Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಜಿಲ್ಲಾಸ್ಪತ್ರೆಯ ಸ್ವಚ್ಚತೆ ನಾಗರಿಕರ ಜವಾಬ್ದಾರಿ – ಕೊಡವೂರು

ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಮತ್ತು ಲಯನ್ಸ್ & ಲಿಯೋ ಕ್ಲಬ್ ಪರ್ಕಳ ಇವರ ಜಂಟಿ ಆಶ್ರಯದಲ್ಲಿ ಅಜ್ಜರಕಾಡು ಆಸ್ಪತ್ರೆಯ ಹೊರಾಂಗಣದ ಸ್ವಚ್ಛತಾ ಕಾರ್ಯ ಇಂದು ನಡೆಯಿತು. ಜನರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ವೈದ್ಯರು ಮತ್ತು ಸಿಬ್ಬಂದಿಗಳದ್ದು, ಆದರೆ ಜಿಲ್ಲಾ ಆಸ್ಪತ್ರೆಯ ಹೊರಾಂಗಣವನ್ನು ಸ್ವಚ್ಚವಾಗಿಡುವಂತದ್ದು ನಮ್ಮೆಲ್ಲರ ಜವಾಬ್ದಾರಿ ಎಂದು ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಸ್ವಚ್ಚ ಭಾರತದ ಕಲ್ಪನೆಯನ್ನು ನಮಗೆ ತಿಳಿಸಿದ್ದಾರೆ.

ಇಂಥಹ ಕಾರ್ಯ ಕೇವಲ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ನಿರಂತರ ಆದರೆ ಮಾತ್ರ ಜಿಲ್ಲಾ ಆಸ್ಪತ್ರೆ ಮತ್ತು ನಾಗರಿಕರು ಆರೋಗ್ಯಕರವಾದ ಜೀವನ ನಡೆಸಲು ಸಾಧ್ಯ ಎಂದು ವಿಜಯ್ ಕೊಡವೂರು ತಿಳಿಸಿದರು.

Leave a Reply

Your email address will not be published. Required fields are marked *