Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಕುಂದಾಪುರ : ಸರಕಾರಿ ಅಧಿಕಾರಿಗಳಿಗೆ, ವಕೀಲರಿಗೆ, ಪತ್ರಕರ್ತರಿಗೆ ಬೆದರಿಕೆ, ಅವ್ಯಾಚ ಶಬ್ಬಗಳಿಂದ ನಿಂದನೆ ಮಾಡಿದ ಮಹಾಸತಿ ಬಿಲ್ಡರ್ಸ್ ಶೇಷಯ್ಯ ಕೊತ್ವಾಲ್ ವಿರುದ್ದ ದೂರು ದಾಖಲು

ವರದಿ : ಪುರುಷೋತ್ತಮ್ ಪೂಜಾರಿ

ಕುಂದಾಪುರದ ಸಾರ್ವಜನಿಕರಿಂದ ಶೇಷಯ್ಯ ಕೊತ್ವಾಲ್ ಎನ್ನುವ ಮಹಾಸತಿ ಬಿಲ್ಡರ್ಸ್, ಕುಂದಾಪುರ ಇವರ ವಿರುದ್ಧ ಹಲವಾರು ದೂರುಗಳು ನಮ್ಮ NAI ಸಂಘಟನೆಗೆ ಬಂದಿದ್ದು,ಇವರಿಂದ ಹಲವಾರು ಕಾನೂನು ಉಲ್ಲಂಘನೆ, ಕೊಲೆ ಬೆದರಿಕೆ, ಅಕ್ರಮ ಭೂ ಕಬಳಿಕೆ, ಇವರ ಲಾಡ್ಜ್ ನಲ್ಲಿ ವೈಶ್ಯಾವಟಿಕೆ, ಇವರ ಬಿಲ್ಡಿಂಗ್ ಕೊಳಚೆ ನೀರು ಬಿಟ್ಟು ಸಾರ್ವಜನಿಕರಿಗೆ ತೊಂದರೆ, ಸರಕಾರಿ ಅಧಿಕಾರಕಾರಿಗಳಿಗೆ ಅಗೌರವ, ಬೆದರಿಕೆ, ಪತ್ರಕರ್ತರಿಗೆ ಅಗೌರವ, ಕೆಲಸ ಮಾಡುವ ಮಹಿಳೆಯರ ಜೊತೆಗೆ ಅಸಭ್ಯ ಅನುಚಿತ ವರ್ತನೆ, ಇವರ ರೆಸಾರ್ಟ್ ನಲ್ಲಿ ಅನುಮಾನಸ್ಪದ ಸಾವು, ಹೀಗೆ ಸಾಲು ಸಾಲು ದೂರುಗಳು ಬಂದಿರುತ್ತದೆ.

ದಿನಾಂಕ 12/10/2024ರಂದು 10.57ನಿಮಿಷಕ್ಕೆ ಸಂಘಟನೆ ಅಧ್ಯಕ್ಷರು ಕರೆ ಮಾಡಿ ಶೇಷಯ್ಯ ಕೊತ್ವಾಲರೇ ನಿಮ್ಮ ಮೇಲೆ ಹಲವಾರು ದೂರುಗಳು NAI ಸಂಘಟನೆಗೆ ಬಂದಿದೆ. ನೀವು ಎಲ್ಲಿ ಇದ್ದೀರಿ ಎಂದಾಗ ನಾನು ಮುಂಬೈಯಲ್ಲಿ  ಇದ್ದೇನೆ ಎಂದು ಕುಂದಾಪುರದಲ್ಲೇ ಇದ್ದು ಸುಳ್ಳು ಹೇಳಿರುತ್ತಾನೆ. ಅಲ್ಲ ಸಾರ್ ನೀವು ಕುಂದಾಪುರದಲ್ಲಿ ಇದ್ದೀರಿ ಅಂತೆ ನಿನ್ನೆ ಗಂಗೊಳ್ಳಿ ಫುನ್ಕ್ಷನ್ ಹೋಗಿದ್ದಿರಿ ಎಂದ ಕೂಡಲೇ ಶೇಷಯ್ಯ ಕೊತ್ವಾಲ್ ರವರು ಏಕಾಏಕಿ ಸೂಳೆಮಗನೇ ಪೂಜಾರಿ ನೀವು ಪತ್ರಕರ್ತರು ಗಿರಾಕಿಗಳು, ರೋಲ್ ಕಾಲ್, ಬ್ಲಾಕ್ ಮೆಲ್ ಮಾಡುವವರು  ಕಳೆದ 30 ವರ್ಷಗಳಿಂದ ಹಲವಾರು ಪತ್ರಕರ್ತರಿಗೆ ರೋಲ್ ಕಾಲ್ ನೀಡಿದ್ದೇನೆ. ನಿಮ್ಮ ಹತ್ತಿರ ಮಾತಾಡುವಂಥದ್ದು ಏನು ಇಲ್ಲ ನೀನು ಏನು ಮಾಡಿಕೊಳ್ಳುತ್ತಿ ಮಾಡ್ಕೋ ಬರೆಯುವುದಾದರೆ ಬರೆ ನಿನ್ನಂತಹ ರೋಲ್ ಕಾಲ್, ಬ್ಲಾಕ್ ಮೆಲ್ ಪತ್ರಕರ್ತರನ್ನು  ನೋಡಿದ್ದೇನೆ ಎಂದು ಉದ್ದಾಟತನದಿಂದ ಮಾತಾಡಿ ಅಗೌರವ  ತೋರಿಸಿರುತ್ತಾರೆ.

ತದಾನಂತರ ತನ್ನ ಆಪ್ತನಾದ ಸ್ಮೈಲ್ ಸತೀಶ್ ರವರಿಗೆ ಕರೆ ಮಾಡಿ  ನನ್ನ ನಂಬರ್ ನೀಡಿ ಇದು ಯಾರೆಂದು ತಿಳಿ ಅಂತ ಹೇಳಿರುತ್ತಾರೆ. ಸ್ಮೈಲ್ ಸತೀಶ್ ತನ್ನ ಚೇಲ್ ರಮೇಶ್ ಮೆಂಡನ್ ಎನ್ನುವರಿಗೆ ಅಧ್ಯಕ್ಷರ ನಂಬರ್  ನೀಡಿ ಕರೆ ಮಾಡಿಸಿರುತ್ತಾರೆ. ಆಗ ನಾನು NAI ಉಡುಪಿ ಜಿಲ್ಲಾಧ್ಯಕ್ಷ  ಎಂದಾಗ ,  sorry  ಕಿರಣರವರೇ ನನಗೆ ಶೇಷಯ್ಯ ಕೋತ್ವಾಲ್ ರವರ ಆಪ್ತ ಸ್ಟೈಲ್ ಸತೀಶ್ ಕಾಲ್ ಮಾಡಿ ಹೇಳಿದ್ರು ಯಾರೋ ಒಬ್ಬ ಪತ್ರಕರ್ತ ಶೇಷಯ್ಯ ಕೊತ್ವಾಲ್ ಗೆ ಕಾಲ್ ಮಾಡಿದ್ದರು, ನಾನು ಅವನ ಮೇಲೆ ಬಿಲ್ಡರ್ಸ್ ಗೆ ತೊಂದರೆ ಕೊಟ್ಟರೆ  ಒಂದು ಸ್ಪೆಷಲ್ ಆಕ್ಟ್ ಇದೆ ಅದರ ಅಡಿಯಲ್ಲಿ ಸುಳ್ಳು ಕೇಸು ದಾಖಲಿಸಿ SP ಅವರಿಗೆ ಮಾತಾಡಿ ಅವನನ್ನು ಒಳಗೆ ಹಾಕಿಸುತ್ತೇನೆ, ಅದಕ್ಕೂ ಬಗ್ಗದಿದ್ದರೆ ಬ್ರಹ್ಮಾವರ, ಮಂಗಳೂರಿನಲ್ಲಿ ನಮ್ಮ ಜನ ಇದ್ದಾರೆ ಅವರಿಂದ ಕೈ ಕಾಲು ತೆಗಿಸುತ್ತೇನೆ ಎಂದು ಹೇಳಿದ್ದಾರೆ ಎಂದು ರಮೇಶ್ ಮೆಂಡನ್ ತಿಳಿಸಿರುತ್ತಾರೆ. ಕಿರಣ್ ರವರೇ ಅದೆಲ್ಲ ಯಾಕೆ ಕೂತು ಮಾತಾಡಿ ಸೆಟ್ಲ್ ಮಾಡುವ ಎಂದು ರಮೇಶ್ ಮೆಂಡನ್ ಹೇಳಿದಾಗ ಜಿಲ್ಲಾಧ್ಯಕ್ಷರು ಅವ್ರು ಹೇಳಿದ ಪತ್ರಕರ್ತ ನೀವು ಇರಬಹುದು ನನಗೆ ಅಕ್ರಮ ಬಯಲು ಮಾಡಿ ಅಭ್ಯಾಸ ಇರುವುದು, ಅವರ ಎಲ್ಲಾ ಅಕ್ರಮ ಸಾಕ್ಷಿ ಸಮೇತ ಅನಾವರಣ ಮಾಡುತ್ತೇವೆ ಎಂದು ಖಡಕ್ ಆಗಿ ಕೊತ್ವಲ್ ಚೇಲ್ ನಿಗೆ ಹೇಳಿದ್ದಾರೆ.

ಕುಂದಾಪುರದ ಹೃದಯ ಭಾಗದಲ್ಲಿರುವ  ಪೊಲೀಸ್ ಠಾಣೆಗೆ ಹತ್ತಿರದಲ್ಲಿರುವ  ವೆಂಕಟರಮಣ ಆರ್ಕೇಡ್ ವಾಣಿಜ್ಯ ಸಂಕೀರ್ಣದ ಎಲ್ಲಾ ಕೊಳಚೆ, ಪಿಟ್ ನೀರನ್ನು ಚರಂಡಿಗೆ ಬಿಟ್ಟು ಸುತ್ತಮುತ್ತಲಿನ  ಸಾರ್ವಜನಿಕರು ಧುರ್ನಾಥದಲ್ಲಿ,  ರಾಮಮಂದಿರಕ್ಕೆ ಹೋಗುವ ರೋಡ್ ನಿವಾಸಿಗಳಿಗೆ ಡೆಂಗು, ಕಾಲರ್ ಸಾಂಕ್ರಾಮಿಕ ರೋಗದ ಭಾಗ್ಯ ನೀಡಿದರು ಕೊತ್ವಾಲ್ ನ ವಿರುದ್ಧ ಪುರಸಭೆ ಕೌನ್ಸಿಲರ್ ಪ್ರಭಾವತಿ ಶೆಟ್ಟಿ,  ಹಿರಿಯ ವಕೀಲರುಗಳು, ಡಾಕ್ಟರ್ ದೂರು ನೀಡಿದರೂ, ಪುರಸಭೆ ಹೆಲ್ತ್ ಇನ್ಸ್ಪೆಕ್ಟರ್ ಮತ್ತು ಮುಖ್ಯಾಧಿಕಾರಿಗಳು ಸ್ಥಳ ವೀಕ್ಷಣೆ ಮಾಡಿ, ಇವರಿಗೆ ನೋಟಿಸ್ ನೀಡಿದರು ಸಹ ಅಧಿಕಾರಿಗಳಿಗೆ ಲೆಕ್ಕ ತೆಗೆದುಕೊಳ್ಳದೆ, ನೀವು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ನಿಮ್ಮಂತಹ ಹಲವು ಅಧಿಕಾರಿಗಳನ್ನು ನೋಡಿದ್ದೇನೆ ಎಂದು ಅವರಿಗೆ ಬೆದರಿಕೆ ಹಾಕಿದ್ದಾನೆ ಎನ್ನುತ್ತಾರೆ ಕುಂದಾಪುರದ ಸಾರ್ವಜನಿಕರು. ವೆಂಕಟರಮಣ ಆರ್ಕಡ್ ನ ಐದನೇ ಫ್ಲೋರ್ ನಲ್ಲಿರುವ ಲಾಡ್ಜ್ ನಲ್ಲಿ ವೈಶ್ಯವಾಟಿಕೆ ನಡೆಯುತ್ತಿದೆ ಎಂದು ಹಲವು ಕುಂದಾಪುರದ ಸಾರ್ವಜನಿಕರು ದೂರು ನೀಡಿದರು ಸಹ  ಪೊಲೀಸ್ ಇಲಾಖೆ  ಯಾವುದೇ ರೀತಿಯ ಕ್ರಮ ಈತನ ಮೇಲೆ ಕೈಗೊಂಡಿಲ್ಲದೇ ಇರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ಇತ್ತೀಚಿಗೆ ತ್ರಾಸಿ ಬಳಿಯಲ್ಲಿ  CRZ ವ್ಯಾಪ್ತಿಗೆ ಬರುವ ಜಾಗದಲ್ಲಿ ಕೊತ್ವಾಲ್ ಸಭಾಂಗಣ ಕಟ್ಟುತಿದ್ದು  ಸಾರ್ವಜನಿಕರು ಹೇಳುವಂತೆ ಇಲ್ಲಿ ಎರಡು ಅನುಮಾನಸ್ಪದ ಸಾವು ನಡೆದಿದೆ ಆದರೂ ಅದು ಆತ್ಮಹತ್ಯೆ ಎಂದು ಪ್ರಕರಣ ಮುಚ್ಚಿ ಹೋಗಿದೆ. ಗಂಗೊಳ್ಳಿ, ನಾಯಿಕೋಡಿಯಲ್ಲಿ ಸಹ CRZ ಜಾಗದಲ್ಲಿ ರೆಸಾರ್ಟ್ ಕಟ್ಟುತ್ತಿರುವುದು ಬೆಳಕಿಗೆ ಬಂದಿರುತ್ತದೆ. ಈತ ಆಫೀಸ್ ನಲ್ಲಿ ಕೆಲಸ ಮಾಡುವ ಹೆಣ್ಣು ಮಕ್ಕಳು ಇವನ ಮಾತಿಗೆ ಒಪ್ಪದಿದ್ದರೆ ಕೂಡಲೇ ಕೆಲಸದಿಂದ ವಜಾಗೊಳಿಸುತ್ತಾನೆ  ಎಂದು ಈತನಲ್ಲಿ ಮೊದಲು ಕೆಲಸ ಮಾಡಿದ ಹಲವಾರು ಹೆಂಗಳೆಯರು ಬಂದು ಅವರ ದುಃಖ ಹೇಳಿಕೊಂಡು ದೂರು ನೀಡಿರುತ್ತಾರೆ.

ಇತ್ತೀಚಿಗೆ  ಮಾನ್ಯ ಪ್ರಧಾನ ಮಂತ್ರಿಗಳು ಮತ್ತು ಬಿಹಾರ್ ಮುಖ್ಯಮಂತ್ರಿ  ಯೋಗಿ ಯೋಗೇಂದ್ರನಾಥ್ ಪತ್ರಕರ್ತರಿಗೆ ಬೆದರಿಕೆ ನಿಂದನೆ ಹಲ್ಲೆ ಮಾಡಿದಲ್ಲಿ  ದೂರು ದಾಖಲೆ ಮಾಡಬೇಕು 24 ಗಂಟೆ ಒಳಗೆ ಅವರನ್ನು ಬಂಧಿಸಿ ಅವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು  ಹೇಳಿರುತ್ತಾರೆ. ಶೇಷಯ್ಯ ಕೋತ್ವಾಲ್ ವಿರುದ್ಧ ಪೊಲೀಸ್ ಇಲಾಖೆ ಸತ್ಯ ಅಸತ್ಯೆಯನ್ನು ಪರಿಶೀಲಿಸಿ, ಈತನ ಅಕ್ರಮ ದಂಧೆಗೆ ಕಡಿವಾಣ ಹಾಕ್ಬೇಕು ಎನ್ನುವುದು ಕುಂದಾಪುರ ಸಾರ್ವಜನಿಕರು ಅಗ್ರಹಿಸುತ್ತಿದ್ದಾರೆ. ಜಿಲ್ಲಾಧ್ಯಕ್ಷರ ಹತ್ತಿರ ಮಾತನಾಡುವಾಗ ಈತನೇ ಹೇಳಿಕೊಂಡಂತೆ ನಾನು ಹಲವಾರು ಪತ್ರಕರ್ತರಿಗೆ ರೋಲ್ ಕಾಲ್ ನೀಡಿದ್ದೇನೆ ನನ್ನನು ಬ್ಲಾಕ್ ಮಾಡಿದ್ದಾರೆ ನನಗೆ ಎಲ್ಲಾ ನಿಭಾಯಿಸಿಗೊತ್ತಿದೆ ಎಂದು ಸ್ವತಃ ಹೇಳಿ ಕೊಂಡಿದ್ದಾರೆ, ಒಂದು ವೇಳೆ ಈತ ಅಕ್ರಮ ಚಟುವಟಿಕೆಯಲ್ಲಿ ಭಾಗಿ ಆಗದೇ ಇದ್ದಲ್ಲಿ ಪತ್ರಕರ್ತರಿಗೆ ಹಣ ನೀಡುವ ಬದಲು ದೂರು ದಾಖಲು ಮಾಡಿಲ್ಲ ಯಾಕೆ?

ಮೇಲ್ನೋಟಕ್ಕೆ ಈತನ ಅಕ್ರಮ ದಂಧೆಯ ಬಗ್ಗೆ ಕುಂದಾಪುರದ ಸಾರ್ವಜನಿಕರಿಗೂ ತಿಳಿದಿದೆ. ಈತ ಯಾಕೆ ಮಾಮೂಲಿ ಕೊಡುತ್ತಾನೆ?  ಹಾಗಾಗಿ ಪೊಲೀಸ್ ರು  ಈತ ಯಾವ ಯಾವ ಪತ್ರಕರ್ತರಿಗೆ ರೋಲ್ ಕಾಲ್ ನೀಡಿದ್ದಾನೆ ಎನ್ನುವುದರ ಮಾಹಿತಿ  ಪಡೆದು ಅವರುಗಳ ವಿರುದ್ಧವು ಸಹ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು NAI ಜಿಲ್ಲಾಧ್ಯಕ್ಷರು, ಮಾನವ ಹಕ್ಕು ಪರಿಷತ್ ಜಿಲ್ಲಾಧ್ಯಕ್ಷರು ಅಗ್ರಹಿಸಿದ್ದಾರೆ. ಈಗಾಗಲೇ ಶೇಷಯ್ಯ ಕೊತ್ವಾಲ್ ವಿರುದ್ದ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಟಾಧಿಕಾರಿಗಳಿಗೆ, ಕುಂದಾಪುರ DYSP, ಕುಂದಾಪುರ ಠಾಣಾಧಿಕಾರಿಯವರಿಗೆ ದೂರು ನೀಡಿದ್ದಾರೆ. ಇನ್ನಾದರೂ ಜಿಲ್ಲಾಡಳಿತ, ದಕ್ಷ ಪೊಲೀಸ್ ವರಿಷ್ಠಾಧಿಕಾರಿಗಳು  ಕ್ರಮ ಕೈಗೊಳ್ಳುವರೇ?? ಎಂದು ಜಾತಕ ಪಕ್ಷಿಯಂತೆ ಕುಂದಾಪುರ ಜನತೆ ಎದುರು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *