Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಪಾಂಡೇಶ್ವರದ ಕಳಿಬೈಲು ಶ್ರೀ ತುಳಸಿ ಅಮ್ಮ ಹಾಗೂ ಕೊರಗಜ್ಜ ಸಾನಿಧ್ಯ ಪರಿವಾರ ದೇಗುಲದಲ್ಲಿ ಶರನ್ನವರಾತ್ರಿ ಸಡಗರ
ಶರನ್ನವರಾತ್ರಿ  ಹಿಂದೂ ಧರ್ಮದ ಧಾರ್ಮಿಕ ಚೈತನ್ಯ ಹೆಚ್ಚಿಸುವ ಉತ್ಸವಗಳಾಗಿದೆ – ವಿಜಯ್ ಪೂಜಾರಿ

ಕೋಟ: ಭಾರತೀಯ ನೆಲದಲ್ಲಿ ಶರನ್ನವರಾತ್ರಿ ಉತ್ಸವಗಳು ತನ್ನದೆ ಆದ ತಳಹದಿಯನ್ನು ಹೊಂದಿವೆ ಇಂತಹ ಉತ್ಸವಗಳು ಹಿಂದೂ ಧರ್ಮದ ತಳಹದಿಗೆ ಭದ್ರ ಬುನಾದಿಯಾಗಿದೆ ಎಂದು   ಸಾಸ್ತಾನ ಸಿ.ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ್ ಪೂಜಾರಿ ಹೇಳಿದರು.

ಪಾಂಡೇಶ್ವರದ ಕಳಿಬೈಲು ಶ್ರೀ ತುಳಸಿ ಅಮ್ಮ ಹಾಗೂ ಕೊರಗಜ್ಜ ಸಾನಿಧ್ಯ ಪರಿವಾರ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಕೊಂಡ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೈವ ದೇಗುಲಗಳು ಧಾರ್ಮಿಕ ಚಿಂತನೆ ಪಸರಿಸುವ ಜತಗೆ ಸಾಂಸ್ಕöÈತಿಕ ವೇದಿಕೆಯನ್ನು ಕಲ್ಪಿಸುತ್ತಿರುವುದು ಶ್ಲಾಘನೀಯ.ಇಲ್ಲಿನ ಶ್ರೀ ಕ್ಷೇತ್ರ ಕಾರಣಿಕ ಕ್ಷೇತ್ರವಾಗಿ ಭಕ್ತರ ಇಷ್ಟಾರ್ಥ ನಿಗಿಸುವ ತಾಣವಾಗಿದೆ,ನಿರಂತ ಭಜನೆಯಿಂದ ದೇವನೊಲಿಸಿಕೊಳ್ಳುವ ಸನಿಹಮಾರ್ಗವಾಗಿದೆ ಎಂದರು
ಸಭೆಯಲ್ಲಿ ದೇಗುಲದ ಮುಕ್ತೇಸರ ಎಂ.ಸಿ ಚಂದ್ರಶೇಖರ್, ದೇಗುಲದ ಮಾರ್ಗದರ್ಶಕ ಶಶಿಧರ್ ರಾವ್,ಸಾಮಾಜಿಕ ಚಿಂತಕರಾದ ಸುಧೀರ್ ಶೆಟ್ಟಿ ಕೆದೂರು,ಕೀರ್ತಿಶ್ ಪೂಜಾರಿ,ಬಾಲಾಜಿ ಭಜನಾ ಸಂಘದ ಅಧ್ಯಕ್ಷ ವಿಜಯ ಆಚಾರ್,ಹಿಂದೂ ಮುಖಂಡರಾದ ಸುಬ್ರಹ್ಮಣ್ಯ ಕಿರಿಮಂಜೇಶ್ವರ,ದೇಗುಲ ಪಾಕತಜ್ಞ ಸುದರ್ಶನ ಪೂಜಾರಿ,ಶಾರದೋತ್ಸವ ಸಮಿತಿ ಕೋಶಾಧಿಕಾರಿ ವಿಶ್ವನಾಥ ಆಚಾರ್,ಸಹ ಅರ್ಚಕ ರಮೇಶ್ ಸಾಸ್ತಾನ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು.
ನAತರ ಬಾಲಾಜಿ ಭಜನಾ ತಂಡ ಪಾಂಡೇಶ್ವರ ಇವರಿಂದ ಕುಣಿತ ಭಜನೆ ಸಂಪನ್ನಗೊAಡಿತು.


ಪಾAಡೇಶ್ವರದ ಕಳಿಬೈಲು ಶ್ರೀ ತುಳಸಿ ಅಮ್ಮ ಹಾಗೂ ಕೊರಗಜ್ಜ ಸಾನಿಧ್ಯ ಪರಿವಾರ ದೇಗುಲದಲ್ಲಿ ಶರನ್ನವರಾತ್ರಿ ಉತ್ಸವದ ಅಂಗವಾಗಿ ಹಮ್ಮಕೊಂಡ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮವನ್ನು  ಸಾಸ್ತಾನ ಸಿ.ಎ ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿಜಯ್ ಪೂಜಾರಿ ಉದ್ಘಾಟಿಸಿದರು. ದೇಗುಲದ ಮುಕ್ತೇಸರ ಎಂ.ಸಿ ಚಂದ್ರಶೇಖರ್, ದೇಗುಲದ ಮಾರ್ಗದರ್ಶಕ ಶಶಿಧರ್ ರಾವ್,ಸಾಮಾಜಿಕ ಚಿಂತಕರಾದ ಸುಧೀರ್ ಶೆಟ್ಟಿ ಕೆದೂರು,ಕೀರ್ತಿಶ್ ಪೂಜಾರಿ, ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *