Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ ಸುವರ್ಣ ಮಹೋತ್ಸವ ಕಾರ್ಯಕ್ರಮ

ಕೋಟ: ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮ ಮಂಗಳವಾರ ಸಾಲಿಗ್ರಾಮದ ಸಂಘದ ವಠಾರದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಸಂಘದ ವಿಸ್ತçತ ಕಟ್ಟಡವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ ಉದ್ಘಾಟಿಸಿ ಮಾತನಾಡಿ ಸಾಲಿಗ್ರಾಮ ಹಾಲು ಉತ್ಪಾದಕರ ಸಂಘ ಅಭಿವೃದ್ಧಿ ಪಥದತ್ತ ಸಾಗಿದ್ದು ಸ್ವಂತ ತಳಹದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಅಲ್ಲದೆ ಹೈನುಗಾರಿಕಾ ಕ್ಷೇತ್ರ ಸ್ವಾವಲಂಬಿ ಬದುಕಿಗೆ ಮುನ್ನಡಿ ಬರೆದಿದೆ ಎಂದು ಅಭಿಪ್ರಾಯಪಟ್ಟರು.
ದ.ಕ. ಸಹಕಾರಿ ಹಾಲು ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಜಯರಾಮ ರೈ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಮಾಜಿ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಗೋ ಪೂಜೆ ನೆರವೆರಿಸಿದರು.

ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಗಾಣಿಗ ಅಧ್ಯಕ್ಷತೆ ವಹಿಸಿದ್ದರು
ಹೆಚ್ಚು ಹಾಲು ಹಾಕಿದ ಸದಸ್ಯರಾದ ರಾಘವೇಂದ್ರ (ರಘು) ಮಧ್ಯಸ್ಥ ,ಬಲರಾಮ ನಕ್ಷತ್ರಿ,ರಾಜು ದೇವಾಡಿಗ ಬಹುಮಾನ ನೀಡಿ ಗೌರವಿಸಲಾಯಿತು. ಒಕ್ಕೂಟದ ಅಧಿಕಾರಿಗಳಾದ ಡಾ ಅನಿಲ್ ಕುಮಾರ್ ಶೆಟ್ಟಿ,ಒಕ್ಕೂಟದ ವಿಸ್ತರಣಾಧಿಕಾರಿ ಸರಸ್ವತಿ ಸುಜಾತ ಬಾಯರಿ ಇವರುಗಳನ್ನು ಸನ್ಮಾನಿಸಲಾಯಿತು.

ಸಂಘದ ಮಾಜಿ ಅಧ್ಯಕ್ಷರಾದ ಶ್ರೀಕಾಂತ ಐತಾಳ,ಪಿ ನರಸಿಂಹ ಹೇರ್ಳೆ,ಶಂಕರನಾರಾಯಣ ಹೊಳ್ಳ,ಸಂಘದ ಹಾಲಿ ಅಧ್ಯಕ್ಷ ಗಣೇಶ ಗಾಣಿಗ, ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ ನಿಜಾಮ್ ಪಾಟೀಲ್ ಗುಣಿಗಾರ್,ಸಂಘದ ಮಾಜಿ ಮುಖ್ಯಕಾರ್ಯನಿರ್ವಾಹಕರಾದ ಶ್ರೀನಿವಾಸ ಹೇರ್ಳೇ ,ಶ್ರೀನಿವಾಸ ಐತಾಳ ,ಸೂರ್ಯನಾರಾಯಣ ಹೊಳ್ಳ, ಪ್ರಸ್ತುತ ಮುಖ್ಯಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಸುರೇಶ ನಾಯರಿ,  ಮಾಜಿ ಕಾರ್ಯದರ್ಶಿಗಳಾದ ಶಂಕರನಾರಾಯಣ ಐತಾಳ, ನಾಗರಾಜ ಐತಾಳ, ಗಾಂಧಿ ಐತಾಳ್, ಶಕುಂತ ,ಸ್ಥಾಪಕ ಕಾರ್ಯದರ್ಶಿ ಪಿ.ವಿ ಶ್ರೀನಿವಾಸ ಐತಾಳ್, ವಿವಿಧ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯ ನಿರ್ವಾಹಕರನ್ನು ಸೇರಿದಂತೆ ಮಾಜಿ ನಿರ್ದೇಶಕರಗಳನ್ನು  ಗುರುತಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ರವಿರಾಜ ಹಗ್ಡೆ ,ಒಕ್ಕೂಟ ಮಾಜಿ ಅಧ್ಯಕ್ಷ ಜಗದೀಶ್ ಕಾರಂತ,ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ನರಸಿಂಹ ಕಾಮತ್,ಎಮ್ ಸುಧಾಕರ ಶೆಟ್ಟಿ , ಸ್ಮಿತಾ ಆರ್ ಶೆಟ್ಟಿ ,ಬೋಳ ಸದಾಶಿವ ಶೆಟ್ಟಿ , ಕಮಲಾಕ್ಷ ಹೆಬ್ಬಾರ್ ,ಒಕ್ಕೂಟದ ವ್ಯವಸ್ಥಾಪಕ  ಡಾ ರವಿರಾಜ ಉಡುಪ , ದ.ಕ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಮಾಜಿ ಅಧ್ಯಕ್ಷ ಶೇಡಿಕೊಡ್ಲು ವಿಠಲ ಶೆಟ್ಟಿ,ದ.ಕ ಸಹಕಾರಿ ಹಾಲು ಒಕ್ಕೂಟ ಮಂಗಳೂರು ಮಾಜಿ  ನಿರ್ದೇಶಕಿ ಜಾನಕಿ ಹಂದೆ,,ಅಘೋರೇಶ್ವರ ದೇಗುಲ ಕಾರ್ತಟ್ಟು ಇದರ ಮುಕ್ತೇಸರ ಚಂದ್ರಶೇಖರ ಕಾರಂತ ಉಪಸ್ಥಿತರಿದ್ದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿ ,ಚಂಡೆಯ ನಾದದೊಂದಿಗೆ  ಮೆರವಣಿಗೆಯ ಮೂಲಕ  ಅತಿಥಿಗಳನ್ನು ಸಂಘಕ್ಕೆ ಕರತೆರಲಾಯಿತು.
ಸಂಘದ ಮುಖ್ಯಕಾರ್ಯನಿರ್ವಾಹಕಾರಿ ಜ್ಯೋತಿ ಸುರೇಶ ನಾಯರಿ ವರದಿ ವಾಚಿಸಿದರು.ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಶ್ರೀನಿವಾಸ ಸೋಮಯಾಜಿ ಪ್ರಾಸ್ತಾವನೆ ಸಲ್ಲಿಸಿದರು.ಸಂಘದ ನಿರ್ದೇಶಕ ಸುಬ್ರಾಯ ಉರಾಳ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಸುಜಾತ ಬಾಯರಿ ನಿರೂಪಿದರು.ಸಂಘದ ಉಪಾಧ್ಯಕ್ಷ ರಮೇಶ ಹಂದೆ ವಂದಿಸಿದರು.

ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಹೈನುಗಾರರಾದ ರಘು ಮಧ್ಯಸ್ಥ,ಬಲರಾಮ ನಕ್ಷತ್ರಿ ಇವರುಗಳನ್ನು ಗುರುತಿಸಿ ಗೌರವಿಸಲಾಯಿತು. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ, ದ.ಕ. ಸಹಕಾರಿ ಹಾಲು ಒಕ್ಕೂಟ ಮಂಗಳೂರು ಉಪಾಧ್ಯಕ್ಷ ಜಯರಾಮ ರೈ, ದ.ಕ ಹಾಲು ಸಹಕಾರಿ ಉತ್ಪಾದಕರ ಒಕ್ಕೂಟದ ಮಾಜಿ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಸಾಲಿಗ್ರಾಮ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಗಾಣಿಗ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *