
ಶರನವರಾತ್ರಿಯ ಐದನೇ ದಿನದಂದು ಜಗನ್ಮಾತೆ ಹಲವು ಮಕ್ಕಳ ತಾಯಿ ಕೋಟ ಅಮೃತೇಶ್ವರಿ ಅಮ್ಮನ ಸನ್ನಿದಾನಕ್ಕೆ ಕುಟುಂಬ ಸಮೇತ ನಮ್ಮ ರಾಜ್ಯ ಕಾಂಗ್ರೆಸ್ ನಾಯಕರು ಹಾಗೂ ಸಾರಿಗೆ & ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿರವರ ಆಪ್ತರಾದ ಶಂಕರ್ ಶೆಟ್ಟಿ ರವರು ಕುಟುಂಬ ಸಮೇತವಾಗಿ ಇಂದು ದೇವಿಯ ದರ್ಶನ ಪಡೆದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೊಡುಗೈ ದಾನಿಗಳಾದ ಆನಂದ ಸಿ ಕುಂದರ್ ರವರು ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯರ ವತಿಯಿಂದ ಗೌರವ ಪೂರಕವಾಗಿ ಅವರನ್ನು ಶಾಲು ಹೊದಿಸಿ ದೇವರ ಪ್ರಸಾದ ಫಲ ಪುಷ್ಪ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ , ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಎ ಕುಂದರ್ , ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡರು ವಕ್ತಾರರು ಆದ ವಿಕಾಸ್ ಹೆಗ್ಡೆ, ಕೋಟ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಅಧ್ಯಕ್ಷರಾದ ದಿನೇಶ್ ಬಂಗೇರ , ಕೋಟತಟ್ಟು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಕಚ್ಕೆರೆ , ಕೋಟ ಬ್ಲಾಕ್ ಕಾಂಗ್ರೆಸ್ ನ ಇಂಟಕ್ ಅಧ್ಯಕ್ಷರಾದ ದೇವೇಂದ್ರ ಗಾಣಿಗ ಕೋಟ , ಮಂಜುನಾಥ್ ಪೂಜಾರಿ ಗೋಳಿಬೆಟ್ಟು , ಸ್ಥಳೀಯ ಕಾಂಗ್ರೆಸ್ ಮುಖಂಡರಾದ ದೇವದಾಸ್ ಕಾಂಚನ್ ಕೋಟ ಹಾಗೂ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಸದಸ್ಯರಾದ ಶಿವಪೂಜಾರಿ ಕೋಟ ಪಡುಕೆರೆ, ಚಂದ್ರ ಆಚಾರ್ಯ ಕೋಟ , ಸುಧಾ ಎ ಪೂಜಾರಿ ಕೋಟ , ಸುಭಾಸ್ ಶೆಟ್ಟಿ ಗಿಳಿಯಾರ್ , ಗಣೇಶ್ ಕೆ ನೆಲ್ಲಿಬೆಟ್ಟು , ರತನ್ ಐತಾಳ್ ಕೋಟ , ಜ್ಯೋತಿ ದೇವದಾಸ್ ಕಾಂಚನ್ ಕೋಟ ಹಾಗೂ ಅರ್ಚಕರಾದ ಸಂತೋಷ ಜೋಗಿ ಅವರು ಉಪಸ್ಥಿತರಿದ್ದರು.














Leave a Reply