Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಅಮೇರಿಕ ಜರ್ಮನಿಯಲ್ಲಿ ವೃತ್ತಿ ನಡೆಸಿದ ಇಂಜಿನಿಯರ್ ಪದವೀಧರ ಇದೀಗ ಅಸಹಾಯಕ, ಸೂಚನೆ :

ಉಡುಪಿ :ಅ :15:ಅಮೇರಿಕ ಜರ್ಮನಿಯಲ್ಲಿ ಕೆಲಸ ಮಾಡಿದ್ದ ಇಂಜಿನಿಯರ್ ಪದವೀಧರ  ಇದೀಗ ಇಳಿ ವಯಸ್ಸಿನಲ್ಲಿ ನೊಂದು  ಆಶ್ರಯಕ್ಕಾಗಿ  ಅಂಗಲಾಚಿದ್ದು  ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿ ಯವರು ಸ್ಪಂದಿಸಿ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿರುತ್ತಾರೆ.ರಾಮದಾಸ್ ಉದ್ಯಾವರ ಸಹಕರಿಸಿರುತ್ತಾರೆ.

ವ್ಯಕ್ತಿಯ ಹೆಸರು ರಮೇಶ್ ಪಾಡುರಂಗ ಪಾವಸ್ವರ (65ವ )ಮೂಲತಃ ಶಿರಸಿಯವರಾಗಿದ್ದು ಹೊರದೇಶಗಳಲ್ಲಿ ಕೆಲಸಮಾಡಿ 10ಕ್ಕೂ ಹೆಚ್ಚು ಭಾಷೆಗಳನ್ನು ಕರಗತ ಮಾಡಿಕೊಂಡ ಹಿರಿಯ ವ್ಯಕ್ತಿ ಇದೀಗ ಅಸಹಾಯಕರಾಗಿದ್ದಾರೆ,ಈ ಬಗ್ಗೆ ವಿಶುಶೆಟ್ಟಿ ವಿನಂತಿಗೆ “ಹೊಸಬೆಳಕು “ಆಶ್ರಮ ಆಶ್ರಯ ಕಲ್ಪಿಸಿದೆ. ತನ್ನ ಸಹೋದರಿ ವೈದ್ಯೆಯಾಗಿ ಸೇವೆ ಮಾಡುತ್ತಿರುವುದಾಗಿ ನೊಂದ ವ್ಯಕ್ತಿ ಮಾಹಿತಿ ನೀಡಿದ್ದಾರೆ. ಕೌಟುಂಬಿಕ ಕಲಹದಿಂದಾಗಿ ಒಂಟಿಯಾಗಿ ಎಲ್ಲವನ್ನು ಕಳೆದುಕೊಂಡು ಆಶ್ರಯ ಇಲ್ಲದವನಾಗಿ ಈ  ಪರಿಸ್ಥಿತಿ ಬಂದಿದೆ ಎಂದು ದುಃಖಿಸಿದ್ದಾರೆ ಸಂಬಂಧಿಕರು ಹೊಸಬೆಳಕು ಆಶ್ರಮ ಸಂಪರ್ಕಿಸಬಹುದು.                 

ಈ ಬಗ್ಗೆ ಉಡುಪಿ ನಗರ ಠಾಣೆಗೆ ಮಾಹಿತಿ ನೀಡಲಾಗಿದೆ.

Leave a Reply

Your email address will not be published. Required fields are marked *