
ಅಲೆವೂರು: ಉಡುಪಿ – ಮಣಿಪಾಲ ದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಗ್ರಾಮ. ಬಹುತೇಕ ಅಭಿವೃದ್ಧಿ ಯ ಪಥದಲ್ಲಿ ಇರುವ ಗ್ರಾಮ ಇದಾಗಿದೆ. ಇಲ್ಲಿ ಎಲ್ಲಾ ಇದ್ದರೂ ಗ್ರಾಮಕ್ಕೆ ಒಂದು ರುದ್ರ ಭೂಮಿ ಇಲ್ಲವಾಗಿದೆ ಎಂದು ಗ್ರಾಮಸ್ಥರು ಕೇಳಿ ಕೊಂಡಿದ್ದಾರೆ.
ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಗ್ರಾಮದ ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು ತೆಪ್ಪಗಿದ್ದು ತಮಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಅಲೆವೂರು, ಮರ್ಣೆ, ಮಂಚಿ, ಪ್ರಗತಿ ನಗರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಶವ ಸಂಸ್ಕಾರ ನಡೆಸಲು ದೂರದ ಉಡುಪಿ ನಗರದ ಬೀಡಿನ ಗುಡ್ಡೆ ರುದ್ರ ಭೂಮಿಗೆ ತೆರಳ ಬೇಕಾಗಿದೆ. ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ಒಂದೆಡೆ ಶವ ಸಂಸ್ಕಾರಕ್ಕೆ 3000 ರೂಪಾಯಿಗಳು ಹಾಗೂ ಅಲ್ಲಿನ ಉತ್ತರ ಕರ್ನಾಟಕದ ಕೂಲಿ ಕಾರ್ಮಿಕನೋರ್ವನಿಗೆ ಹೆಚ್ಚುವರಿ ಹಣ ನೀಡುವಂತೆ ಅಲ್ಲಿನ ಮಹಿಳೆ ಒತ್ತಾಯಿಸುತ್ತಾಳೆ ,ಅಲ್ಲದೆ ರುದ್ರ ಭೂಮಿಯ ಅಂಬುಲೆನ್ಸ್ ನ ದರ ಎಲ್ಲಾ ಸೇರಿಸುವಾಗ ಗ್ರಾಮಾಂತರ ಪ್ರದೇಶದ ಬಡವರು ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ನಡೆಸುವುದು ದುಬಾರಿಯಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸಂಜೆ 7 ಘಂಟೆಯ ನಂತರ ಬೀಡಿನ ಗುಡ್ಡೆ ರುದ್ರ ಭೂಮಿಯಲ್ಲಿ ಶವ ಸಂಸ್ಕಾರ ನಡೆಸದೆ ಇರುವುದು ಗ್ರಾಮಾಂತರ ಪ್ರದೇಶದ ಜನರಿಗೆ ತುಂಬಾ ಸಮಸ್ಯೆ ಯಾಗಿದೆ ಎಂದೂ
ಈ ಸಮಸ್ಯೆಯನ್ನು ಬಗೆಹರಿಸಲು ಅಲೆವೂರು ಗ್ರಾಮದಲ್ಲಿ ಒಂದು ಸುಸಜ್ಜಿತ ರುದ್ರ ಭೂಮಿಯನ್ನು ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ ಎಂದಿದ್ದಾರೆ. ಈ ಬಗ್ಗೆ ಗ್ರಾಮದ ಜನ ಪ್ರತಿನಿಧಿಗಳು, ಯುವ ಸಂಘಟನೆಗಳು ಎಚ್ಚೆತ್ತು ಕೊಂಡು ಕಾರ್ಯೋನ್ಮುಖರಾಗಬೇಕಾಗಿದೆ.
ಅಲೆವೂರು ಗ್ರಾಮದಲ್ಲಿ ರುದ್ರ ಭೂಮಿಯ ನಿರ್ಮಾಣ ಆಗುವವರೆಗೆ ಬೀಡಿನ ಗುಡ್ಡೆ ರುದ್ರ ಭೂಮಿ ಯಲ್ಲಿ ಶವ ಸಂಸ್ಕಾರದ ದರ ಎಷ್ಟು? ಅಲ್ಲಿ ನ ಕಾವಲು ಗಾರ ಮಹಿಳೆ ಗೆ ಕೊಡ ಬೇಕಾದ ದರ ಎಷ್ಟು ಎಂದು ಜಿಲ್ಲಾಧಿಕಾರಿಯವರು ಸ್ಪಷ್ಟವಾಗಿ ನಾಮಫಲಕದಲ್ಲಿ ಬರೆಯುವಂತೆ, ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವಂತೆ ಅಲ್ಲಿನ ಸಮಿತಿಯವರಿಗೆ ಆದೇಶಿಸ ಬೇಕಾಗಿದೆ. ಈ ಮೂಲಕ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಗ್ರಾಮಾಂತರದ ಬಡ ಜನರ ಸುಲಿಗೆ ನಿಲ್ಲುವಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಾಂತರದ ಜನತೆ ಆಗ್ರಹಿಸಿದ್ದಾರೆ.
ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ಗಮನಹರಿಸಬೇಕು ಹಾಗೂ ಅಲೆವೂರು ಗ್ರಾಮದಲ್ಲಿ ಒಂದು ಸುಸಜ್ಜಿತ ರುದ್ರ ಭೂಮಿಯನ್ನು ನಿರ್ಮಾಣ ಮಾಡುವ ಮೂಲಕ ಸಮಸ್ಯೆ ಪರಿಹರಿಸ ಬೇಕೆಂದು ವಿನಂತಿಸಿ ಕೊಂಡಿದ್ದಾರೆ.
Leave a Reply