ಅಕ್ರಮ ಮರಳು ಕಳ್ಳಸಾಗಣಿಕೆದಾರರಿಂದ ಶರಾವತಿ ಒಡಲು ಬರಿದು – ಅಕ್ರಮ ಮರಳು ಕಳ್ಳಸಾಗಾಣಿಕೆದಾರರಿಗೆ ಪರೋಕ್ಷವಾಗಿ ಮುಕ್ತ ಬೆಂಬಲ – ಗಣಿ ಇಲಾಖೆ ಪೊಲೀಸ್ ಇಲಾಖೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಪ್ರತಿ ಮರಳು ಕಳ್ಳ ಸಾಗಾಣಿಕೆದಾರರಿಂದ ಮಾಮೂಲಿ ಫಿಕ್ಸ್ ಗಂಭೀರ ಆರೋಪ – ಬಡವರಿಗೆ ಮನೆ ಕಟ್ಟಲು ಬಳಸುವ ಮರಳು ದುಪ್ಪಟ್ಟು ದರ ಪೀಕುತ್ತಿರುವ ಮರಳು ಸಾಗಾಣಿಕೆದಾರರು – ಶಾಸಕ ಗೋಪಾಲ ಕೃಷ್ಣ ಬೇಳೂರು ಮರಳು ಯೋಗ್ಯ ದರದಲ್ಲಿ ಒದಗಿಸುವಂತೆ ಸೂಕ್ತ ಕ್ರಮಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಮನವಿಯತ್ತ ನೊಂದ ಮರಳು ಗ್ರಾಹಕರು.
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಅದರಲ್ಲೂ ಮಳೆಗಾಲ ವಿಪರೀತ ಆದ ಕಾರಣ ಶರಾವತಿ ನದಿ ಪಾತ್ರದಲ್ಲಿ ಮರಳು ಸಂಪತ್ತು ಹೇರಳವಾಗಿ ಶರಾವತಿ ನದಿ ತಟದಲ್ಲಿ ದೊರೆಯುತ್ತಿದ್ದೂ, ಅಕ್ರಮ ಮರಳು ಕಳ್ಳಸಾಗಣಿಕೆದಾರರ ಬಿಸಿನೆಸ್ ಜೋರಾಗಿ ಹಗಲಿಗಿಂತ ರಾತ್ರಿಯೇ ಕಾರುಬಾರು ಜಾಸ್ತಿಯಾಗಿರುವುದು ಹಳ್ಳಿ ರಸ್ತೆ ಸೇತುವೆ ಬೀಳುವ ಸ್ಥಿತಿಗೆ ತಲುಪಿರುವುದು ಬೆತ್ತಲೆ ಜಗತ್ತಿನಲ್ಲಿ ನಗ್ನಸತ್ಯವಾಗಿದೆ.
ಅಕ್ರಮ ಮರಳು ಕಳ್ಳ ಸಾಗಣಿಕೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದ ಗಣಿ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶದ ಕಿಚ್ಚು ಸಾಗರ ತಾಲೂಕಿನಲ್ಲಿ ಹೆಚ್ಚಾಗಿದೆ
ಮರಳು ದುಪ್ಪಟ್ಟು ಬೆಲೆಗೆ ಮರಳು ಸರಬರಾಜು ಆಗುತ್ತಿರುವ ಹಿನ್ನಲೆ ಬಡವರು ಮರಳು ಖರೀದಿ ಮಾಡಲು ಅದರಲ್ಲೂ ಸರ್ಕಾರ ನೀಡಿದ ಆಶ್ರಯ ವಸತಿ ಮನೆಗಳನ್ನು ನಿರ್ಮಿಸಲು ಕೃತಕ ಮರಳು ಅಭಾವ ಸೃಷ್ಟಿಸುವವರ ವಿರುದ್ಧ ತಾಲ್ಲೂಕು ಆಡಳಿತ ಕಛೇರಿ ಎದುರು ಪ್ರತಿಭಟನೆಗೆ ಸಜ್ಜಾಗಿರುವ ಮಾಹಿತಿ ಲಭ್ಯವಾಗಿದೆ
*ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದ ಜನಪರ ಜನಸ್ನೇಹಿ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರಲ್ಲಿ ನೊಂದ ಮರಳು ಗ್ರಾಹಕರುಗಳು ಮರಳು ಯೋಗ್ಯ ದರದಲ್ಲಿ ವಿತರಣೆ ಮಾಡಲು ಕ್ರಮವಹಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
🙏✍️ಓಂಕಾರ ಎಸ್. ವಿ. ತಾಳಗುಪ್ಪ*