Web News Portal

ಕಿರಣ್ ಪೂಜಾರಿ ಸಾರಥ್ಯದಲ್ಲಿ…..

ಭತ್ತದ ಬೆಲೆ ನಿಗದಿ ಕುರಿತು : ರೈತರು-ಮಿಲ್ ಮಾಲಕರ ಸಭೆ

ಕೋಟ: ಭತ್ತದ ಬೆಲೆಯನ್ನು  ಹೆಚ್ಚಳಗೊಳಿಸಬೇಕು ಎನ್ನುವ ರೈತರ ಮನವಿಯ ಮೇರೆಗೆ ರೈತರು ಹಾಗೂ ಮಿಲ್ ಮಾಲಕರೊಂದಿಗೆ ಸೌಹಾರ್ದಯುತವಾದ ಸಭೆ ಅ.20ರಂದು ಕೋಟ ಸಹಕಾರಿ ಸಂಘದ ಸಭಾಂಗಣದಲ್ಲಿ ಕೋಟ ರೈತಧ್ವನಿ ಸಂಘಟನೆ ಆಶ್ರಯದಲ್ಲಿ  ನಡೆಯಿತು.

ರೈತರು ಬೆಳೆದ ಭತ್ತಕ್ಕೆ ಹತ್ತಾರು ವರ್ಷದಿಂದ ಬೆಲೆ ಎರಿಕೆಯಾಗಿಲ್ಲ. ಅಕ್ಕಿ ದರದಲ್ಲಿ ನಾಲ್ಕೆ÷Êದು ಪಟ್ಟು ಎರಿಕೆಯಾದರು ಭತ್ತಕ್ಕೆ ಹೆಚ್ಚಳವಾಗಿಲ್ಲ ಹಾಗೂ ಕಟಾವು ಅವಧಿಯಲ್ಲಿ ಬೆಲೆ ಇಳಿಕೆ ತಂತ್ರವನ್ನು ಮಿಲ್ ಮಾಲಕರು ಅನುಸರಿಸುತ್ತಾರೆ. ಈ ರೀತಿ ಮಾಡುವುದು ಸರಿಯಲ್ಲ. ಈ ಬಾರಿ ಉತ್ತಮ ಬೆಲೆ ನೀಡಬೇಕು ಎಂದು ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ತಿಳಿಸಿದರು.

ಮಿಲ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ  ತೆಕ್ಕಟ್ಟೆ ರಮೇಶ್ ನಾಯಕ್ ಮಾತನಾಡಿ, ರೈತರು ಎಲ್ಲರೂ ಒಟ್ಟಾಗಿ ಬೆಲೆ ಎರಿಕೆ ಬಗ್ಗೆ ಧ್ವನಿ ಎತ್ತುತ್ತಿರುವುದು ಇದೇ ಮೊದಲು. ಇದು ಕೃಷಿ ವಲಯದ ಉತ್ತಮ ಬೆಳವಣಿಗೆಯಾಗಿದೆ. ಆದರೆ ಭತ್ತಕ್ಕೆ ದರ ನಿಗದಿಪಡಿಸುವುದು ಮಿಲ್ ಮಾಲಕರು ಎನ್ನುವ ತಪ್ಪು ಅಭಿಪ್ರಾಯ ಸರಿಯಲ್ಲ. ಜಾಗತಿಕ ಬದಲಾವಣೆಗಳು, ಮಾರುಕಟ್ಟೆ ಮೌಲ್ಯವನ್ನು ಅವಲಂಭಿಸಿ ದರ ನಿಗದಿಯಾಗುತ್ತದೆ. ಆದ್ದರಿಂದ ಈಗಿರುವ ದರವನ್ನು ನಾವಾಗಿ ಎರಿಕೆ ಮಾಡುವುದು-ಕಡಿಮೆ ಮಾಡುವುದು  ಅಸಾಧ್ಯ. ರೈತರು ಭತ್ತವನ್ನು ಸಂಗ್ರಹ ಮಾಡಿ ಉತ್ತಮ ಬೆಲೆ ಬಂದ ಮೇಲೆ ಮಾರಾಟ ಮಾಡಬೇಕು ಮತ್ತು ಸರಕಾರದ ಮಟ್ಟದಲ್ಲಿ ಉತ್ತಮ ಬೆಂಬಲ ಬೆಲೆಗಾಗಿ ಆಗ್ರಹ ಮಾಡಬೇಕು ಎಂದರು.

ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಆದರೆ ಮಿಲ್ ಮಾಲಕರು ಬೆಲೆ ಎರಿಕೆಗೆ ಒಪ್ಪಿಗೆ ನೀಡದ ಕಾರಣ ಸಭೆ ಕೊನೆಗೊಳಿಸಲಾಯಿತು. ಮಿಲ್ ಮಾಲಕರ ಸಂಘದ ಸಂತೋಷ್ ನಾಯಕ್, ಸಂಘಟನೆಯ ಪ್ರಮುಖರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ಟಿ.ಮಂಜುನಾಥ, ತಿಮ್ಮ ಕಾಂಚನ್ ಇದ್ದರು.

ಹೋರಾಟದ ರೂಪುರೇಷೆ :-
ರೈತರ ಯಾವುದೇ ಬೇಡಿಕೆಗಳಿಗೆ ಮಿಲ್ ಮಾಲಕರು ಸಹಮತ ವ್ಯಕ್ತಪಡಿಸದಿರುವುದು ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿಗಳು, ಎಸ್.ಪಿ. ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದು. ತಾಲೂಕು ಮಟ್ಟ, ಜಿಲ್ಲಾ ಮಟ್ಟದಲ್ಲಿ ರೈತರನ್ನು ಸಂಘಟಿಸಿಕೊಂಡು ಹೋರಾಟ ನಡೆಸುವುದು ಎಂದು ತೀರ್ಮಾನಿಸಲಾಗಿದೆ ರೈತಧ್ವನಿಯ ಟಿ.ಮಂಜುನಾಥ ತಿಳಿಸಿದರು.

ಕೋಟ ಸಹಕಾರಿ ಸಂಘದ ಸಭಾಂಗಣದಲ್ಲಿ ಕೋಟ ರೈತಧ್ವನಿ ಸಂಘಟನೆ ಆಶ್ರಯದಲ್ಲಿ  ಮಿಲ್ ಮಾಲಕರೊಂದಿಗೆ ಸೌಹಾರ್ದಯುತವಾದ ಸಭೆ ಭಾನುವಾರ ನಡೆಯಿತು. ರೈತಧ್ವನಿ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ, ಮಿಲ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ  ತೆಕ್ಕಟ್ಟೆ ರಮೇಶ್ ನಾಯಕ್, ರೈತಧ್ವನಿಯ ಟಿ.ಮಂಜುನಾಥ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *