ಮತ್ತು ಫೈಲ್ ರೂಂಗಳ ಸಿಸಿಟಿವಿ  ದೃಶ್ಯಗಳನ್ನು ಪರಿಶೀಲಿಸಿ  ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದೇವೆ. ಸರಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿದೆಯೇ ಎನ್ನುವುದನ್ನು ಉತ್ತರಿಸಬೇಕು? ಈ ಮಧ್ಯವರ್ತಿಗಳಿಗೆ  ಕಡಿವಾಣ ಹಾಕುವವರಾರು?

ಇನಷ್ಟು ಸ್ಪೋಟಕ, ರೋಚಕ ಮಿನಿ ವಿಧಾನ ಸೌಧ ಕರ್ಮಕಾಂಡದ ಸುದ್ದಿಯೊಂದಿಗೆ ನಿಮ್ಮ ಮುಂದೆ ಬರಳಿದ್ದೇನೆ.

Leave a Reply

Your email address will not be published. Required fields are marked *